ಕೊಡಗಿನ ಕೇಂದ್ರಭಾಗದಲ್ಲಿ ರೋಹಿಂಗ್ಯರ ಕ್ಯಾಂಪ್ ?
ತಲೆಬರಹ ನೋಡಿ ಗಾಬರಿ ಆಯಿತೇ ? ಶಾಂತಿಪ್ರಿಯರ ನೆಲೆಬೀಡು. ಶಾಂತಿಗಾಗಿ ಶಕ್ತಿ ಎಂದು ಸಾರಿದ ಸೈನಿಕರ ಕ್ಷೇತ್ರ ಭೂಮಿ ಕೊಡಗು. ಇಲ್ಲಿ ರೋಹಿಂಕ್ಯಾ ಉಗ್ರರೇ ? ದೇಶವೇ ದೇವರು ಎಂದು ದೇಶ ಸೇವೆಯನ್ನೇ ಉಸಿರಾಗಿಸಿ ಕೊಂಡು ಬಾಳುತ್ತಿರುವ ಜನಾಂಗದ ತವರೂರಲ್ಲಿ ಉಗ್ರಗಾಮಿಗಳು ನುಸುಳಿದರೇ ? ಭೌಗೋಳಿಕ ಕಾರಣಗಳಿಂದ ಕರ್ನಾಟಕದ ಕಾಶ್ಮೀರ ಎಂದು ಕರೆಸಿಕೊಳ್ಳುತ್ತಿದ್ದ ಕೊಡಗು ಮುಂದಿನ ದಿನಗಳಲ್ಲಿ ಉಗ್ರರ ಪಾಲಿನ ಸ್ವರ್ಗ ಆಗಿದ್ದ ಕಾಶ್ಮೀರ ಆಗಲಿದೆಯೇ ? ಇವೆಲ್ಲದಕ್ಕೂ ಹೌದು ಅನ್ನೋ ಉತ್ತರ ಕೊಡುತ್ತಿದೆ ಇತ್ತೀಚೆಗಿನ ವಿದ್ಯಾಮಾನಗಳು.
ಹೌದು, ಕೊಡಗು ಉಗ್ರಗಾಮಿಗಳ ಪಾಲಿನ ಸ್ವರ್ಗ ಆಗೋದಕ್ಕೆ ತುಂಬಾ ಕಾರಣಗಳಿದೆ. ಬೆಟ್ಟದ ಸಾಲುಗಳು ಅದರ ತಪ್ಪಲಲ್ಲಿ ಹಸಿರು ಹೊದ್ದು ಮಲಗಿರೋ ಕಾಫಿ ತೋಟಗಳು. ಇಂಥಾ ಕಾಫಿ ತೋಟಗಳಲ್ಲಿ ಕೆಲಸ ಮಾಡೋ ಅಸಂಖ್ಯಾತ ಕಾರ್ಮಿಕರ ರೂಪದಲ್ಲಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ದೇಶವಿರೋಧಿ ಶಕ್ತಿಗಳು ಸಕ್ರಿಯವಾಗಿದೆ ಅನ್ನೋದೇ ಆಘಾತಕಾರಿ ವಿಚಾರ.
ವರ್ಷಗಳ ಹಿಂದೆ ಕೊಡಗಿನ ಸೋಮವಾರ ಪೇಟೆಯಲ್ಲಿ ಕೇರಳದ ತಡಿಯಂಡ ವಿಳ ನಸೀರ್ ಅನ್ನೋ ಉಗ್ರ ಸಿಕ್ಕಿಹಾಕಿಕೊಂಡ ವಿಚಾರ ಹಸಿರಾಗಿರುವುದರ ಬೆನ್ನಲ್ಲೇ ಕೊಡಗಿನ ಮಡಿಲು ರಕ್ತಪಾತಕ್ಕೆ ಮುನ್ನುಡಿ ಬರೆಯುತಿರುವುದರ ಸೂಚನೆ ಸಿಕ್ಕಿದೆ. ಅದಕ್ಕೆ ಉದಾಹರಣೆ ಇತ್ತೀಚಿಗೆ ಮಡಿಕೇರಿ ಸಮೀಪದ ಕಗ್ಗೋಡುವಿನಲ್ಲಿ ನಡೆಯುತ್ತಿರುವ ವಿದ್ಯಾಮಾನಗಳೇ ಸಾಕ್ಷಿ.
