ಗೀಝರ್ ಬ್ಲಾಸ್ಟ್ ಆಗಿ ಹೊತ್ತಿ ಉರಿದ ಮನೆ

ಬೆಳಗಾವಿ: ಗೋಕಾಕ್‌ನ ಬಸವ ನಗರದಲ್ಲಿ ಗುರುವಾರ ಬೆಳಗ್ಗೆ ಗೀಝರ್ ಬ್ಲಾಸ್ಟ್ ಆಗಿ ಮನೆಯೊಂದು ಹೊತ್ತಿ ಉರಿದಿದೆ.

ಸುರೇಶ ಶಾ ಎಂಬುವರಿಗೆ ಸೇರಿದ ಮನೆಯ ಎರಡನೇ ಮಹಡಿಯಲ್ಲಿ ಗೀಝರ್ ಬ್ಲಾಸ್ಟ್ ಆಗಿದ್ದು, ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗಳು ಕಟ್ಟಡದಿಂದ ಹೊರಗೆ ಬಂದಿದ್ದು, ಜನರು ಆತಂಕದಿಂದ ರಸ್ತೆಗೆ ಓಡಿ ಬಂದಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದುರಂತದಲ್ಲಿ ಮನೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

Leave A Reply

Your email address will not be published.