ಬೆಳಗಾವಿ :ಭಾರತದ ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿದ್ದ ಆಫ್ರಿಕಾ ಮೂಲದ ಮೂವರ ಬಂಧನ

ಬೆಳಗಾವಿ : ಆಫ್ರಿಕಾದಲ್ಲಿಯೇ ಕುಳಿತು ಭಾರತದ ಬ್ಯಾಂಕ್​ ಖಾತೆಗಳನ್ನು ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿದ್ದ ಮೂವರು ಖದೀಮರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಆನ್‌ಲೈನ್ ಮೂಲಕ ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿ ಹಣ ಎಗರಿಸುತ್ತಿದ್ದ ಮೂವರನ್ನು ಬಂಧಿಸಿದ್ದು, ಹ್ಯಾಕಿಂಗ್ ಜಾಲಕ್ಕೆ ಸಂಪೂರ್ಣ ಸೂತ್ರಧಾರನಾದ ಆಫ್ರಿಕಾ ಮೂಲದ ಟೋನಿ ಎಂಬ ವ್ಯಕ್ತಿಯು ಬ್ಯಾಂಕ್ ಎಕೌಂಟ್ ಹ್ಯಾಕ್ ಮಾಡುತ್ತಿದ್ದ ಹಾಗೂ ಇಂದ್ರೇಶ ಪಾಂಡೆ ಹಾಗೂ ಅಭಿಜಿತ ಮಿಶ್ರಾ ನಕಲಿ ಅಕೌಂಟ್ ಕ್ರಿಯೇಟ್ ಮಾಡುತ್ತಿದ್ದರು. ಅಕೌಂಟ್ ಹ್ಯಾಕ್ ಮಾಡಿ ಎಗರಿಸಿದ್ದ ದುಡ್ಡುನ್ನು ನಕಲಿ ಅಕೌಂಟ್‌ಗೆ ಟ್ರಾನ್ಸಫರ್ ಮಾಡುತ್ತಿದ್ದರು ಎಂದು ಬೆಳಗಾವಿ ಎಸ್ಪಿ ಲಕ್ಷ್ಮಣ ‌ನಿಂಬರಗಿ ಮಾಹಿತಿ ನೀಡಿದ್ದು, ಮೊಬೈಲ್ ಫೋನ್‌ಗಳಿಗೆ ಬರುವ ಮೆಸೇಜ್, ಕಾಲ್ಸ್‌ಗಳಿಗೆ ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ ನೀಡದಂತೆ ಎಸ್ಪಿ ಎಚ್ಚರಿಕೆ ನೀಡಿದ್ದಾರೆ.

ಖದೀಮರು ಭಾರತದಲ್ಲಿ ಅನೇಕ ಆನ್ಲೈನ್ ವಂಚನೆ ಮಾಡಿದ್ದು, ಆನ್​ಲೈನ್​ ವಂಚನೆ ಪ್ರಕರಣ ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಅರಿಹಂತ ಸಂಸ್ಥೆ ಜನರಲ್ ಮ್ಯಾನೇಜರ್ ಅಶೋಕ್ ಬಂಕಾಪುರೆ ಅವರ ಐಸಿಐಸಿಐ ಬ್ಯಾಂಕ್ ಅಕೌಂಟ್ ನ್ನು ಎರಡು ಬಾರಿ ಹ್ಯಾಕ್ ಮಾಡಿ‌ದ್ದ ಖದೀಮರು 94 ಲಕ್ಷ ರೂ. ಗಳನ್ನು ಲೂಟಿ ಮಾಡಿದ್ದರು.

ಬ್ಯಾಂಕ್ ಅಕೌಂಟ್ ಹ್ಯಾಕ್ ಮಾಡಿದ್ದ ಮೂವರು ಆರೋಪಿಗಳಾದ ಮುಂಬೈನಲ್ಲಿ ವಾಸವಿದ್ದ ನೈಜಿರಿಯಾ ಮೂಲದ ಬುಜುಕಾ ಪೀಟರ್ ಚಿಗೋಜಿ( 40), ಇಂದ್ರೇಶ್ ಹರಿಶಕಂರ್ ಪಾಂಡೆ ಮತ್ತು ಅಭಿಜಿತ್ ಘನಶ್ಯಾಮ್ ಮಿಶ್ರಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

Leave A Reply

Your email address will not be published.