ನಾಳೆಯಿಂದ ಕುಕ್ಕೆಯಲ್ಲಿ ದೇವರ ದರ್ಶನಕ್ಕೆ ಅವಕಾಶ..ಸೇವೆಗಳು ಎಂದಿನಂತೆ ಇವೆಯೇ? ದರ್ಶನಕ್ಕೆ ಕಲ್ಪಿಸಿದ ಸಮಯವೆಷ್ಟು?..ದೇವಾಲಯದ ನಿಯಮಗಳು ಹೀಗಿವೆ!

ಜುಲೈ,4 : ಅನ್ ಲಾಕ್ 3.0 ಘೋಷಣೆ ಆಗಿದ್ದು, ಅದರಲ್ಲಿ  ದೇವಾಲಯಗಳಲ್ಲಿ ಮತ್ತು ಚರ್ಚ್ ಮಸೀದಿ ಭಕ್ತಾದಿಗಳ ಪ್ರವೇಶಕ್ಕೆ ಅನುಮತಿ ನೀಡಿದೆ ಸರ್ಕಾರ.

ಸರಕಾರ ಈ ಆದೇಶ ಹೊರಡಿಸಿದ್ದರು ಕೂಡಾ ಇಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದಿನಾಂಕ 05-07-2021 ರಿಂದ ಸರಕಾರದಿಂದ ಮುಂದಿನ ಬರುವವರೆಗೆ ಸಾರ್ವಜನಿಕ ಭಕ್ತಾದಿಗಳಿಗೆ ಶ್ರೀ ದೇವರ ದರ್ಶನಕ್ಕೆ ಸೀಮಿತ ದರ್ಶನ ಮತ್ತು ಸೇವೆಗೆ ಅವಕಾಶ ಕಲ್ಪಿಸಲಾಗಿದೆ.


ದೇವಳದಲ್ಲಿ ಶ್ರೀ ದೇವರ ದರ್ಶನದ ಸಮಯವನ್ನು ಬೆಳಗ್ಗೆ ಗಂಟೆ 7.00 ರಿಂದ ಮಧ್ಯಾಹ್ನ ಗಂಟೆ 11.30 ರ ವರೆಗೆ ನಿಗದಿ ಮಾಡಲಾಗಿದ್ದು, ಗಂಟೆ 12.15 ರಿಂದ 1.30 ರ ವರೆಗೆ ಮಧ್ಯಾಹ್ನದ ದರ್ಶನಕ್ಕೆ ಹಾಗೂ ಅಪರಾಹ್ನ ಗಂಟೆ 2.30 ರಿಂದ ಸಾಯಂಕಾಲ ಗಂಟೆ 6.30 ರ ವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಭಕ್ತಾದಿಗಳಿಗೆ ಶ್ರೀ ದೇವಳದಲ್ಲಿ ಪ್ರಸ್ತುತ ಮಂಗಳಾರತಿ ಸೇವೆಗೆ ಮಾತ್ರ ಅವಕಾಶ ನೀಡಲಾಗಿದ್ದು, ಉಳಿದಂತೆ ಯಾವ ಸೇವೆಗಳು ಕೂಡಾ ಇರುವುದಿಲ್ಲ.ಮಂಗಳಾರತಿ ಮಾಡಲಿಚ್ಚಿಸುವ ಭಕ್ತಾದಿಗಳು ಶ್ರೀ ದೇವಳದ ಸೇವಾ ಕೌಂಟರ್‌ಗಳಲ್ಲಿ ರೂ. 5ರ ಸೇವಾ ಶುಲ್ಕ ಪಾವತಿಸಿ ರಶೀದಿಗಳನ್ನು ಪಡೆದುಕೊಂಡು ಕೋವಿಡ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.
ಎಂದಿನಂತೆ ಅನ್ನಪ್ರಸಾದ ಸೇವೆಯು ಕೂಡಾ ಇರುವುದಿಲ್ಲ

ದೇವಾಲಯದಲ್ಲಿ ಯಾವುದೇ ಪ್ರಸಾದಗಳ ವಿತರಣೆಯು ಕೂಡಾ ಸದ್ಯಕ್ಕೆ ಇಲ್ಲ,ಹಾಗೂ ಹೊರ ಜಿಲ್ಲೆಗಳಿಂದ ಬರುವ ಭಕ್ತ ಸಮೂಹಕ್ಕೆ ಕ್ಷೇತ್ರದಲ್ಲಿ ತಂಗಲು ಶ್ರೀ ದೇವಳದ ವತಿಯಿಂದ ಇರುವ ಯಾವುದೇ ವಸತಿ ಸೌಲಭ್ಯದ ಅವಕಾಶಗಳಿರುವುದಿಲ್ಲ

ಕುಮಾರಧಾರ ಸ್ನಾನಘಟ್ಟಕ್ಕೂ ಭಕ್ತರ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಕೋರಲಾಗಿದೆ.

ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಲ್ಲಲು ಸಾಮಾಜಿಕ ಅಂತರ ಪಾಲಿಸಲು ಒಂದೊಂದು ಮಾರ್ಕ್ ಮಾಡಲಾಗಿದ್ದು, ಭಕ್ತಾದಿಗಳು ಸಹಕರಿಸಬೇಕಾಗಿದೆ.

ಈ ಎಲ್ಲಾ ಮುನ್ನೆಚ್ಚರಿಕೆಯ ಕ್ರಮ, ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Leave A Reply

Your email address will not be published.