ಧರ್ಮಸ್ಥಳ | ಬೇರೆ ಜಿಲ್ಲೆಯಿಂದ ಆಗಮಿಸುವವರನ್ನು ತಡೆಯುವ ಬಗ್ಗೆ ಗ್ರಾಮ ಪಂಚಾಯತ್ ನಿಂದ ಒಮ್ಮತದ ತೀರ್ಮಾನ
ತಾಲೂಕು ಆಡಳಿತ ಬೆಳ್ತಂಗಡಿ ಹಾಗೂ ಧರ್ಮಸ್ಥಳ ಗ್ರಾಮ ಕಾರ್ಯಪಡೆ ಸಮಿತಿ ಸಭೆಯು ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಪಿ. ಶ್ರೀನಿವಾಸ್ ರಾವ್ ಇವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.
ಬೇರೆ ಬೇರೆ ಜಿಲ್ಲೆಯಿಂದ ಆಗಮಿಸುವ ಯಾತ್ರಾರ್ಥಿಗಳು ಹಾಗೂ ಜನರನ್ನು ತಡೆಯುವ ನಿಟ್ಟಿನಲ್ಲಿ ಚಾರ್ಮಾಡಿ, ಕೊಕ್ಕಡ, ಬೆಳ್ತಂಗಡಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಾನ್ಯ ತಹಸಿಲ್ದಾರ್ ಶ್ರೀ ಮಹೇಶ್ ಇವರು ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಲಾಕ್ ಡೌನ್ ಮುಗಿಯುವ ತನಕ ಹರಿಕೆ ಮಂಡೆಯನ್ನು ತೆರೆಯದಂತೆ ಟೆಂಡರ್ ದಾರರಿಗೆ ತಾಲೂಕು ಆಡಳಿತದಿಂದ ತಿಳಿಸಲಾಯಿತು. ಈ ಬಗ್ಗೆ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಸ್ಥಳೀಯ ಆಡಳಿತ ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ, ಒಟ್ಟು ಸೇರಿ ಒಮ್ಮತದಿಂದ ಕೆಲಸ ನಿರ್ವಹಿಸಲು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿಗಳಾದ ಡಾಕ್ಟರ್ ಕಲಾಮಧು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ಕೆ, ಧರ್ಮಸ್ಥಳ ಪೊಲೀಸ್ ನಿರೀಕ್ಷಕ ಶ್ರೀ ಚಂದ್ರಶೇಖರ್, ಗ್ರಾಮಕರಣಿಕರಾದ ಶ್ರೀ ಪ್ರದೀಪ್ , ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಸುಧಾಕರ ಗೌಡ, ಶ್ರೀ ರವಿಕುಮಾರ್, ಶ್ರೀ ಹರೀಶ್ ಸುವರ್ಣ, ಶ್ರೀ ಹರ್ಷಿತ್ ಜೈನ್, ಶ್ರೀ ದಿನೇಶ್ ರಾವ್, ಗ್ರಾಮ ಕಾರ್ಯಪಡೆ ಸದಸ್ಯರು ಉಪಸ್ಥಿತರಿದ್ದರು. ಡಾ.ದೇವಿಪ್ರಸಾದ್ ಬೊಲ್ಮ ಸ್ವಾಗತ ನೀಡಿ ವಂದಿಸಿದರು.