ಬೆಳ್ತಂಗಡಿ | ಏಕೈಕ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ತಂದೆ

ಬೆಳ್ತಂಗಡಿ, ಜೂನ್ 23 : ತಂದೆ ಮಗನ ಮಧ್ಯೆ‌ ನಡೆದ ಜಗಳ ಕೊನೆಗೆ ಮಗನ ಕೊಲೆಯಲ್ಲಿ ಅಂತ್ಯವಾಗಿದೆ. ತನ್ನ ತಂದೆಯೇ ಹೆತ್ತ ಮಗನನ್ನು ಕೊಂದು ಹಾಕಿದ್ದಾನೆ.

ತಂದೆ ತನ್ನ ಪುತ್ರನನ್ನು ಕೊಲೆಗೈದ ನಂತರ ಪಶ್ಚಾತ್ತಾಪ ಪಟ್ಟುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಪುಂಜಾಲಕಟ್ಟೆ ಭಜನಾ ಮಂದಿರದ ಬಳಿ ಬುಧವಾರ ನಡೆದಿದೆ.

ಕೊಲೆಯಾದ ಮಗನನ್ನು ಸಾತ್ವಿಕ್(17 ವ.) ಎಂದು ಗುರುತಿಸಲಾಗಿದೆ. ಮಗನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡ ತಂದೆ ಬಾಬು ನಾಯ್ಕ (58ವ.) ಎಂಬವರಾಗಿದ್ದು, ಅವರು ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆಯ ನಿವಾಸಿ ಎಂದು ತಿಳಿದು ಬಂದಿದೆ.

ಮೃತ ಸಾತ್ವಿಕ್ ನ ತಾಯಿ ಪಕ್ಕದ ಕ್ಯಾಶ್ಯೂ ಫ್ಯಾಕ್ಟರಿಗೆ ತೆರಳಿದ್ದ ವೇಳೆ ಅಪ್ಪ ಮತ್ತು ಮಗನ ಮಗನ ಮಧ್ಯೆ ಜಗಳ ನಡೆದಿದ್ದು, ಕುಡಿತದ ಮತ್ತಿನಲ್ಲಿದ್ದ ಅಪ್ಪ-ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ. ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಮೃತ ಹುಡುಗ ಆತನ ಏಕೈಕ ಪುತ್ರನಾಗಿದ್ದ. ತಂದೆ-ಮಗನ ಜಗಳ 2 ಸಾವಿನಿಂದ ಅಂತ್ಯವಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

ಸ್ಥಳಕ್ಕೆ ಬಂಟ್ವಾಳ ವೃತ್ತನಿರೀಕ್ಷಕರು, ಬೆಳ್ತಂಗಡಿ ಪ್ರಭಾರ ಸಬ್ಇನ್ಸ್ಪೆಕ್ಟರ್ ಚೆಲುವರಾಜ್, ಪುಂಜಾಲಕಟ್ಟೆ ಸಬ್ಇನ್ಸ್ಪೆಕ್ಟರ್ ಗಳಾದ ಸೌಮ್ಯ ಮತ್ತು ಕುಟ್ಟಿ ಎನ್ಕೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.