ಕಡಬ | ಕೊಯಿಲ ಶಾಲಾ ಆವರಣದಲ್ಲಿ ಮೋಜು ಮಸ್ತಿ ಮಾಡಿದ ಪುಂಡರು

ಕಡಬ: ಲಾಕ್ ಡೌನ್ ಸಂದರ್ಭ ಸರ್ಕಾರಿ ಶಾಲೆಯೊಂದರಲ್ಲಿ ಕಿಡಿಗೇಡಿಗಳು ಮೋಜು ಮಸ್ತಿಯಾಟದಲ್ಲಿ ತೊಡಗಿದ ಘಟನೆ ಜೂನ್.೧೬ ರಂದು ರಾತ್ರಿ ನಡೆದಿದೆ. ಕಡಬ ತಾಲೂಕು ಕೊಯಿಲ ಸರ್ಕಾರಿ ಶಾಲೆಗೆ ಕಾರು ಹಾಗೂ ಬೈಕ್ ನಲ್ಲಿ ಬಂದ ಸುಮಾರು 10 ಕ್ಕೂ ಹೆಚ್ಚು ಕಿಡಿಗೇಡುಗಳು ಶಾಲಾ ಜಗಲಿ ,ಅವರಣದಲ್ಲಿ ಕಿಡಿಗೇಡಿತನ ಮೆರೆದಿದ್ದಾರೆ. ಅಲ್ಲೆ ಮಾಂಸದೂಟ ತಯಾರಿಸಿದ ಕುರುಹು ಕಂಡುಬಂದಿದೆ.

 

ಬೀಡಿ ಸಿಗರೇಟು ಗಳು ಸ್ಥಳದಲ್ಲಿ ಕಂಡುಬಂದಿದೆ. ಶಾಲಾ ಸುತ್ತಮುತ್ತಲಿನ ಸ್ಥಳಿಯ ನಿವಾಸಿಗಳು ರಾತ್ರಿ ಗಾಳಿ ಮಳೆಯಿಂದಾಗಿ ವಿದ್ಯುತ್ ವತ್ಯಯ ಉಂಟಾದ ಹಿನ್ನಲೆಯಲ್ಲಿ ಪರಿಶೀಲುವ ಸಲುವಾಗಿ ಶಾಲೆ ಪರಿಸರಕ್ಕೆ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಶಾಲಾ ಅವರಣದ ಪಕ್ಕದಲ್ಲಿ ವಾಹನಗಳು ನಿಲುಗಡೆಯಾಗಿರುವುದನ್ನು ಕಂಡು ಶಾಲೆ ಪಕ್ಕ ತೆರಳಿದಾಗ ಕಿಡಿಗೇಡಿಗಳು ಪಲಾಯನ ಮಾಡಿದ್ದಾರೆ.

ಸ್ಥಳಿಯರು ಕಡಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

Leave A Reply

Your email address will not be published.