ಸಾಮಾಜಿಕ ಜಾಲತಾಣದಲ್ಲಿ ಮಗಳ ಅಶ್ಲೀಲ ಫೋಟೋ ಹರಿಯಬಿಟ್ಟ ಪ್ರಕರಣ..ಮಾಜಿ ಟಿಕ್ ಟಾಕ್ ಸ್ಟಾರ್ ಅಮೃತ ಪ್ರಿಯ ಸಹಿತ ಆಕೆಯ ಪ್ರಿಯಕರ ಬಂಧನ

ತನ್ನ 33 ವರ್ಷದ ಮಗಳ ಅಶ್ಲೀಲ ಫೋಟೋ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದ ಮೇಲೆ ಮಾಜಿ ಟಿಕ್​ಟಾಕ್​ ಸ್ಟಾರ್ ಹಾಗೂ ಆಕೆಯ ಬಾಯ್ ಫ್ರೆಂಡ್ ನ್ನು ಅಂಬತ್ತೂರು ಪೊಲೀಸರು ಬಂಧಿಸಿದ್ದಾರೆ. ಮಾಜಿ ಟಿಕ್ ಟಾಕ್ ಸ್ಟಾರ್ ಅಮೃತ ಪ್ರಿಯ ಹಾಗೂ ಆಕೆಯ 52 ವರ್ಷದ ಗೆಳೆಯ ರಾಜೇಶ್ ವಿರುದ್ಧ ಆಕೆಯ ಮಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಟಿಕ್​​ಟಾಕ್​​ ಮಾಜಿ ಸ್ಟಾರ್​​ ಅಮೃತ ಪ್ರಿಯ 2 ವರ್ಷಗಳ ಹಿಂದೆ ಪತಿಯನ್ನು ತೊರೆದು ರಾಜೇಶ್​​ ಜೊತೆ ವಾಸಿಸುತ್ತಿದ್ದಾರೆ.ಈ ನಡುವೆ ಪತಿಯಿಂದ ದೂರವಾಗಿದ್ದ ಮಗಳು ಸಹ ಅಮ್ಮನೊಂದಿಗೆ ವಾಸವಾಗಿದ್ದರು. ಈ ನಡುವೆ ಅಮೃತ ಪ್ರಿಯರ ಪ್ರಿಯಕರ ರಾಜೇಶನ ಕಣ್ಣು ಮಗಳ ಮೇಲೆ ಬಿದ್ದುದ್ದು, ಮನೆಯಲ್ಲಿ ಮಗಳಿಗೆ ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದ. 33 ವರ್ಷದ ಮಗಳು ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ಕಿರುಕುಳ ಮುಂದುವರೆಸಿದ್ದ. ನಿನ್ನ ತಾಯಿಗೆ ವಯಸ್ಸಾಗಿದೆ, ಹೀಗಾಗಿ ನೀನು ನನ್ನ ಜೊತೆ ಸಹಕರಿಸು. ಆಗ ನಾವೆಲ್ಲಾ ಸಂತೋಷವಾಗಿ ಬಾಳಬಹುದು ಎನ್ನುತ್ತಿದ್ದ ಎಂದು ಮಗಳು ಆರೋಪಿಸಿದ್ದಾರೆ.

ತಾಯಿಯ ಪ್ರಿಯಕರನ ಕಿರುಕುಳ ತಾಳಲಾರದೆ ಮಗಳು ಠಾಣೆ ಮೆಟ್ಟಿಲೇರಿದ್ದಳು. ಪೊಲೀಸ್​ ಠಾಣೆಯಲ್ಲಿ ರಾಜೇಶ್​ ಕ್ಷಮೆ ಕೇಳಿದ ಬಳಿಕ ಮಗಳು ದೂರು ವಾಪಸ್​​ ಪಡೆದಿದ್ದರು. ಈ ಘಟನೆಯಿಂದ ರೊಚ್ಚಿಗೆದ್ದಿದ್ದ, ದ್ವೇಷ ಸಾಧಿಸಲು ರಾಜೇಶ್​​​,  ಅಮೃತ ಪ್ರಿಯ ಅವರ ಮಗಳ ಅಶ್ಲೀಲ ಫೋಟೋಗಳನ್ನು ಹರಿಬಿಡಲು ಶುರುಮಾಡಿದ್ದ. ಫೋಟೋಗಳನ್ನು ತಿರುಚಿ ಅಪ್​ಲೋಡ್​ ಮಾಡಿ ಮಾನಹಾನಿ ಮಾಡಿದ್ದಾನೆ. ಇದಕ್ಕೆ ತಾಯಿ ಅಮೃತ ಪ್ರಿಯ ಕೂಡ ಸಾಥ್​ ನೀಡಿದ್ದಾರೆ.

ಒಂದು ವಾರದಿಂದ ತನ್ನ ಫೋಟೋಗಳನ್ನು ಸಾಮಾಜಿಕ ಹರಿಬಿಡುತ್ತಿರುವುದನ್ನು ತಿಳಿದ ಆಕೆಯ ಮಗಳು ಮತ್ತೆ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಾಯಿ ಅಮೃತ ಪ್ರಿಯ ಹಾಗೂ ಆಕೆಯ ಬಾಯ್​​ಫ್ರೆಂಡ್ ರಾಜೇಶ್​​ನ ಬಂಧಿಸಿದ್ದಾರೆ.ತಾಯಿಯೇ ತನ್ನ ಸ್ವಾರ್ಥಕ್ಕಾಗಿ ಮಗಳನ್ನು ಮಾರಲು ಹೊರಟ ನಿದರ್ಶನಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ, ಇಂತಹ ಘಟನೆಗಳು ಮರುಕಳಿಸದಿರಲಿ, ಆರೋಪಿಗಳು ಕಠಿಣ ಶಿಕ್ಷೆಗೆ ಗುರಿಯಾಗಲಿ.

Leave A Reply

Your email address will not be published.