ಗುತ್ತಿಗಾರು ಚರ್ಚಿನ ವತಿಯಿಂದ ಆರೋಗ್ಯ ರಕ್ಷಾ ಪರಿಕರಗಳ ವಿತರಣೆ
ಗುತ್ತಿಗಾರು : ಗ್ರಾಮ ಪಂಚಾಯಿತಿಗೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆರೋಗ್ಯ ರಕ್ಷಾ ಪರಿಕರಗಳನ್ನು ವಿತರಿಸಲಾಯಿತು.
ಗ್ರಾಮ ಪಂಚಾಯಿತಿ ಸಿಬಂದಿ ಗಳಿಗೆ ಮತ್ತು ಅಲ್ಲಿಗೆ ಬರುವ ಸಾರ್ವಜನಿಕರ ಅನುಕೂಲತೇಗಾಗಿ ಸ್ಯಾನಿಟೈಸರ್, ಮಾಸ್ಕ್, ಒಳಗೊಂಡ ಆರೋಗ್ಯ ರಕ್ಷಾ ಪರಿಕರಗಳನ್ನು ಗ್ರಾಮ ಪಂಚಾಯತ್ ನಲ್ಲಿ ಪಿಡಿಒ ಅವರು ಸ್ವೀಕರಿಸಿದರು. ಚರ್ಚ್ ನ ಈ ಸಾಮಾಜಿಕ ಕಾರ್ಯಕ್ಕೆ ಅವರು ಧನ್ಯವಾದಗಳು ವನ್ನು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ, ಗುತ್ತಿಗಾರು ಇಲ್ಲಿನ ಸಿಬ್ಬಂದಿಗಳಿಗೂ ಆರೋಗ್ಯ ರಕ್ಷಾ ಪರಿಕರಗಳನ್ನು ನೀಡಿ ಸಾಮಾಜಿಕ ಕಾಳಜಿ ಮೆರೆದರು. ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರ ಅವರನ್ನು ವೈದ್ಯ ದಿನಾಚರಣೆಯ ಭಾಗವಾಗಿ ಅಭಿನಂದಿಸಿ ಮಾತನಾಡಿದ ಗುತ್ತಿಗಾರು ಚರ್ಚಿನ ಧರ್ಮಗುರು ಫಾ ಆದರ್ಶ್ ಜೋಸೆಫ್ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಕೋವಿಡ್ ಹೆಮ್ಮಾರಿಯ ಸಮಯದಲ್ಲಿ ತಮ್ಮ ಜೀವ ವನ್ನು ಲೆಕ್ಕಿಸದೆ ಸಮಾಜದ ಹಿತಕ್ಕಾಗಿ ದುಡಿಯುವ ಅವರ ಸೇವೆಯನ್ನು ಶ್ಲಾಘಸಿದರು ಮತ್ತು ಸಾರ್ವಜನಿಕರು ಕೋವಿಡ್ ಮಾರ್ಗ ಸೂಚಿಯನ್ನು ಸರಿಯಾಗಿ ಪಾಲಿಸಿದರೆ ಲಾಕ್ ಡೌನ್ ಇಲ್ಲದೆ ಕೊರೋನ ನಿಯಂತ್ರಿಸಲು ಸಾಧ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚರ್ಚ್ ನ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಜೋರ್ಜ್, ಶ್ರೀ ಬೋಬಿ, ಶ್ರೀ ಲಿಜೊ, ಶ್ರೀ ಬಿಟ್ಟಿ ಉಪಸ್ಥಿತರಿದ್ದರು. ಡಾ ಚೈತ್ರ ಗುತ್ತಿಗಾರು ಚರ್ಚಿನ ಸಾಮಾಜಿಕ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.