ಇಂದಿನಿಂದ ರಾತ್ರಿ 9ರವರೆಗೂ ಕೆಎಸ್‌ಆರ್‌ಟಿಸಿ ,ಖಾಸಗಿ ಬಸ್ ಸಂಚಾರ

ಕೋವಿಡ್ ಲಾಕ್‌ಡೌನ್‌ನಿಂದ ಕಳೆದ ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಜುಲೈ 5 ರಿಂದ ಪ್ರಾರಂಭಗೊಂಡಿದೆ.

ಜು.5ರಿಂದ ಅನ್‌ಲಾಕ್ 3.0 ಜಾರಿಯಾಗಲಿದ್ದು ಸ್ಕೂಲ್ ಟ್ರಿಪ್ ಹೊರತುಪಡಿಸಿ ಉಳಿದ ಎಲ್ಲಾ ರೂಟ್‌ಗಳಲ್ಲಿಯೂ ಬಹುತೇಕವಾಗಿ ಬಸ್ ಸಂಚರಿಸಲಿದೆ. ಮೈಸೂರು, ಮಡಿಕೇರಿ, ಕೊಡಗುಗಳಲ್ಲಿ ಲಾಕ್‌ಡೌನ್ ನಿರ್ಬಂಧ ತೆರವುಗೊಳಿಸದ ಹಿನ್ನೆಲೆಯಲ್ಲಿ ಬಸ್ ಸಂಚಾರವಿರುವುದಿಲ್ಲ. ಬೆಂಗಳೂರಿಗೆ ಹಾಸನ ಮೂಲಕ ಮಾತ್ರ ಬಸ್‌ಗಳು ಸಂಚರಿಸಲಿವೆ.

ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಎಲ್ಲಾ ರೂಟ್‌ಗಳಲ್ಲಿಯೂ ಸಾರ್ವಜನಿಕರ ಬೇಡಿಕೆಗೆ ಅಣುಗುಣವಾಗಿ ಬಸ್‌ಗಳು ಓಡಾಟ ನಡೆಸಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ.

ಇಂದಿನಿಂದ ರಾತ್ರಿ 9ರವರೆಗೆ ಖಾಸಗಿ ಬಸ್‌ಗಳ ಓಡಾಟ
ಕೋವಿಡ್ ಎರಡನೇ ಅಲೆ ತಡೆಗಟ್ಟಲು ಹೇರಿದ್ದ ನಿರ್ಬಂಧಗಳ ಪೂರ್ಣ ಪ್ರಮಾಣದ ಅನ್‌ಲಾಕ್-3 ಘೋಷಣೆಯ ಬೆನ್ನಲ್ಲೇ ಜು.5ರಿಂದ 19ರವರೆಗೆ ರಾತ್ರಿ 9 ಗಂಟೆವರೆಗೆ ಖಾಸಗಿ ಬಸ್‌ಗಳ ಓಡಾಟಕ್ಕೂ ಅವಕಾಶ ಸಿಕ್ಕಂತಾಗಿದೆ.
ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲೂ ಜು.5ರಿಂದ ರಾತ್ರಿ 9 ಗಂಟೆಯವರೆಗೆ ಖಾಸಗಿ ಬಸ್‌ಗಳು ಸಾರಿಗೆ ಸೇವೆ ನೀಡಲು ಸಜ್ಜಾಗಿವೆ.

Leave A Reply

Your email address will not be published.