ಜುಲೈ 1 ರಿಂದ ರಾಜ್ಯಾದ್ಯಂತ ಶೈಕ್ಷಣಿಕ ಚಟುವಟಿಕೆ ಆರಂಭ | ವಿಡಿಯೋ ಪಾಠಗಳ ವೇಳಾಪಟ್ಟಿ ಪ್ರಕಟ
ಬೆಂಗಳೂರು : ಜುಲೈ 1ರಿಂದ ರಾಜ್ಯಾದ್ಯಂತ 2021-22 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು, 1ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿದಿನ ಸಂವೇದಾ ವೀಡಿಯೋ ಪಾಠ ಪ್ರಸಾರವಾಗಲಿದೆ.ಈ ಬಗ್ಗೆ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟ ಮಾಡಿದೆ.
ಜುಲೈ 1ರಿಂದ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 4 ಗಂಟೆಯವರೆಗೆ ವೀಡಿಯೋ ಪಾಠಗಳು ನಡೆಯಲಿವೆ. ತರಗತಿವಾರು ವೇಳಾಪಟ್ಟಿ ಶಾಲಾ ಮುಖ್ಯೋಪಾಧ್ಯಾಯರಿಗೆ ಕಳುಹಿಸಲಾಗಿದ್ದು, ಜು.1ರಿಂದ 30 ದಿನಗಳ ಸೇತುಬಂಧ ಕಾರ್ಯಕ್ರಮ ನಡೆಸಲಾಗುತ್ತದೆ. ಮೊದಲಿಗೆ ವಿದ್ಯಾರ್ಥಿಗಳಿಗೆ ಪೂರ್ವ ಪರೀಕ್ಷೆ ನಡೆಸಿ, ಫಲಿತಾಂಶ ಆಧರಿಸಿ ಎ,ಬಿ,ಸಿ, ಗ್ರೇಡ್ ವಿದ್ಯಾರ್ಥಿಗಳೆಂದು ವಿಂಗಡಿಸಲಾಗುತ್ತದೆ.
1,2,3 ನೇ ತರಗತಿ ಮಕ್ಕಳಿಗೆ ಭಾನುವಾರ 11:30 ರಿಂದ 12,1:30 ರಿಂದ 2 ರ ತನಕ ನಲಿಕಲಿ ತರಗತಿ ನಡೆಯಲಿವೆ. 4 ನೇ ತರಗತಿ ಮಕ್ಕಳಿಗೆ ಶನಿವಾರ 10 ರಿಂದ 10:30 ರವರೆಗೆ ಹಾಗೂ 10:30 ರಿಂದ 11 ರ ತನಕ, ಭಾನುವಾರ 10 ರಿಂದ 10:30, 10:30 ರಿಂದ 11 ರ ತನಕ ಕನ್ನಡ, ಪರಿಸರ ಅಧ್ಯಯನ, ಗಣಿತ ತರಗತಿಗಳು ನಡೆಯಲಿವೆ.
5 ನೇ ತರಗತಿ ಮಕ್ಕಳಿಗೆ ಶನಿವಾರ 9 ರಿಂದ 9:30 ರವರೆಗೆ, 9:30 ರಿಂದ 10, ಭಾನುವಾರ 9 ರಿಂದ 9:30 ರಿಂದ 10 ರತನಕ ಕನ್ನಡ, ಗಣಿತ, ಪರಿಸರ ಅಧ್ಯಯನ ತರಗತಿಗಳು ನಡೆಯಲಿವೆ. 6 ನೇ ತರಗತಿ ಮಕ್ಕಳಿಗೆ ಗುರುವಾರ 10:30 ರಿಂದ 11, 11:30 ರಿಂದ 12, 1:30 ರಿಂದ 2 ರ ತನಕ ಇಂಗ್ಲಿಷ್, ಗಣಿತ, ಹಿಂದಿ, ವಿಜ್ಞಾನ, ಸಮಾಜ ವಿಷಯಗಳ ಕುರಿತು ತರಗತಿ ನಡೆಯಲಿವೆ.
7 ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರ 9 ರಿಂದ 9:30, 9:30ರಿಂದ 10,10 ರಿಂದ 10:30 ರ ತನಕ ಹಾಗೂ ಶುಕ್ರವಾರ 9 ರಿಂದ 9:30, 9:30 ರಿಂದ 10, 10 ರಿಂದ 10:30ರ ತನಕ ಇಂಗ್ಲಿಷ್, ಗಣಿತ, ಕನ್ನಡ, ವಿಜ್ಞಾನ, ಸಮಾಜ, ಹಿಂದಿ ವಿಷಯಗಳ ತರಗತಿಗಳು
ನಡೆಯಲಿವೆ ಎಂದು ತಿಳಿದುಬಂದಿದೆ.