ಕೊಪ್ಪ ಪುಚ್ಚೇರಿ ಇಚ್ಚೂರು ಮಾಪಳ ರಸ್ತೆ | ಅರ್ಧ ಶತಮಾನದ, ಹಿಂದೆ ಎರುತ ಗಾಡಿ ಹೋಗುವ ರಸ್ತೆ ರಿಪೇರಿ ಮಾಡುವ ತಾಕತ್ತು ಯಾರಿಗೂ ಇಲ್ಲವೇ ?!

ಕಡಬ ತಾಲೂಕು ಕೊಪ್ಪ ಪುಚ್ಚೇರಿ ಇಚ್ಚೂರು ಮಾಪಲ ರಸ್ತೆಗೆ ಇದೀಗ ಐದು ಶತಮಾನಗಳ ಇಳಿ ವಯಸ್ಸು. ರಸ್ತೆಯ ಉದ್ದಕ್ಕೂ ಕೆರೆ ಹಳ್ಳ ಕೊಳ್ಳಗಳು ತುಂಬಿ ಹೋಗಿದೆ. ಅಲ್ಲಲ್ಲಿ ಕೆಸರು ತುಂಬಿಕೊಂಡು ಇನ್ನೇನು ಭತ್ತ ನಾಟಿ ಮಾಡಬಹುದು ಅನ್ನುವ ಸ್ಥಿತಿಯಲ್ಲಿ ಹದಗೆಟ್ಟು ಕೂತಿದೆ.

70 ದ್ವಿಚಕ್ರ ವಾಹನ 40 ನಾಲ್ಕು ಚಕ್ರ ವಾಹನ ಸಂಚಾರ ಮಾಡುತ್ತಿದ್ದು, ಸುಮಾರು 30 ಜನ ಕೊಪ್ಪ ಹಾಲಿನ ಡಿಪ್ಪೋ ಗೆ ಹಾಲು ಹಾಕಲು ಈ ರಸ್ತೆಯ ಮೂಲಕವೇ ಹೋಗಿ ಹಾಕಬೇಕು. ಪ್ರತಿ ದಿನ ಒಬ್ಬರಲ್ಲ ಒಬ್ಬರದು ಗಾಡಿ ಸ್ಲಿಪ್ ಆಗಿ ಹಾಲು ಮಾರ್ಗ ದಲ್ಲಿ ಚೆಲ್ಲದೇ ಇರುವುದಿಲ್ಲ. ಅಷ್ಟು ಖರಾಬ್ ಆಗಿದೆ ರಸ್ತೆಯ ಸ್ಥಿತಿ.

ಈ ರಸ್ತೆ ಸುಮಾರು 50 ವರ್ಷಗಳ ಹಿಂದೆ ‘ಪುಚ್ಛೇರಿ ಪಟ್ಲರ್ ಇಪ್ಪುನಗ ಎರುತ ಗಾಡಿ ಪೋಪೆತಿನ ಮಾರ್ಗ. ಇತ್ತೆ ಎರುತ ಗಾಡಿ ಉಜ್ಜಿ, ಒಂಜಿವೇಳೆ ಇತ್ತುಂಡ ಎರುಕುಳು ಪೋವರೆ ಕೇನಯ ‘ ಎನ್ನುವುದು ಈ ರಸ್ತೆಯನ್ನು ತಮ್ಮ ಬಾಲ್ಯದ ದಿನದಿಂದಲೂ ನೋಡಿಕೊಂಡು ಬಂದ ಹಿರಿಯರೊಬ್ಬರ ನೋವಿನ ನುಡಿ.

ನಳಿನ್ ಕುಮಾರ್ ಕಟೀಲ್ ಅವರು ಮೊದಲ ಬಾರಿ ಎಂಪಿ ಆದಾಗ ಈ ರಸ್ತೆಯನ್ನು ಗ್ರಾಮಸಡಕ್ ರಸ್ತೆಯನ್ನಾಗಿಸುವ ಭರವಸೆ ನೀಡಿದ್ದರು. ಆದರೆ ನಂತರ ಏನು ಘಟಿಸಿರಲಿಲ್ಲ.
ಸುಳ್ಯದ ಶಾಸಕ ಅಂಗಾರ ಅವರು ಪ್ರತಿವರ್ಷವೂ ಹೊಚ್ಚ ಹೊಸ ಭರವಸೆಗಳನ್ನು ಕೊಡುತ್ತಲೇ ಇದ್ದಾರೆ. ರಸ್ತೆ ಮಾತ್ರ ಮತ್ತಷ್ಟು ಪರಬ ಆಗುತ್ತಿದೆ.
ಈಗ ಇಲ್ಲಿರುವ 4 ಜನ ಪಂಚಾಯತ್ ಮೆಂಬರ್ ಗಳು ಕೂಡಾ ಬಿಜೆಪಿಯವರು. ಅದೇ ಬಹುಶಃ ರಸ್ತೆ ರಿಪೇರಿಗೆ ಮುಳುವಾಗುತ್ತಿದೆ ಎಂಬ ಪ್ರಶ್ನೆ ಎದ್ದಿದೆ. ತಾಲೂಕಿನಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿದ್ದು ಅಂಗಾರರು ಶಾಸಕರಾಗಿರುವಾಗ, ಸ್ವಪಕ್ಷೀಯ ಪಂಚಾಯತ್ ಮೆಂಬರ್ ಗಳು ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳಲು ಆಗುತ್ತಿಲ್ಲ ಎಂಬ ಅನುಮಾನ ಕಾಡಿದೆ.
ರಸ್ತೆ ರಿಪೇರಿಗೆ ಇಷ್ಟು ವರ್ಷ ಊರಿನ ಜನರು ಶಬರಿಯಂತೆ ಕಾದಿದ್ದಾರೆ. ಇದೀಗ ಕೊನೆಯ ಅಸ್ತ್ರವೆಂಬಂತೆ ಮುಂಬರುವ ತಾಲ್ಲೂಕು ಪಂಚಾಯತ್ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಊರವರು ಬಂದಿದ್ದಾರೆ. ಅಷ್ಟರೊಳಗೆ ಸೊಳ್ಳೆ ಶಾಸಕ ಎಸ್ ಅಂಗಾರ ಅವರು ಎಚ್ಚೆತ್ತುಕೊಂಡು ಈ ಹಳೆಯ ಎತ್ತಿನಗಾಡಿ ಹೋಗುವ ರಸ್ತೆಯನ್ನು ಮೇಲ್ದರ್ಜೆಗೇರಿಸಲು ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.