ಬೈಕ್’ಗೆ ಬೊಲೆರೋ ಡಿಕ್ಕಿ: ಬೈಕ್ ಸವಾರ ಸಾವು

ಬ್ರಹ್ಮಾವರ: ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ನಿನ್ನೆ ತಾಲೂಕಿನ ನಡೂರಿನಲ್ಲಿ ನಡೆದಿದೆ.

 

ಕಾಡೂರಿನ ದಿನಸಿ ಅಂಗಡಿ ಮಾಲೀಕ, ನಡೂರು ನಿವಾಸಿ ಹರೀಶ (56) ಮೃತಪಟ್ಟವರು. ಇವರು ನಿನ್ನೆ ಮುಂಜಾನೆ ತನ್ನ ಅಂಗಡಿಯಿಂದ ಮನೆ ಕಡೆ ಬರುತ್ತಿದ್ದಾಗ ಬಾರ್ಕೂರಿನಿಂದ ಮಂದಾರ್ತಿಯಿಂದ ಬಂದ ಬೊಲೆರೋ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿ ರಭಸಕ್ಕೆ ಕ್ಕೆ ಹರೀಶ್ ರಸ್ತೆಗೆ ಎನೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ಬ್ರಹ್ಮಾವರ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.

ಮೃತರ ಸಹೋದರ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ.
ಮೃತ ಹರೀಶ್ ಪೂಜಾರಿ ಕಳೆದ ಎಂಟು ತಿಂಗಳ ಹಿಂದೆ ಮದುವೆಯಾಗಿದ್ದು ಮೂರು ತಿಂಗಳ ಗರ್ಭಿಣಿ ಪತ್ನಿ, ತಂದೆ, ತಾಯಿ, ಸಹೋದರರನ್ನು ಅಗಲಿದ್ದಾರೆ.

Leave A Reply

Your email address will not be published.