ಮದುವೆಗೆ ಸೀರೆ ಚಾಯ್ಸ್ ಮಾಡ್ಬೇಕು ಬಾ ಎಂದು ಭಾವೀ ಪತ್ನಿನ ಕರೆದ | ಮದ್ವೆಗೆ 5 ದಿನ ಬಾಕಿ ಇರುವಾಗಲೇ ನಡೀತು ಆಕೆಯ ಕೊಲೆ !

ಲಕ್ನೋ: ವ್ಯಕ್ತಿಯೊಬ್ಬ ತನ್ನ ಮದುವೆಗೆ ಇನ್ನೇನು 5 ದಿನ ಬಾಕಿ ಇರುವಾಗಲೇ ಭಾವಿ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಘಟನೆ ನಡೆದಿದೆ.

ಉತ್ತರಪ್ರದೇಶದ ಮೊರದಾಬಾದ್ ನಲ್ಲಿ ಈ ಘಟನೆ ನಡೆದಿದ್ದು
ಆರೋಪಿಯನ್ನು ಜಿತಿನ್ ಎಂದು ಗುರುತಿಸಲಾಗಿದ್ದು, ಈತ ಭಾವಿ ಪತ್ನಿ ಟೀನಾಳನ್ನು ಕೊಲೆ ಮಾಡಿದ್ದಾನೆ.

ಮೊನ್ನೆ ಸೋಮವಾರ ಟೀನಾಳಿಗೆ ಕರೆ ಮಾಡಿದ ಜಿತಿನ್, ಮದುವೆಗೆ ಕೆಲವೊಂದಷ್ಟು ಸೀರೆಗಳನ್ನು ಖರೀದಿಸಲು ಇದೆ. ಹೀಗಾಗಿ ನೀನು ಬರಬೇಕು ಎಂದು ಹೇಳಿದ್ದಾನೆ. ಭಾವಿ ಪತಿಯ ಮಾತು ಕೇಳಿದ ಟೀನಾ ಖುಷಿಯಿಂದ ಹೊರಟಿದ್ದಾಳೆ. ಅಂತೆಯೇ ಟೀನಾಳನ್ನು ಆಕೆಯ ತಾಯಿ ಬೆಳಗ್ಗೆ 11 ಗಂಟೆ ಸುಮಾರಿಗೆ ಬಸ್ ನಿಲ್ದಾಣದ ಬಳಿ ಬಿಟ್ಟು ಬಂದಿದ್ದಾರೆ.

ಇತ್ತ ಅದೇ ದಿನ ಮಧ್ಯಾಹ್ನ 2.30 ರ ಸುಮಾರಿಗೆ ರಸ್ತೆ ಬದಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿತ್ತು. ಕೂಡಲೇ ಮೃತಳ ಗುರುತು ಪತ್ತೆ ಹಚ್ಚಿದ ಪೊಲೀಸರು ಆಕೆಯ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ಟೀನಾ ಕುಟುಂಬಸ್ಥರು, ಕೆಲ ಗಂಟೆಗಳ ಹಿಂದೆಯಷ್ಟೇ ಆಕೆ ತನ್ನ ಭಾವಿ ಪತಿಯನ್ನು ಭೇಟಿಯಾಗಲು ತೆರಳಿದ್ದಾಳೆ ಎಂದು ಹೇಳಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಇತ್ತ ಟೀನಾ ಮೃತದೇಹವನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.

ಜಿತಿನ್ ಹಾಗೂ ಟೀನಾ ಲವ್ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಕೂಡ ನಡೆಯಲಿತ್ತು. ಆದರೆ ಜಿತಿನ್ ಮಾತ್ರ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದನು. ಲವ್ ಎಂದು ಹಲವು ದಿನ ಓಡಾಡಿದ ನಂತರ ಆತನಿಗೆ ಆಕೆ ಬೋರ್ ಹೊಡೆಯಲು ಆರಂಭ ಆಗಿದ್ದಳು. ಹೇಗಾದರೂ ಮಾಡಿ ಈ ಮದುವೆಯನ್ನು ನಿಲ್ಲಿಸಬೇಕೆಂದು ಅಂದುಕೊಂಡಿದ್ದಾನೆ. ದಿನಗಳನ್ನು ತುಂಬಾ ರಿಕ್ವೆಸ್ಟ್ ಮಾಡಿಕೊಂಡಿದ್ದಾನೆ. ಆದ್ರೆ ಮದುವೆ ನಿಲ್ಲಿಸಲು ಟೀನಾ ಒಪ್ಪಿಲ್ಲ  ಕಡೆಯದಾಗಿ ಏನೂ ಮಾಡಲಾರದ ಆತ ಆಕೆಯನ್ನು ಕೊಲೆ ಮಾಡಿ ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿದ್ದಾನೆ. ಆದರೆ ಕೊಲೆ ನಡೆದ ವಿಷಯ ಯಾರಿಗೂ ತಿಳಿದಿರಲಿಲ್ಲ.

ಸೋಮವಾರ ಟೀನಾ ಆಗಲಿ ಜಿತಿನ್ ಆಗಲಿ ಮನೆಗೆ ಮರಳಿರಲಿಲ್ಲ. ಈ ವೇಳೆ ಅವಳ ಕುಟುಂಬವು ಎಲ್ಲಾ ಕಡೆ ಹುಡುಕಾಟ ನಡೆಸಿದೆ. ಆದರೆ ಟೀನಾಳನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇನ್ನೇನು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಮೊದಲೇ ಆಟೋ ಚಾಲಕರು ಬಳಿಕ ಆಕೆಯ ಶವ ಗ್ರಾಮದ ಹೊರಗೆ, ರಸ್ತೆಬದಿಯಲ್ಲಿ ಪತ್ತೆಯಾಗಿರುವ ಸುದ್ದಿ ತಂದಿದ್ದರು. ಸ್ಥಳಕ್ಕೆ ತೆರಳಿದ ಕುಟುಂಬಸ್ಥರು ಶವವನ್ನು ಗುರುತಿಸಿ, ಜಿತಿನ್ ಸೀರೆ ಖರೀದಿಸಲು ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿ ಕತ್ತು ಹಿಸುಕಿದ್ದಾರೆ ಎಂದು ಆರೋಪಿಸಿದ್ದಾರೆ. ಜಿತಿನ್ ಈ ಕೃತ್ಯ ಎಸಗಲು ಆ ದಿನ ಬೇರೆ ಏನಾದರೂ ಘಟನೆ ನಡೆದಿತ್ತಾ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.