ದ್ವಾರಕ ಎಸ್ಟೇಟ್. ಇದು ಹಾಕತ್ತೂರು ಹಾಗೂ ಕಗ್ಗೋಡಿನ ಮಧ್ಯಭಾಗದ ಸುಮಾರು ಇನ್ನೂರೈವತ್ತು ಎಕರೆಯಷ್ಟು ವಿಶಾಲವಾದ ತೋಟ. ಸ್ಥಳೀಯರು ಇದನ್ನ ದ್ವಾರಕ ತೋಟ ಅನ್ನೋದಕ್ಕಿಂತ ತುಕ್ಕಡಿ ತೋಟ ಅನ್ನುತ್ತಾರೆ.ಈ ತುಕ್ಕಡಿ ಅನ್ನೋ ಹೆಸರು ಬರಲು ಬೆಚ್ಚಿ ಬೀಳಿಸುವ ಕಾರಣ ಇದೇ. ತುಕಡಿ ಅನ್ನೋ ಪದ ಆಡು ಮಾತಿನಲ್ಲಿ ತುಕ್ಕಡಿ ಅಂತ ಬದಲಾಗಿದೆ.ಹೌದು, ಮತಾಂಧ ಟಿಪ್ಪು ಸುಲ್ತಾನ ಕೊಡಗಿನ ದೇಗುಲಗಳನ್ನು ಕೊಳ್ಳೆ ಹೊಡೆದು ನಾಶ ಮಾಡುವ ಸಂಧರ್ಭದಲ್ಲಿ ತನ್ನ ಸೇನಾ ತುಕಡಿಯನ್ನು ಇಲ್ಲಿನ ಬಯಲು ಪ್ರದೇಶದಲ್ಲಿ ನಿಲ್ಲಿಸಿದ್ದ ಅನ್ನೋ ಕಾರಣಕ್ಕೆ ಇದನ್ನು ಈಗಲೂ ಸ್ಥಳೀಯರು ತುಕ್ಕಡಿ ಅಂತ ಕರೀತಾರೆ.
ಇಲ್ಲಿಂದಾನೇ ಮತಾಂಧ ಟಿಪ್ಪು ಸುಲ್ತಾನ ಸಮೀಪದ ಬಿಳಿಗೇರಿಯ ದೇವಸ್ಥಾನಕ್ಕೆ ಹೋಗಿ ದ್ವಂಸ ಮಾಡಿದ್ದ ಅನ್ನೋದಕ್ಕೆ ಈಗಲೂ ಬಿಳಿಗೇರಿಯ ದೇವಸ್ಥಾನ ಸಾಕ್ಷಿ. ತುಕಡಿ ಅನ್ನೋ ದ್ವಾರಕ ಎಸ್ಟೇಟ್ ಒಳಗೆ ಇರುವ ಆಂಜನೇಯ ಸ್ವಾಮಿಗುಡಿಯನ್ನು ಕೂಡ ಟಿಪ್ಪೂ ಸುಲ್ತಾನ್ ಧ್ವಂಸಗೈದಿದ್ದ ಅನ್ನೋ ವಿಚಾರಗಳು ಕೂಡ ಇತಿಹಾಸವನ್ನು ಮತ್ತೆ ಕೆದಕಿ ನೋಡಲು ಪ್ರೇರಣೆ ಕೊಡುತ್ತಿದೆ. ಇವತ್ತಿಗೂ ಮಡಿಕೇರಿ ರಸ್ತೆಯಬದಿಯಲ್ಲೇ ತುಕಡಿ ತೋಟದ ಅಂಜನೇಯ ಗುಡಿ ಸುಣ್ಣ ಬಣ್ಣ ಇಲ್ಲದೆ ಪೂಜೆ ಪುನಸ್ಕಾರಗಳಿಲ್ಲದೆ ಪಾಳು ಬಿದ್ದಿರುವುದನ್ನು ನೋಡುತ್ತಿದ್ದರೆ ಅದು ನಿಜ ಅನ್ನಿಸುತ್ತಿದೆ .ಇಂಥಾ ತುಕಡಿ ಮತ್ತೊಮ್ಮೆ ಇತಿಹಾಸ ಮರುಕಳಿಸಲು ಸಾಕ್ಷಿಯಾಗಲಿದೆಯೇ?ಹೌದೆನ್ನಲಿದೆ ಸಾಲು ಸಾಲು ಕಾರಣಗಳು.
