ಲಸಿಕೆ ಅಭಿಯಾನಕ್ಕೆ ಸಾಲುಗಟ್ಟಿ ಬಂದ ಜನ | ದೇಶದಲ್ಲಿ ಒಂದೇ ದಿನ 81 ಲಕ್ಷ ಲಸಿಕೆ, ರಾಜ್ಯದಲ್ಲಿ 10 ಲಕ್ಷ ಜನರಿಗೆ ವಿತರಣೆ !

ನವದೆಹಲಿ: ಭಾರತದ ಬೃಹತ್ ಲಸಿಕೆ ಅಭಿಯಾನಕ್ಕೆ ನ ಭೂತೋ… ಸ್ಪಂದನೆ ವ್ಯಕ್ತವಾಗಿದ್ದು, ಅಭಿಯಾನದ ಮೊದಲ ದಿನವೇ ಸುಮಾರು ಬರೋಬ್ಬರಿ 81 ಲಕ್ಷ ಮಂದಿಗೆ ಲಸಿಕೆ ಹಾಕಿಸಲಾಗಿದೆ.

 

ಕೋವಿಡ್-19 ಲಸಿಕೀಕರಣಕ್ಕಾಗಿ ಹೊಸ ಮಾರ್ಗಸೂಚಿಗಳನ್ನು ವಿಧಿಸಿ ಇಂದು ಅಭಿಯಾನವನ್ನು ಆರಂಭಿಸಿದ ಭಾರತ, ಪ್ರಥಮ ದಿನವೇ ಒಟ್ಟು 80,95,314 ಮಂದಿಗೆ ಲಸಿಕೆ ಹಾಕಿಸುವ ಮೂಲಕ ಲಸಿಕೆಯ ಅಗತ್ಯ ಜನರಿಗೆ ಸರಿಯಾಗಿ ಮನವರಿಕೆ ಆಗಿದೆ ಎಂಬುದು ಸ್ಪಷ್ಟವಾಗಿದೆ.

ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ಕೋರೊನಾ ಲಸಿಕೆ ನೀಡಲಾಗುವುದು ಎಂದು ಜೂ. 7ರಂದ ಫೇಸ್ಟುಕ್ ಘೋಷಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅದನ್ನು ಎಂದು ಆರಂಭಿಸಿ ಯಶಸ್ವಿ ಕೂಡ ಆಗಿದ್ದಾರೆ.
ಸಕಲ ಸಿದ್ಧತೆಗಳೊಂದಿಗೆ ತೀರಾ ವ್ಯವಸ್ಥಿತವಾಗಿ ಲಸಿಕಾ ವಿತರಣೆಗೆ ಮುಂದಾಗಿರುವ ಕೇಂದ್ರ ಸರ್ಕಾರ ದೇಶದ ಅಷ್ಟೂ ರಾಜ್ಯಗಳಿಗೆ ಉಚಿತವಾಗಿ ಲಸಿಕೆ ತಲುಪಿಸಿ, ಜನರಿಗೆ ಒದಗಿಸಿದೆ.
ಪ್ರಧಾನಿಯವರ ಕರೆಗೆ ಜನರೂ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರಿಂದ ಬೃಹತ್ ಲಸಿಕೆ ಅಭಿಯಾನ ಭರ್ಜರಿ ಆರಂಭವನ್ನೇ ದಾಖಲಿಸಿದೆ.

ಇನ್ನು ದೇಶದಲ್ಲಿ ಅತಿಹೆಚ್ಚು ಲಸಿಕೆ ಕೊಡಿಸಿದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಹಿರಿಮೆಯನ್ನು ಸಾಧಿಸಿದೆ. ಕರ್ನಾಟಕದಲ್ಲಿ ಲಸಿಕೆ ಅಭಿಯಾನದ ಮೊದಲ ದಿನವೇ 10,67,734 ಮಂದಿಗೆ ಲಸಿಕೆ ಹಾಕಿಸಲಾಗಿದೆ. 15,42,632 ಮಂದಿಗೆ ಒಂದೇ ದಿನದಲ್ಲಿ ಲಸಿಕೆ ಹಾಕಿಸುವ ಮೂಲಕ ಮಧ್ಯಪ್ರದೇಶ ಈ ಬೃಹತ್ ಲಸಿಕೆ ಅಭಿಯಾನದಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

Leave A Reply

Your email address will not be published.