ಆನ್ಲೈನ್ ಕ್ಲಾಸ್ ಕೇಳಲು ನರಕ ಅನುಭವಿಸುತ್ತಿದ್ದಾರೆ ಗುತ್ತಿಗಾರು-ಮೊಗ್ರದ ಮಕ್ಕಳು

ಸುಳ್ಯ: ಕೋವಿಡ್ ಎರಡನೆಯ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಮತ್ತೊಮ್ಮೆ ಮುಚ್ಚಿದ್ದು ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣ ನರಕದರ್ಶನ ಅನುಭವಿಸುವಂತೆ ಮಾಡಿದೆ.

ಗಾಳಿ ಮಳೆಗೆ ತಂದೆಯೊಂದಿಗೆ ಛತ್ರಿ ಹಿಡಿದು ಆನ್ಲೈನ್ ಕ್ಲಾಸ್

ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ-ಬಳ್ಳಕ್ಕ ನಿವಾಸಿ ವಿದ್ಯಾರ್ಥಿಗಳು ಆನ್ಲೈನ್ ಕ್ಲಾಸ್ ಕೇಳಲು ಎಲ್ಲಿಲ್ಲದ ಕಷ್ಟಪಡುತ್ತಿದ್ದಾರೆ. ಇಲ್ಲಿಯ ಮಕ್ಕಳನ್ನು ನೆಟ್ವರ್ಕ್ ಸಮಸ್ಯೆ ಅತಿಯಾಗಿ ಕಾಣುತ್ತಿದೆ. ಶಿಕ್ಷಣ ಇಲಾಖೆ ಆನ್ಲೈನ್ ತರಗತಿಗೆ ಹಾಜರಾತಿಯನ್ನು ಕಡ್ಡಾಯಗೊಳಿಸಿಲ್ಲ. ಆದರೆ ತರಗತಿಯಲ್ಲಿ ನಡೆಯುವ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿದುಕೊಳ್ಳಲು ಇದಕ್ಕೆ ಪೂರಕ ವ್ಯವಸ್ಥೆ ಇನ್ನೊಂದಿಲ್ಲ. ಆದ್ದರಿಂದ ಆನ್ಲೈನ್ ತರಗತಿಗೆ ಸೇರಿಕೊಳ್ಳುವುದು ಅನಿವಾರ್ಯವಾಗಿದೆ. ಈ ಹಿನ್ನಲೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಮೊಬೈಲ್ ಹಿಡಿದುಕೊಂಡು ಗುಡ್ಡಗಾಡು ಅಲೆದಾಡುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳ ಮನೆಯವರು ಕೊಡೆ ಹಿಡಿದುಕೊಂಡು ಮಕ್ಕಳ ಜೊತೆ ಸುತ್ತಾಡುವುದು ಕಂಡುಬರುತ್ತಿದೆ. ಈ ಕುಗ್ರಾಮ ವಿದ್ಯುತ್ ನೋಡುವುದಂತೂ ಅಪರೂಪಕ್ಕೊಮ್ಮೆ. ಜೊತೆಗೆ ನೆಟ್ವರ್ಕ್ ಸಮಸ್ಯೆಯ ಕಥೆ ಹೇಳಿ ಸುಖವಿಲ್ಲದಂತಾಗಿದೆ.

ರಸ್ತೆ ಬದಿ ಕೂತು ಆನ್ಲೈನ್ ಕ್ಲಾಸ್

ಗ್ರಾಮದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಜನಪ್ರತಿನಿಧಿಗಳನ್ನು ಹಾಗೂ ಜಿಲ್ಲಾಡಳಿತವನ್ನು ಹಲವು ಬಾರಿ ಬೇಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಭರವಸೆಯೊಂದನ್ನೇ ನೀಡುತ್ತಿದ್ದಾರೆ ಹೊರತು ಸಮಸ್ಯೆ ಬಗೆಹರಿದಿಲ್ಲ. ಇನ್ನಾದರೂ ಸಂಬಂಧಪಟ್ಟವರು ಈಕಡೆ ಗಮನಹರಿಸಲಿ ಎನ್ನುವುದು ಗ್ರಾಮಸ್ಥರ ಕೋರಿಕೆ.

Leave A Reply

Your email address will not be published.