ಈ ದ್ವಾರಕ ತೋಟ (ತುಕ್ಕಡಿ ) ಇದು ಒಂದಷ್ಟು ಹಿಂದಿನ ವರ್ಷಗಳವರೆಗೆ ಹಾಕತ್ತೂರು, ಬಿಳಿಗೇರಿ, ಕಗ್ಗೋಡು, ತೊಂಬತ್ತುಮನೆ, ಮೇಕೇರಿ ಭಾಗದ ಕಾರ್ಮಿಕರ ಜೀವನಾಡಿಯಾಗಿತ್ತು. ಆದರೆ ಇತ್ತೀಚಿಗೆ ದ್ವಾರಕ ಎಸ್ಟೇಟ್ ತುಂಬೆಲ್ಲಾ ಅಸ್ಸಾಮಿ ಕಾರ್ಮಿಕರಿದ್ದಾರೆ. ನಿಜ ವಿಚಾರ ಏನಂದರೆ ಇದರಲ್ಲಿ ಮುಕ್ಕಾಲು ಪಾಲು ಜನ ಬಾಂಗ್ಲಾದೇಶಿ ಪ್ರಜೆಗಳು ರೋಹಿಂಗ್ಯರು ತುಂಬಿ ಕೊಂಡಿದ್ದಾರೆ ಅನ್ನೋದಕ್ಕೆ ಸಾಕ್ಷಿ ಒದಗಿಸುತ್ತಿದ್ದಾರೆ ಸ್ಥಳೀಯರು. ಯಾಕಂದರೇ ಇಡೀ ದ್ವಾರಕ ತೋಟದಲ್ಲಿ ಬೆರಳೆಣಿಕೆಯ ಹಿಂದೂ ಕುಟುಂಬಗಳು ಮಾತ್ರ ಕಾಣಸಿಗುತ್ತದೆ. ಮಿಕ್ಕವರೆಲ್ಲರೂ ಅಸ್ಸಾಮಿಗಳು,ಪಶ್ಚಿಮ ಬಂಗಾಳದವರು ಅಂತ ಹೇಳುತ್ತಿರೋ ರೋಹಿಂಗ್ಯರು.
ಇವರ ಬಳಿ ನಮ್ಮ ದೇಶವಾಸಿಗಳು ಅಂತ ಹೇಳಲು ಸರಿಯಾದ ಪುರಾವೆಗಳಿಲ್ಲ. ಆದರೂ ಇದರ ಬಗ್ಗೆ ಯಾರೂ ಮಾತಾಡುತ್ತಿಲ್ಲ . ಇವರ ಹತ್ರ ಸರಿಯಾದ ದಾಖಲೆಗಳಿದೆಯೇ ? ಇದ್ದರೇ ಅದು ಅಸಲಿ ದಾಖಲೆಗಳೇ ? ಎಂದು ಪರಿಶೀಲಿಸುವ ಗೋಜಿಗೆ ಸಂಬಂಧಪಟ್ಟವರು ಹೋಗುತ್ತಿಲ್ಲ.
ಈ ದ್ವಾರಕ ತೋಟದಲ್ಲಿ ರಾತ್ರಿಯಾದರೆ ಅಪರಿಚಿತರು, ಅಪರಿಚಿತ ವಾಹನಗಳ ಓಡಾಟ ನಿತ್ಯಸಂಗತಿಯಾಗಿದೆ. ಸುತ್ತ ಮುತ್ತಲ ಜನರ ಹಸು ಎಮ್ಮೆ ಕೋಣಗಳು ಮಾತ್ರ ಅಲ್ಲ ಎಳೆಗರುಗಳು ಕೂಡ ತೋಟದಲ್ಲಿ ಮಾಂಸವಾಗುತ್ತಿದೆ. ಗೋಹತ್ಯೆ ನಿಷೇಧವಿದ್ದರೂ ದ್ವಾರಕ ತೋಟದೊಳಗೆ ಸೇರಿರುವ ಮತಾಂಧ, ದೇಶವಿರೋಧಿ ಶಕ್ತಿಗಳಿಗೆ ಅದರ ಪರಿವೆಯಿಲ್ಲ.
