ಗ್ರಾ.ಪಂ.ನೌಕರರ ಮುಂಬಡ್ತಿಗೆ ತಡೆಯಾಗಿದ್ದ ಆದೇಶ ರದ್ದು | ಗ್ರಾ.ಪಂ.ನೌಕರರು ಹರ್ಷ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಗ್ರಾಮ ಪಂಚಾಯತ್ ನೌಕರರ ಮುಂಬಡ್ತಿಗೆ ತಡೆಯಾಗಿದ್ದ ಆದೇಶವನ್ನು ರದ್ದುಗೊಳಿಸಿದೆ.
6 ಜುಲೈ 2020ರ ನಂತರ ಗ್ರಾಮ ಪಂಚಾಯಿತಿಗಳ ಬಿಲ್ ಕಲೆಕ್ಟರ್/ಗುಮಾಸ್ತ/ಬೆರಳಚ್ಚುಗಾರರ(ಹುದ್ದೆ ಪದನಾಮ ಬದಲಾವಣೆಯಾಗಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್) ಹುದ್ದೆಯಿಂದ ಗ್ರೇಡ್ -2ಗ್ರಾಮ ಪಂಚಾಯಿತಿ ಕಾರ್ಯದರ್ಶಿ/ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಬಾರದೆಂದು ಸರ್ಕಾರದ ಸುತ್ತೋಲೆ ಸಂಖ್ಯೆ ಆಇ :03:ಬಿಇಎಂ:2020, 7ಜುಲೈ 2020ರಂತೆ ತಿಳಿಸಲಾಗಿತ್ತು.
ಆರ್ಥಿಕ ಇಲಾಖೆಯು ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಗ್ರೇಡ್-2 ಗ್ರಾ.ಪಂ. ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಅವಶ್ಯಕತೆಗೆ ಅನುಗುಣವಾಗಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಂದ ಆಯ್ಕೆ ಮೂಲಕ ನಿಯಮಾನುಸಾರ ತುಂಬಲು ಜುಲೈ 6/2020ರ ಸುತ್ತೋಲೆಯಿಂದ ವಿನಾಯತಿ ನೀಡಿದೆ.
ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ ಗ್ರೇಡ್-2 ಗ್ರಾಮ ಪಂಚಾಯಿತಿ ಕಾರ್ಯದರ್ಶಿ/ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಬಿಲ್ ಕಲೆಕ್ಟರ್/ಗುಮಾಸ್ತ /ಬೆರಳಚ್ಚುಗಾರರ (ಹುದ್ದೆ ಪದನಾಮ ಬದಲಾವಣೆಯಾಗಿರುವ ಕ್ಲರ್ಕ್ ಕಮ್ ಡಾಟಾ ಎಂಟ್ರಿ ಆಪರೇಟರ್ )ಹುದ್ದೆಯಿಂದ ಆಯ್ಕೆ ಮೂಲಕ ನೇರ ನೇಮಕಾತಿ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಜಿ.ಪಂ.) ಬಿ ನವೀನ್ ಕುಮಾರ್ ಅವರು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ265 ವೆಚ್ಚ 6/2021 ಇ ದಿನಾಂಕ 24-06-2021 ರಂದು ನೀಡಿರುವ ಸಹಮತಿಯನ್ವಯ ಸರ್ಕಾರದ ಪರವಾಗಿ ಆದೇಶವನ್ನು ಹೊರಡಿಸಿರುತ್ತಾರೆ.