ಲಸಿಕೆ ಪಡೆಯದವರಿಗೆ ಇಲ್ಲ ಹೇರ್ ಕಟ್ಟಿಂಗ್, ಶೇವಿಂಗ್ | ಕಷಾಯ ಕುಡಿಯದವರಿಗೆ ಇಲ್ಲ ಹೋಟೆಲ್ ಗಳಲ್ಲಿ ತಿಂಡಿ ಊಟ !
ಭೋಪಾಲ್: ಕೊರೊನಾ ಲಸಿಕೆ ಪಡೆದುಕೊಳ್ಳದವರಿಗೆ ಹೇರ್ ಕಟ್ಟಿಂಗ್ ಮತ್ತು ಶೇವಿಂಗ್ ಮಾಡಬಾರದು ಎಂದು ಮಧ್ಯ ಪ್ರದೇಶದ ಛಿಂದ್ವಾಡಾದ ಸಲೂನ್ ಮಾಲೀಕರು ನಿರ್ಧರಿಸಿದ್ದಾರೆ.
ಕೊರೊನಾ ಲಸಿಕೆ ಪಡೆಯದವರಿಗೆ ಕ್ಷೌರ ಸೇರಿದಂತೆ ಯಾವುದೇ ಕ್ಷೌರ ಸೇವೆಗಳನ್ನು ನೀಡಲ್ಲ. ವ್ಯಾಕ್ಸಿನೇಷನ್ ಸರ್ಟಿಫಿಕೇಟ್ ಅಥವಾ ಮೆಸೇಜ್ ತೋರಿಸಿಯೇ ಸೇವೆ ಪಡೆಯಬೇಕು. ಈ ಮೂಲಕ ಜನರು ವ್ಯಾಕ್ಸಿನ್ ಪಡೆದುಕೊಳ್ಳುವಂತಾಗಲಿ. ಕೊರೊನಾ ಲಸಿಕೆ ಅಭಿಯಾನಕ್ಕೆ ನಾವು ಸಾಥ್ ನೀಡಿದ್ದೇವೆ ಎಂದು ಸಲೂಲ್ ಮಾಲೀಕರ ಸಂಘ ಒಂದು ಹೆಜ್ಜೆ ಮುಂದೆ ಹೋಗಿ ಹೇಳಿದೆ.
ಸಲೂನ್ ಮಾಲೀಕರ ಸಂಘದ ಸಭೆಯಲ್ಲಿ ಸರ್ವಸಮ್ಮತಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕ್ಷೌರ ಮಾಡುವಾವ ಗ್ರಾಹಕರ ಸಮೀಪಕ್ಕೆ ಹೋಗಬೇಕಾಗುತ್ತದೆ . ಮುಂಜಾಗ್ರತ ಕ್ರಮ ತೆಗೆದುಕೊಂಡ್ರೂ ಸೋಂಕು ತಗಲುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸಲೂನ್ ಸಂಘ ಈ ನಿರ್ಧಾರಕ್ಕೆ ಬಂದಿದೆ.
ಇನ್ನೊಂದೆಡೆ ಕಷಾಯ ಕುಡಿದ್ರೆ ಮಾತ್ರ ಟಿಫನ್ ನೀಡುವುದಾಗಿ ಹೋಟೆಲ್ ನವರು ನಿರ್ಧರಿಸಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ಇಡೀ ಊರಿಗೆ ಊರೇ ಕೊರೊನಾ ವಿರುದ್ಧ ಹೋರಾಟಕ್ಕೆ ನಿಂತಿದೆ. ಕೊರೊನಾ ಹಿಮ್ಮೆಟ್ಟಿಸಲು ಗ್ರಾಮ ಪಂಚಾಯ್ತಿ ಮಾಡಿರೋ ಮಾಸ್ಟರ್ ಪ್ಲಾನ್ನಿಂದಾಗಿ ಗ್ರಾಮಸ್ಥರು ಆರೋಗ್ಯವೇ ಭಾಗ್ಯ ಅಂತಿದ್ದಾರೆ.
ಗ್ರಾಮದಲ್ಲಿ ಯಾವುದೇ ಹೋಟೆಲ್ಗೆ ಹೋದ್ರೂ ಮೊದಲು ಒಂದು ಲೋಟ ಕಷಾಯ ಕೊಡ್ತಾರೆ. ಆಮೇಲೆ ಊಟ, ತಿಂಡಿ ಏನ್ ಬೇಕು ಅಂತ ಕೇಳ್ತಾರೆ. ಗಂಟಲಿನಲ್ಲಿನ ವೈರಸ್ ಗಳನ್ನೂ ಕೊಲ್ಲಬಲ್ಲ, ರೋಗನಿರೋಧಕ ಶಕ್ತಿಯನ್ನ ಹೆಚ್ವಿಸುವಲ್ಲೂ ಸಹಕಾರಿ ಆಗಬಲ್ಲ ಕಷಾಯ ನೀಡಲು ಅವ್ರು ನಿರ್ಧರಿಸಿದ್ದಾರೆ.
ಹೀಗಾಗಿ ಅಬ್ಬಿಗೇರಿ ಗ್ರಾಮ ಪಂಚಾಯ್ತಿ ಗ್ರಾಮದ ಪ್ರತಿ ಹೋಟೆಲ್ಗಳಲ್ಲಿ ಕಷಾಯ ನೀಡುವಂತೆ ಮನವಿ ಮಾಡಿದೆ. ಟೀ ಅಂಗಡಿಗೆ ಹೋದ್ರೂ ಅಲ್ಲೂ ಮೊದಲಿಗೆ ಒಂದು ಕಪ್ ಕಷಾಯ ಕೊಡ್ತಾರೆ. ಹೋಟೆಲ್ಗಳಲ್ಲಿ ಒಂದು ವೇಳೆ ಕಷಾಯ ಬೇಡಪ್ಪ ಅಂದ್ರೆ, ಕಷಾಯಕ್ಕಿಂತ ಖಡಕ್ ಆಗಿ ‘ಎದ್ದು ಮುಂದಕ್ಕೆ ಹೋಗಯ್ಯ’ ಅಂತಾರೆ. ಇನ್ನು ಎಲ್ಲೇ ಕಷಾಯ ಕುಡಿದ್ರೂ ಹಣ ಪಡೆಯಲ್ಲ. ಅದು ಅಲ್ಲಿ ಫ್ರೀ ಮತ್ತು ಕಾಂಪ್ಲಿಮೆಂಟರಿ ಡ್ರಿಂಕ್ಸ್.