ಕಳೆದ ವಾರ ರಾತ್ರಿ ಏಳರ ಸಮಯಕ್ಕೆ ತೋಟದ ಒಳಗೆ ಗುಂಡಿನ ಮೊರೆತ. ಕೊಡಗಿನಲ್ಲಿ ಗಂಡು ಮಗು ಹುಟ್ಟಿದರೆ ನಮ್ಮಲ್ಲೊಬ್ಬ ಸೈನಿಕ ಹುಟ್ಟಿದ ಅಂತ ಆಕಾಶಕ್ಕೆ ಗುಂಡು ಹಾರಿಸೋದು ಇಲ್ಲಿನವರ ವೀರಪರಂಪರೆಯ ಒಂದು ಭಾಗ. ಆದರೆ ಅವತ್ತು ಗುಂಡು ಹಾರಿದ್ದು ದೇಶವಿರೋಧಿ ಶಕ್ತಿಗಳ ಬಂದೂಕಿನಿಂದ ಅನ್ನೋದು ವಿಪರ್ಯಾಸ. ಅದು ಗೋಮಾತೆಯ ಗುಂಡಿಗೆಗೆ ಹೊಡೆದ ಗುಂಡು. ತೋಟದ ಕಾರ್ಮಿಕ ವೇಷದ ನುಸುಳುಕೋರರ ಜೊತೆ ಕೊಡಗಿನ ಸ್ಥಳೀಯ ಮತಾಂಧ ಶಕ್ತಿಗಳು ಗೋವನ್ನು ಕೊಂದು ಹಾಕಿ ಮಾಂಸ ಮಾಡುವ ಹೊತ್ತಿಗೆ ಇವರುಗಳ ಕೃತ್ಯಗಳಿಂದ ಬೇಸತ್ತು ಹೋಗಿದ್ದ ಸ್ಥಳೀಯ ಹಿಂದೂ ಕಾರ್ಯಕರ್ತರ ದಂಡು ತೋಟಕ್ಕೆ ಮುತ್ತಿಗೆ ಹಾಕಿತ್ತು. ಆದರೆ ಮತಾಂಧ ಶಕ್ತಿಗಳು ಮುಂಚೂಣಿಯಲ್ಲಿದ್ದ ಹಿಂದೂ ಕಾರ್ಯಕರ್ತನ ಎದೆಗೆ ಬಂದೂಕಿಟ್ಟು ತಪ್ಪಿಸಿ ಕೊಂಡು ಬಿಟ್ಟರು. ಆದರೆ, ಅವರ ವಾಹನವನ್ನು ಹಿಂದೂ ಕಾರ್ಯಕರ್ತರು ವಶಪಡಿಸಿಕೊಂಡರು. ಪೋಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ಕುಂಜಿಲ ಕೊಳಕೇರಿಯ ಇಬ್ಬರು ದುಷ್ಕರ್ಮಿಗಳ ಬಂಧನವಾಯ್ತು.
