ಸದ್ಯದಲ್ಲೇ ಬರಲಿದೆ 12 ವರ್ಷ ಮೇಲ್ಪಟ್ಟವರಿಗೆ “ಸೂಜಿ ಮುಕ್ತ” ಕೊರೋನ ಲಸಿಕೆ | ಭಾರತದ ಐದನೇ ಲಸಿಕೆಯಾಗಿ ಲಗ್ಗೆ ಇಡುತ್ತಿದೆ ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ
ಭಾರತದಲ್ಲಿ ಶೀಘ್ರದಲ್ಲೇ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೊರೋನಾ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಬೆಂಗಳೂರು ಮೂಲದ ಔಷಧೀಯ ಕಂಪನಿ ಜೈಡಸ್ ಕ್ಯಾಡಿಲಾ ತನ್ನ ಲಸಿಕೆಯನ್ನು 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ತುರ್ತು ಬಳಕೆಗಾಗಿ ಅನುಮತಿ ನೀಡುವಂತೆ ಕೋರಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಅರ್ಜಿ ಸಲ್ಲಿಸಿದೆ.
ಜೈಡಸ್ ಕ್ಯಾಡಿಲಾ ತನ್ನ ZyCoV-D 3-ಡೋಸ್ ಕೋವಿಡ್ ಶಾಟ್ಗಾಗಿ ತುರ್ತು ಬಳಕೆಯ ಅನುಮೋದನೆಯನ್ನು ಕೋರಿದ್ದಾರೆ. ಅದು “ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆ” ಆಗಿದೆ. ಶಾಟ್ “ಸೂಜಿ ಮುಕ್ತ” ಮತ್ತು ಮಕ್ಕಳಿಗೆ ಸುರಕ್ಷಿತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಕಂಪನಿಯು ವಾರ್ಷಿಕವಾಗಿ 120 ಮಿಲಿಯನ್ ಡೋಸ್ ಶಾಟ್ ತಯಾರಿಸುವ ಗುರಿ ಹೊಂದಿದ್ದು,
ಜೈಕೋವ್-ಡಿಗೆ ಅನುಮೋದನೆ ಸಿಕ್ಕರೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್, ಭಾರತ್ ಬಯೋಟೆಕ್ನ ಕೊವಾಕ್ಸಿನ್ (Covaxin), ರಷ್ಯಾದ ಸ್ಪುಟ್ನಿಕ್ ವಿ ಮತ್ತು ಯುಎಸ್ ನಿರ್ಮಿತ ಮಾಡರ್ನಾ ನಂತರ ಭಾರತದಲ್ಲಿ ಬಳಕೆಗೆ ಲಭ್ಯವಾಗುವ ಐದನೇ ಲಸಿಕೆ ಇದಾಗಲಿದೆ.