ಪ.ಜಾ /ಪ.ಪಂಗಡ ಉಪಯೋಜನೆಯಯ ಕ್ರಿಯಾಯೋಜನೆಗೆ ಅಭಿವೃದ್ಧಿ ಪರಿಷತ್ ಅನುಮೋದನೆ | ಈ ವರ್ಗದ ಜನರಿಗೆ 26 ಸಾವಿರ ಕೋಟಿಯ ಕ್ರಿಯಾಯೋಜನೆ

ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡ ಸಮುದಾಯದ ಜನರಿಗೆ ರಾಜ್ಯ ಸರಕಾರ ಸಿಹಿ ಸುದ್ದಿ ನೀಡಿದೆ.
ಪ.ಜಾತಿ,ಪ.ಪಂಗಡ ಉಪಯೋಜನೆ ಅಡಿಯಲ್ಲಿ 2021-22ನೇ ಸಾಲಿನಲ್ಲಿ 26,005 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗೆ ಸಿಎಂ ನೇತೃತ್ವದ ರಾಜ್ಯ ಅಭಿವೃದ್ಧಿ ಪರಿಷತ್ ಅನುಮೋದನೆ ನೀಡಿದೆ.

ಎಸ್‌ಸಿಎಸ್‌ಪಿ ಅಡಿ 18,331,54 ಕೋಟಿ ರೂ ಹಾಗೂ ಎಸ್‌ಟಿಎಸ್‌ಪಿ ಅಡಿ 7,673,47 ಕೋಟಿ ರೂ ವೆಚ್ಚದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

2021-22ನೇ ಸಾಲಿನ 35 ಅಭಿವೃದ್ಧಿ ಇಲಾಖೆಗಳ ಮೂಲಕ ಅನುದಾನ ಹಂಚಿಕೆ ಮಾಡಲಾಗುವುದು. ಅನುದಾನದ 95% ಅನ್ನು ಸರ್ಕಾರ ಸೂಕ್ತ ರೀತಿ ವಿನಿಯೋಗಿಸಿಕೊಳ್ಳಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಶೌಚಾಲಯ, ಸ್ನಾನ ಗೃಹಗಳ ನಿರ್ಮಾಣಕ್ಕಾಗಿ ಎಸ್‌ಸಿ ಎಸ್‌ಟಿ ಫಲಾನುಭವಿಗಳಿಗೆ ನೀಡಲಾಗುವ ಸಬ್ಸಿಡಿ ಮೊತ್ತವನ್ನು ತಲಾ 15 ಸಾವಿರ ರೂಪಾಯಿಯಿಂದ ತಲಾ 20,000 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.

Leave A Reply

Your email address will not be published.