ಹಾಕತ್ತೂರಿನಿಂದ ಬರೋಬ್ಬರಿ ಇಪ್ಪತ್ತೈದು ಕಿಲೋಮೀಟರ್ ದೂರದ ಕೊಳಕೇರಿಯಿಂದ ಬಂದು ದ್ವಾರಕ ಎಸ್ಟೇಟಲ್ಲಿ ಇವರುಗಳು ಗೋ ಹತ್ಯೆ ಮಾಡುತ್ತಾರೆ ಅಂದರೆ ಅದರ ಹಿಂದೆ ತೋಟದಲ್ಲಿ ವಾಸವಿರುವವರ ಕೈವಾಡ ಇದ್ದೇ ಇದೆ ಅನ್ನೋದು ನಿಸ್ಸಂದೇಹ. ಇದರ ಬಗೆಗಿನ ಸತ್ಯ ಮುಂದಿನ ವಿಚಾರಣೆಯಿಂದ ಮಾತ್ರ ತಿಳಿಯಲು ಸಾಧ್ಯ .ಆದರೆ ಗೋಹತ್ಯೆ ಹಿಂದುತ್ವ ಅನ್ನೋ ಹೆಸರಲ್ಲಿ ಚುನಾವಣೆ ಗೆದ್ದ ಕೊಡಗಿನ ಶಾಸಕಧ್ವಯರು ಮಾತಾಡಿಲ್ಲ. ಕೊಡಗು ಮೈಸೂರು ಸಂಸದ ಜಾಣಮೌನ. ದ್ವಾರಕ ಎಸ್ಟೇಟ್ ಮಾತ್ರ ಅಲ್ಲ ಕೊಡಗಿನ ಮೂಲೆ ಮೂಲೆಯಲ್ಲಿರುವ ಕಾಫಿ ತೋಟಗಳಲ್ಲೂ ಬಂಗಾಳಿ, ಅಸ್ಸಾಮಿ ರೋಹಿಂಗ್ಯಾಗಳು ಲಗ್ಗೆಯಿಟ್ಟು, ಕೊಡಗಿನ ಪಾಲಿಗೆ ಮುಳ್ಳಾಗಿದ್ದಾರೆ ಅನ್ನೋದು ಸತ್ಯ. ಆದ್ರೆ ಚುನಾವಣೆಗೆ ಮಾತ್ರ ಹಿಂದುತ್ವ ಜಪ ಮಾಡೋ ಇವರುಗಳು ಕಾವೇರಿ ಮಡಿಲಲ್ಲಿ ದೇಶವಿರೋಧಿ ಶಕ್ತಿಗಳ ಅಟ್ಟಹಾಸವನ್ನು ಮೆಟ್ಟಿ ಹಾಕುವ ಪ್ರಯತ್ನ ಮಾಡದೇ ಇದ್ದರೆ ಕೊಡಗು ಆದಷ್ಟು ಬೇಗ ಭೂರಮೆಯ ಸ್ವರ್ಗ ಅನ್ನೋ ಹೆಸರಿಂದ ಉಗ್ರರ ಸ್ವರ್ಗ ಅನ್ನೋ ಹೆಸರಿಗೆ ಬದಲಾಗುವುದರಲ್ಲಿ ಸಂದೇಹವಿಲ್ಲ.
ಇನ್ನಾದರೂ ಸರಕಾರ ಇದರ ಕಡೆ ಗಮನ ಹರಿಸಿ ಕೊಡಗಿಗೆ ಬಂದಿರುವ ಕಾರ್ಮಿಕರು ಅಸಲೀ ನಮ್ಮ ದೇಶವಾಸಿಗಳೆ ? ಅಥ್ವಾ ನುಸುಳು ಕೋರರೇ ? ಎಂದು ಕಂಡು ಹಿಡಿದು ಸಮರ್ಪಕ ಕ್ರಮ ಕೈಗೊಳ್ಳದೆ ಇದ್ದರೇ, ಹಿಂದಿನ ಕಾಶ್ಮೀರದ ಹಾಗೆ ಇಂದಿನ ಪಶ್ಚಿಮ ಬಂಗಾಳದ ಹಾಗೆ ನಾಳೆ ನಮ್ಮ ಕೊಡಗು, ನುಸುಳು ಕೋರರ ಕೊಡಗಾಗಬಹುದು. ಕೊಡಗಿನಲ್ಲಿ ಬಾಂಗ್ಲಾದೇಶಿ ಅಸ್ಸಾಮಿ ರೋಹಿಂಗ್ಯಾಗಳಿಗೆ ಆಶ್ರಯ ಕೊಟ್ಟಿರುವ ಎಲ್ಲಾ ಕೊಡಗಿನ ತೋಟದ ಮಾಲೀಕರಿಗೆ ಹಿಂದೂ ಕಾರ್ಯಕರ್ತರು ನೀಡುತ್ತಿರುವ ಎಚ್ಚರಿಕೆ. ಕಾನೂನನ್ನು ಕೈಗೆತ್ತಿಕೊಳ್ಳಲು ನಮಗೆ ಅವಕಾಶ ನೀಡದಿರಿ.
ಜೈ ಹಿಂದ್
ಶ್ರೀಪ್ರಿಯಾಕೊಡವ