ಕೊರೋನಾ ದಿಂದ ನಾಲ್ಕು ತಿಂಗಳುಗಳ ಕಾಲ ಚಿಕಿತ್ಸೆ ಪಡೆದಿದ್ದ ಈತನಿಗೆ ಆಸ್ಪತ್ರೆ ನೀಡಿದ್ದು ಬರೋಬ್ಬರಿ 22 ಕೋಟಿ ರೂ. ಬಿಲ್!!
ಕೊರೋನ ಕಾರಣಕ್ಕಾಗಿ ಹಲವು ಮಂದಿ ಚಿಕಿತ್ಸೆಗಾಗಿ ಬಹಳಷ್ಟು ಕಾಲ ಆಸ್ಪತ್ರೆಯಲ್ಲಿ ಕಳೆದಿದ್ದಾರೆ. ಇಲ್ಲೊಬ್ಬ ನಾಲ್ಕು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದು, ಅದಕ್ಕಾಗಿ ಬರೋಬ್ಬರಿ 22 ಕೋಟಿ ವ್ಯಯಿಸಿದ್ದಾನೆ ಎಂಬುದು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಕೊರೋನಾ ಸೋಂಕಿನಿಂದಾಗಿ ನಾಲ್ಕು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಈತ ಆಸ್ಪತ್ರೆ ಬಿಲ್‌ನ್ನು ಟಿಕ್‌ಟಾಕ್‌ನಲ್ಲಿ ವಿಡಿಯೋ ಮೂಲಕ ಶೇರ್ ಮಾಡಿದ್ದು, ಇದನ್ನು ನೋಡಿದ ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಸೋಂಕಿನ ವಿರುದ್ಧ ಚಿಕಿತ್ಸೆ ಪಡೆದ ವ್ಯಕ್ತಿಗೆ ಆಸ್ಪತ್ರೆ ಆಡಳಿತ ಮಂಡಳಿ ಬರೋಬ್ಬರಿ 22 ಕೋಟಿ ರೂಪಾಯಿ ಬಿಲ್ ಮಾಡಿದೆ!!
ಟಿಕ್‌ಟಾಕ್‌ನಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ವ್ಯಕ್ತಿಯು ಬಿಲ್‌ನ್ನು ಪ್ರದರ್ಶಿಸಿದ್ದಾನೆ. ಇದರಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ರೋಗಿಗೆ ನೀಡಿದ ಸಂಪೂರ್ಣ ಸೌಲಭ್ಯಗಳ ಪಟ್ಟಿಯನ್ನು ಆಸ್ಪತ್ರೆ ಒದಗಿಸಿದೆ. ಕೆಲ ದಿನಗಳ ಹಿಂದಷ್ಟೇ ಪೋಸ್ಟ್ ಮಾಡಲಾದ ಈ ವಿಡಿಯೋ 9.5 ಮಿಲಿಯನ್‌ಗೂ ಅಧಿಕ ವೀವ್ ಸಂಪಾದಿಸುವಲ್ಲಿ ಯಶಸ್ವಿಯಾಗಿದೆ.
ಅಲ್ಲದೇ ಕಮೆಂಟ್ ವಿಭಾಗದಲ್ಲಿ ಅನೇಕರು ಜೀವವಿಮೆಯ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ ಈ ವ್ಯಕ್ತಿಯು ಒಂದೇ ಒಂದು ಜೀವವಿಮೆಯನ್ನೂ ಮಾಡಿಸಿಕೊಂಡಿಲ್ಲವಂತೆ.
ದುಬಾರಿ ವೈದ್ಯಕೀಯ ಸೇವೆಗಳಿಗೆ ಅಮೆರಿಕ ಹೆಸರುವಾಸಿಯಾಗಿದೆ. ಚಿಕಿತ್ಸೆ ವಿಚಾರದಲ್ಲಿ ಅಮೆರಿಕದ ಎಲ್ಲಾ ಆಸ್ಪತ್ರೆಗಳಲ್ಲೂ ದುಬಾರಿ ಬಿಲ್‌ನ್ನೇ ನೀಡಲಾಗುತ್ತದೆ. ಮಧ್ಯಮ ವರ್ಗದವರಿಗೆ ಅಮೆರಿಕದ ಆಸ್ಪತ್ರೆಗಳ ಬಿಲ್‌ನ್ನು ಭರಿಸೋದು ಭಾರೀ ಕಷ್ಟದ ಕೆಲಸವೇ ಸರಿ.
ಆದರೂ ಆತ ಯಾವುದೇ ಜೀವವಿಮೆ ಮಾಡಿಸಿಕೊಳ್ಳದೆ, ಆಸ್ಪತ್ರೆಗೆ 22 ಕೋಟಿ ಪಾವತಿ ಮಾಡಿರುವುದು ಆಶ್ಚರ್ಯವೇ ಸರಿ!!