ಸೆಕ್ಸ್ ಮಾಡುವ ಸಂದರ್ಭ ಶಿಶ್ನ ಮುರಿದುಕೊಂಡ ಆಸಾಮಿ | ಲೈಫ್ ನಲ್ಲಿ ಯಾವುದಕ್ಕೂ ಗ್ಯಾರಂಟಿ ಇಲ್ಲ ಬಾಸ್ !!

ಲಂಡನ್ : ಸೆಕ್ಸ್ ಮಾಡುವ ವೇಳೆ 40 ವರ್ಷದ
ವ್ಯಕ್ತಿಯ ಶಿಶ್ನ ಲಂಬವಾಗಿ ಮುರಿದ ವಿಚಿತ್ರ ಪ್ರಕರಣ ನಡೆದಿದೆ. ಈ ರೀತಿ ಶಿಶ್ನವು ಲಂಬವಾಗಿ ಮುರಿದಿರುವುದು ಜಗತ್ತಿನಲ್ಲಿಯೇ ಇದು ಮೊದಲ ಪ್ರಕರಣ ಎಂದು ಯುನೈಟೆಡ್ ಕಿಂಗ್ಡಮ್ ನ ವೈದ್ಯರು ತಿಳಿಸಿದ್ದಾರೆ.

 

ಇಷ್ಟರ ತನಕ ಜನಪದದಲ್ಲಿ ಒಂದು ಮಾತು ಪ್ರಚಲಿತದಲ್ಲಿತ್ತು ‘……..ಲ್ಲ, ಮುರಿಯಲ್ಲ ” ಎಂದು. ಆದರೆ ಈಗ ಸಾಕ್ಷಾತ್ ಅದು, ಅನೂಹ್ಯ ರೀತಿಯಲ್ಲಿ ಉದ್ದುದ್ದಕ್ಕೆ ಮುರಿದು ಹೋಗಿದೆ ! ಗಾದೆ ಮಾತು ಸುಳ್ಳಾಗಿದೆ.

ಈ 40 ವರ್ಷದ ಶಿಶ್ನ ಮುರಿದುಕೊಳ್ಳುವಶ್ಟು ಜೋರಾಗಿ ಮಾಡುತ್ತಿದ್ದ ವ್ಯಕ್ತಿ ತನ್ನ ಲಿವ್ ಇನ್ ಸಂಗಾತಿ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಈ ವೇಳೆ ಅವಘಡ ಸಂಭವಿಸಿದೆ. ಗುದದ್ವಾರ ಮತ್ತು ಜನನಾಂಗದ ನಡುವಿನ ಪೆರಿನಿಯಮ್ ಏರಿಯಾದಲ್ಲಿ ಮುರಿತವಾಗಿದೆ. ಸಂಗಾತಿಗಳು ಯಾವ ಶೈಲಿಯಲ್ಲಿ ಇದ್ದರು ಎನ್ನುವುದನ್ನು ವೈದ್ಯರು ತಿಳಿಸಿಲ್ಲ. ಶ್ವಾನ ಶೈಲಿ ಮತ್ತು ಮ್ಯಾನ್ ಆನ್ ಟಾಪ್ ಶೈಲಿಯಲ್ಲಿ ಅವರು ಸೆಕ್ಸ್ ಮಾಡುತ್ತಿರಬಹುದು ಎಂದು ಊಹಿಸಲಾಗಿದೆ.

ಇನ್ನು ಈ ಹಿಂದೆ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಶಿಶ್ನವು ಅಡ್ಡಲಾಗಿ ಮುರಿದಿತ್ತು. ಅಡ್ಡಕ್ಕೆ ಮುರಿದ ಶಿಶ್ನದ ಪ್ರಕರಣಗಳು ಹಲವು ಕಡೆ ನಡೆದಿದೆ.
ಆದರೆ ಇದೇ ಮೊದಲ ಸಾರಿ ಲಂಬವಾಗಿ ಮುರಿದಿದ್ದು ಅಚ್ಚರಿ ಮೂಡಿಸಿದೆ. ಬಹುಶಃ ಆ ವ್ಯಕ್ತಿ ಅದ್ಯಾವ ಫೋರ್ಸ್ ನಿಂದ ರಫ್ ಸೆಕ್ಸ್ ಮಾಡುತ್ತಿದ್ದಿರಬಹುದು ಎಂದು ವೈದ್ಯರೇ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಆರು ತಿಂಗಳು ಚಿಕಿತ್ಸೆ ಪಡೆದುಕೊಂಡರೆ ಮೊದಲಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.

ಶಿಶ್ನ ಮುರಿತ ಸಂದರ್ಭದಲ್ಲಿ ಸಾವೇ ಸಂಭವಿಸುವ ಸಂಭವನೀಯತೆ ಇರುತ್ತದಂತೆ. ಅತಿಯಾದ ಹಸ್ತಮೈಥುನ, ಅಡ್ಡಾದಿಡ್ಡಿ ಮಲಗುವುದು, ತಮಗೆ ಹೊಂದದ ಒಳಉಡುಪು ಬಳಕೆ, ಬೈಕ್ ಓಡಿಸುವುದು, ಆಟೋಟಗಳು ಮತ್ತು ಶಿಶ್ನವನ್ನು ಬಲವಂತವಾಗಿ ಬಾಗಿಸುವ ಅಭ್ಯಾಸ ಸಹ ಇಂಥ ಅವಘಡಕ್ಕೆ ಕಾರಣವಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೆ ಸೆಕ್ಸ್ ಮಾಡುತ್ತಿರುವಂತೆ, ಸಡನ್ ಆಗಿ ಆಕೆಯ ಒಳಗಿನಿಂದ ಹೊರಕ್ಕೆಳೆದರೆ, ಆಗ ಶಿಶ್ನ ಇನ್ನೂ ಎದ್ದೇ ಇದ್ದರೆ, ಆಗ ಶಿಶ್ನ ಕೆಳಕ್ಕೆ ಬಾಗಿದಂತಾಗಿ ಮುರಿದುಹೋಗಬಹುದು. ಇದು ವೈದ್ಯರ ಹೇಳಿಕೆ. ಬದುಕಲ್ಲಿ ಯಾವುದಕ್ಕೂ ಗ್ಯಾರಂಟಿ ವಾರಂಟಿ ಇಲ್ಲ ಬಾಸ್ !!

Leave A Reply

Your email address will not be published.