ಸುಬ್ರಹ್ಮಣ್ಯ : ಹೂಳು ತೆರವು ನೆಪದಲ್ಲಿ ಅಕ್ರಮ ಮರಳುಗಾರಿಕೆ,ರಾತ್ರಿಯಾದರೂ ನಿಂತಿಲ್ಲ ಮರಳುಗಾರಿಕೆ

ಸುಬ್ರಹ್ಮಣ್ಯ : ಕುಮಾರಧಾರನದಿ ತಟದಲ್ಲಿ ಹೂಳು ತೆರವು ಮಾಡುವ ಅನುಮತಿ ಪಡೆದುಕೊಂಡು ಅಕ್ರಮ ಮರಳುಗಾರಿಕೆ ನಡೆಸುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ವ್ಯಕ್ತವಾಗಿದೆ.

ಹೂಳು ತೆರವು ಮಾಡಲು ಸಂಜೆ 6 ಗಂಟೆಯವರೆಗೆ ಅನುಮತಿ ನೀಡಲಾಗಿದ್ದು,ರಾತ್ರಿಯಾದರೂ ಮರಳುಗಾರಿಕೆ ನಡೆಯುತ್ತಿದೆ.ಹೂಳು ತೆಗೆದರೆ ಅದನ್ನು ಯಾರ್ಡ್‌ನಲ್ಲಿ ಸಂಗ್ರಹಿಸಬೇಕು.ಅದನ್ನು ಗಣಿ ಇಲಾಖೆಯ ಮೂಲಕ ಏಲಂ ಮಾಡಲಾಗುವುದು ನಿಯಮ.

ಆದರೆ ಸುಬ್ರಹ್ಮಣ್ಯದಲ್ಲಿ ಹೂಳು ತೆರವು ಮಾಡುವ ಅನುಮತಿಯಲ್ಲಿ ಅನಧಿಕೃತ ಮರಳುಗಾರಿಕೆ ನಡೆಯುತ್ತಿದೆ.ನದಿಯಿಂದ ತೆಗೆದ ಹೂಳನ್ನು ಸಂಗ್ರಹಿಸಬೇಕು.ಆದರೆ ಸುಬ್ರಹ್ಮಣ್ಯದಲ್ಲಿ ತೆಗೆದ ಮರಳನ್ನು ಲಾರಿಗಳಲ್ಲಿ ಸಾಗಾಟ ನಡೆಸಲಾಗುತ್ತಿದೆ ಎನ್ನಲಾಗಿದೆ.

Leave A Reply

Your email address will not be published.