ಭೀಕರ ರಸ್ತೆ ಅಪಘಾತಕ್ಕೆ ತುಂಬು ಗರ್ಭಿಣಿ ಬಲಿ | ಹೊಟ್ಟೆಯಿಂದ ಮಗು ಹೊರಕ್ಕೆ ಚೆಲ್ಲಿದ ಹೃದಯ ವಿದ್ರಾವಕ ಘಟನೆ

ರಾಜಸ್ತಾನ: ತುಂಬು ಗರ್ಭಿಣಿಯ ಟ್ರಕ್ ಹರಿದು ಆಕೆಯ ಹೊಟ್ಟೆಯಲ್ಲಿದ್ದ 7 ತಿಂಗಳ ಮಗು ಹೊರಕ್ಕೆ ಬಂದ ಹೃದಯವಿದ್ರಾವಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಗಂಗ್ರಾರ್ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬೈಕ್​ ಮತ್ತು ಅಪರಿಚಿತ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಗರ್ಭಿಣಿಯೊಬ್ಬಳ ಹೊಟ್ಟೆ ಮೇಲೆ ವಾಹನ ಹರಿದು ಸ್ಥಳದಲ್ಲೇ ತಾಯಿ ಹೇಮಾ ಮೃತಪಟ್ಟಿದ್ದಾರೆ. ಆಕೆಯ ಹೊಟ್ಟೆಯಲ್ಲಿದ್ದ ಮಗು ಮರಣಿಸಿದೆ. ಜತೆಗಿದ್ದ ಗಂಡ ಮತ್ತು 7 ವರ್ಷದ ಮಗನ ಸ್ಥಿತಿ ಗಂಭೀರವಾಗಿದೆ.

ಧೋಲಿ ಮೊಹಲ್ಲಾ ನಿವಾಸಿ ಬಾಲರಾಜ್​ ಎಂಬುವರ ಪತ್ನಿ, ತುಂಬುಗರ್ಭಿಣಿ ಹೇಮಲತಾ ಮತ್ತು ಅವರ ಏಳು ವರ್ಷ ಪ್ರಾಯದ ಮಗ ಮಗ ಬೈಕಿನಲ್ಲಿ ಸಂಚರಿಸುತ್ತಿದ್ದರು. ಹೇಮಾ ಅವರ ದೊಡ್ಡಪ್ಪ ತೀರಿಕೊಂಡ ಪ್ರಯುಕ್ತ ಪ್ರಾರ್ಥನಾ ಕೂಟ ಏರ್ಪಡಿಸಲಾಗಿತ್ತು. ಅಲ್ಲಿ ಪ್ರಾರ್ಥನೆ ಪೂರೈಸಿ ವಾಪಸ್ಸು ಬರುವ ಸಂದರ್ಭದಲ್ಲಿ ಬೈಕ್​ನಲ್ಲಿ ಗಂಗರಾರ್​ನಿಂದ ಚಿತ್ತೋರಗಢದತ್ತ ಬರುತ್ತಿರುವಾಗ, ಹಿಂಬದಿಯಿಂದ ಬಂದ ಟ್ರಕ್ ಒಂದು ಬೈಕಿಗೆ ಡಿಕ್ಕಿ ಹೊಡೆದಿದೆ.

ಈ ವೇಳೆ ರಸ್ತೆಗೆ ಬಿದ್ದ ಗರ್ಭಿಣಿ ಮೇಲೆ ವಾಹನ ಹರಿದಿದೆ. ಮಹಿಳೆ ಮೃತಪಟ್ಟಿದ್ದು, ಆಕೆಯ ಹೊಟ್ಟೆ ಹರಿದು ಮಗು ಹೊರ ಬಂದು ಬಿದ್ದಿದೆ. ಹಾಗೇ ಬಂದ ಮಗುವನ್ನ ಉಳಿಸಲು ಸಾರ್ವಜನಿಕರ ನೆರವಿನಿಂದ ಸ್ಥಳಕ್ಕೆ ವೈದ್ಯರು ದೌಡಾಯಿಸಿದ್ದರಾದರೂ ಮಗು ಬದುಕಲಿಲ್ಲ. ಬೈಕ್​ ಸವಾರ ಬಾಲರಾಜ್​ ಬೈಕ್​ ಸಹಿತ ರಸ್ತೆಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ. 7 ವರ್ಷದ ಮಗನ ಸ್ಥಿತಿಯೂ ಚಿಂತಾಜನಕವಾಗಿದೆ. ಅಪ್ಪ-ಮಗ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ನಡುರಸ್ತೆಯಲ್ಲಿ ವಾಹನಕ್ಕೆ ಗರ್ಭಿಣಿ ಬಲಿಯಾದ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದ್ದು, ಆಕ್ರೋಶಗೊಂಡ ಸ್ಥಳೀಯರನ್ನು ಸಮಾಧಾನಪಡಿಸುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು.

Leave A Reply

Your email address will not be published.