18 ವರ್ಷ ಮೇಲ್ಪಟ್ಟವರಿಗೆ ಇನ್ನುಮುಂದೆ ಕೋವಿಡ್ ಲಸಿಕೆ ಪಡೆಯಲು ಮುಂಗಡ ನೋಂದಾವಣೆ ಕಡ್ಡಾಯವಲ್ಲ | ಕೇಂದ್ರ ಸರ್ಕಾರ

ನವದೆಹಲಿ: ಕೊರೋನ ಲಸಿಕೆ ಪಡೆಯಲು ಮುಂಚಿತವಾಗಿ ಆನ್ ಲೈನ್ ನೋಂದಣಿ ಹಾಗೂ ಕಾಯ್ದಿರಿಸುವಿಕೆ ಇನ್ನು ಮುಂದೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಸಮೀಪದ ಲಸಿಕಾ ಕೇಂದ್ರಕ್ಕೆ ಹೋಗಿ ನೋಂದಾವಣೆ ಮಾಡಿಸಿಕೊಂಡು ಲಸಿಕೆ ಪಡೆದುಕೊಳ್ಳಬಹುದಾಗಿದೆ.
ಗ್ರಾಮೀಣ ಭಾಗದ ಜನತೆ ಲಸಿಕೆ ಪಡೆಯಲು ತೊಂದರೆ ಪಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ನೀತಿಯನ್ನು ಬದಲಾವಣೆ ಮಾಡಿದೆ.

ಕೇಂದ್ರದ ಮಾಹಿತಿ ಪ್ರಕಾರ, ಕೊವಿನ್ ಪೋರ್ಟಲ್ನಲ್ಲಿ ಲಸಿಕೆ ರಿಜಿಸ್ಟ್ರೇಷನ್ ಮಾಡಿಸಿಕೊಂಡಿರುವ 28.36 ಕೋಟಿ ಜನರ ಪೈಕಿ, 16.45 ಕೋಟಿ ಮಂದಿ (ಶೇಕಡಾ 58ರಷ್ಟು) ನೇರವಾಗಿ ವಾಕ್‌ಇನ್ (ನೋಂದಣಿ ಮಾಡದೆ) ಮೂಲಕ ಲಸಿಕೆ ಪಡೆದುಕೊಂಡವರಾಗಿದ್ದಾರೆ.

ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಎಂದು ಮೋದಿ ಘೋಷಣೆ ಮಾಡಿದ್ದರು. ಇದರ ಸಲುವಾಗಿ ಮುಂದಿನ ವಾರದಿಂದ ಕೊರೊನಾ ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

Leave A Reply

Your email address will not be published.