ಊಟ ಮಾಡಿಸುವಾಗ ಮಗು ಹಠ ಮಾಡಿದ್ದೇ ತಪ್ಪಾಯ್ತು | ಹಠ ಮಾಡುತ್ತಿದ್ದ ಮಗುವನ್ನು ಆಟ ಆಡಿಸಲೆಂದು ಹೊರ ತಂದಾಗ ಆಕಾಶದಲ್ಲಿ ಹೊಂಚಿ ಕುಳಿತಿತ್ತು ಸಾವು !!
ಊಟ ಮಾಡುವುದಿಲ್ಲ ಎಂದು ಮಗು ಹಠ ಮಾಡಿದ್ದೇ ತಪ್ಪಾಗಿ, ಅದೇ ಹಠವೇ ಮಗುವಿನ ದುರಂತ ಸಾವಿಗೆ ಕಾರಣವಾದ ಧಾರುಣ ಘಟನೆ ನಡೆದಿದೆ.
ಅಲ್ಲಿ ಮಗು ಊಟ ಮಾಡಲು ಹಠ ಮಾಡುತ್ತಿತ್ತು. ಏನು ಮಾಡಿದರೂ ಮಗು ಊಟ ಬಾಯೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಏನೇನೋ ಆಟ ಆಡಿಸುತ್ತ ಊಟ ಮಾಡಿಸಲು ಪೋಷಕರು ಪ್ರಯತ್ನಿಸಿದ್ದಾರೆ. ಆದರೆ ಮಗು ತನ್ನ ಹಠ ಬಿಟ್ಟಿಲ್ಲ. ಕೊನೆಯ ಪ್ರಯತ್ನವೆಂಬಂತೆ ಮಗುವನ್ನು ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ. ಹಾಗೆ ಅಂಗಳಕ್ಕೆ ಕರೆದುಕೊಂಡು ಬಂದು, ಮಗುವಿಗೆ ಊಟ ಮಾಡಿಸುವ ವೇಳೆ ತಲೆಯ ಮೇಲೆ ತೆಂಗಿನ ಕಾಯಿ ಬಿದ್ದು 11 ತಿಂಗಳ ಮಗು ಸಾವಿಗೀಡಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಇಂತಹ ಅನಾಹುತ ಸಂಭವಿಸಿದೆ. ಹಿರೇಕೆರೂರು ತಾಲೂಕಿನ ಹಂಸಬಾವಿಯಲ್ಲಿ 11 ತಿಂಗಳ ಮಗುವನ್ನು ಹೊರಗಡೆ ಕರೆದುಕೊಂಡು ಬಂದು ಊಟ ಮಾಡಿಸುವ ವೇಳೆ ತೆಂಗಿನ ಕಾಯಿಯೊಂದು ಮಗುವಿನ ತಲೆಯ ಮೇಲೆ, ನೆತ್ತಿಯ ನೇರಕ್ಕೆ ಬಿದ್ದಿದೆ. ತಕ್ಷಣ ಮಗುವನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಕಲ್ಪವೃಕ್ಷ ಮಗುವಿನ ಜೀವವನ್ನೇ ಕಸಿದುಬಿಟ್ಟಿದೆ.
ಮಲ್ಲಿಕಾರ್ಜುನ ಮತ್ತು ಮಾಲಾ ಎನ್ನುವ ದಂಪತಿಯ ಮಗು ತನ್ವಿತ್ ಸಾವಿಗೀಡಾದ ಮಗು. ಸಾಮಾನ್ಯವಾಗಿ ತೆಂಗಿನಕಾಯಿ ತಲೆಯ ಮೇಲೆ ಬೀಳುವುದು ಅಪರೂಪದಲ್ಲಿ ಅಪರೂಪ. ಇಂತಹ ಅಪರೂಪದ ಪ್ರಕರಣದಲ್ಲಿ ಪುಟ್ಟ ಮಗು ತೀರಿಕೊಂಡಿರುವುದು
ಬದುಕಿನಲ್ಲಿ ಎಷ್ಟೇ ಸುರಕ್ಷತಾ ನಿಯಮ ಪಾಲಿಸಿದರು, ಕೂಡಾ ಕಡಿಮೆಯೇ. ಎಲ್ಲಾ ಅಸುರಕ್ಷಿತ ಸಾಧ್ಯತೆಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಮುಖ್ಯ ಎಂಬುದಕ್ಕೆ ಈ ಘಟನೆಯೊಂದು ತಾಜಾ ಉದಾಹಣೆಯಾಗಿದೆ.