5 ದಿನದ ಬಾಣಂತಿ ಕೋವಿಡ್ ಗೆ ಬಲಿ | ಮೂರು ಮಕ್ಕಳನ್ನು ತಬ್ಬಲಿಯಾಗಿಸಿದ ಮಹಾಮಾರಿ

ಕೋವಿಡ್ ಅಟ್ಟಹಾಸಕ್ಕೆ ಹಲವರು ತಮ್ಮ ಜೀವ ಕಳೆದುಕೊಂಡಿದ್ದಾರೆ.ಹಲವು ಮಂದಿ ಅನಾಥರಾಗಿದ್ದಾರೆ.ಹಲವು ಮಂದಿ ತಂದೆ ತಾಯಿ ಬಂಧು ಗಳನ್ನು ಕಳೆದುಕೊಂಡಿದ್ದಾರೆ.

 

ಹೀಗೆ ಬಾಣಂತಿಯೊಬ್ಬರು 5 ನೇ ದಿನಕ್ಕೆ ಮೃತಪಟ್ಟಿದ್ದಾರೆ.

ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಶಿಲ್ಪಶ್ರೀ ಅವರು ಹೆರಿಗೆಯಾಗಿ 4 ದಿನವಾಗಿತ್ತು. 5ನೇ ದಿನಕ್ಕೆ ಕೊರೊನಾದಿಂದ ಬಾಣಂತಿ ಶಿಲ್ಪಶ್ರೀ ಮೃತಪಟ್ಟಿದ್ದಾರೆ‌.

ಶಿಲ್ಪಶ್ರೀ ಅವರ ಪತಿ ಜಿ.ಟಿ.ವೀರೇಶ್​ ಅವರು ಬೆಂಗಳೂರಿನ ರಕ್ತನಿಧಿ ಕೇಂದ್ರದ ನೌಕರ. ದಂಪತಿ ಇಬ್ಬರೂ ಬೆಂಗಳೂರಿನಲ್ಲೇ ವಾಸವಿದ್ದರು. ಈಗಾಗಲೇ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಇದೀಗ ಜನಿಸಿರುವ 3ನೇ ಮಗು ಗಂಡು. ಗರ್ಭಿಣಿಯಾಗಿದ್ದ ಶಿಲ್ಪಶ್ರೀಗೆ ಹತ್ತು ದಿನದ ಹಿಂದೆ ಕರೊನಾ ಸೋಂಕು ತಗುಲಿತ್ತು. ಅವರನ್ನು ಮಂಡ್ಯದ ಕರೊನಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿಲ್ಪಶ್ರೀ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನ ತೆಗೆದಿದ್ದರು.

ಮಗುವಿಗೆ ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ತೀವ್ರನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ತೀವ್ರ ಉಸಿರಾಟ ಸಮಸ್ಯೆಯಿಂದ ಶಿಲ್ಪಶ್ರೀ ಮಂಗಳವಾರ ಕೊನೆಯುಸಿರೆಳೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಶಿಲ್ಪಶ್ರೀ ಅವರ ಅಂತ್ಯಕ್ರಿಯೆಯನ್ನು ಪುರಸಭಾ ಸದಸ್ಯ ಪ್ರಿಯಾಂಕ ಅಪ್ಪುಗೌಡ, ಸಮಾಜ ಸೇವಕರಾದ ಅಪ್ಪು ಪಿ. ಗೌಡ, ಶ್ರೇಯಸ್, ಅಭಿಷೇಕ್ ಮತ್ತು ತಂಡ ನೆರವೇರಿಸಲಾಯಿತು.

Leave A Reply

Your email address will not be published.