ಪ್ರಿಯಕರನನ್ನು ಹುಡುಕಿ ಬೆಂಗಳೂರಿಗೆ ಬಂದ ಯುವತಿ, ಅತನಿಂದಾಗಿಯೇ ಜೈಲು ಸೇರಿದಳು..ಆತನಿಗಾಗಿ ಅಕ್ರಮ ಗಾಂಜಾ ಮಾರಾಟಕ್ಕಿಳಿದ ಆಕೆ ಈಗ ಪೊಲೀಸರ ಅತಿಥಿ

 

ಪ್ರಿಯಕರನಿಗಾಗಿ ದೂರದ ಊರಿಂದ ಬಂದ ಯುವತಿಯೋರ್ವಳು, ಆತನ ಮಾತು ನಂಬಿ ಗಾಂಜಾ ಮಾರಾಟಕ್ಕಿಳಿದು ಸದ್ಯ ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ತನ್ನ ಪ್ರಿಯಕರನಿಗಾಗಿ ಪೋಷಕರನ್ನು ದೂರ ಮಾಡಿ ಆತನನ್ನು ಹುಡುಕಿಕೊಂಡು ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಬಂದ ಯುವತಿಯು ಆತನ ಮಾತು ಕೇಳಿ ಗಾಂಜಾ ಮಾರಾಟಕ್ಕೆ ಇಳಿದಿದ್ದಾಳೆ. ಬಂಧಿತ ಮಹಿಳಾ ಆರೋಪಿ ಆಂಧ್ರಪ್ರದೇಶ ಶ್ರೀಕಾಕುಳಂನ 25 ವರ್ಷದ ರೇಣುಕಾ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಮಾರತ್ತಹಳ್ಳಿಯ ಪಿಜಿಯಲ್ಲಿ ವಾಸವಾಗಿದ್ದಳು ಎಂದು ತಿಳಿದು ಬಂದಿದೆ.

ತನ್ನ ಪ್ರಿಯತಮನಿಗಾಗಿ ಅಕ್ರಮ ಗಾಂಜಾ ಮಾರಾಟಕ್ಕಿಳಿದ ಯುವತಿ ಪಿಜಿಯಲ್ಲಿದ್ದುಕೊಂಡೇ ಗಾಂಜಾ ಮಾರುತ್ತಿದ್ದಳು ಎಂಬುದು ಸಾಬೀತಾಗಿದೆ. ಆಕೆಯು ಸದಾಶಿವನಗರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಪೂರೈಕೆ ಮಾಡುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ.

Leave A Reply

Your email address will not be published.