ಶ್ರೀರಸ್ತು ಶುಭಮಸ್ತು | ಇಂದಿನಿಂದ ಕಲ್ಯಾಣ ಮಂಟಪದಲ್ಲಿ ಮದುವೆಗೆ ಅಸ್ತು – ದ.ಕ.ಜಿಲ್ಲಾಧಿಕಾರಿ

ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ವಿಧಿಸಿದ್ದ ನಿರ್ಬಂಧಗಳನ್ನು ರಾಜ್ಯ ಸರಕಾರ ಸಡಿಲಿಕೆ ಮಾಡಿ, ಮಾರ್ಗಸೂಚಿ ಹೊರಡಿಸಿದೆ.ಅದರಂತೆ ದಕ್ಷಿಣ ಕನ್ನಡದಲ್ಲೂ ಈ ಸಡಿಲಿಕೆ ಮಾರ್ಗಸೂಚಿ ಜೂ.28ರಿಂದ ಜಾರಿಗೆ ಬರಲಿದೆ.

ಮದುವೆ ಸಮಾರಂಭದಲ್ಲಿ ಗರಿಷ್ಠ 40 ಮಂದಿಗೆ ಅವಕಾಶವಿದ್ದು, ಪೂರ್ವಾನುಮತಿ ಹಾಗೂ ಭಾಗವಹಿಸುವ ಎಲ್ಲರಿಗೂ ಪಾಸ್ ನೀಡುವುದು ಕಡ್ಡಾಯ. ಆಯಾ ತಾಲೂಕಿನ ತಹಶೀಲ್ದಾರರ ಕೈಯಲ್ಲಿ ಮದುವೆಗೆ ಅನುಮತಿ ಪತ್ರ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಬಿಬಿಎಂಪಿ ಅವರು ಮದುವೆಗೆ ಅನುಮೋದನೆ ನೀಡುತ್ತಾರೆ. ಸರ್ಕಾರವು, ಮದುವೆ ಆಯೋಜನೆ ಆಗಿರುವ ಕಲ್ಯಾಣ ಮಂಟಪ, ಪಾರ್ಟಿ ಹಾಲ್, ರೆಸಾರ್ಟ್ ಗಳಲ್ಲಿ ಮಾರ್ಷಲ್ ಗಳನ್ನು ನಿಯೋಜನೆ ಮಾಡಿ ನಿಗಾ ಇಡಲಿದೆ. ಮದುವೆ ಸಂದರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಆಗುತ್ತಿದೆ ಎನ್ನುವುದು ಮಾರ್ಷಲ್‍ಗಳಿಗೆ ಖಾತ್ರಿಯಾದರೆ ಅವರು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಜರಗಿಸುತ್ತಾರೆ.

ಮದುವೆ ಸಮಾರಂಭ ಏರ್ಪಡಿಸುವವರು ಆಯಾ ಸ್ಥಳೀಯಾಡಳಿತದಿಂದ ಸೂಕ್ತ ಅನುಮತಿ ಪಡೆದುಕೊಳ್ಳಬೇಕು. ಕೋವಿಡ್ ನಿಯಾಮವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.