ಎಣ್ಣೆ ಅಂಗಡಿ ರೀ ಓಪನ್ ಸಂಭ್ರಮ | ಬಾಟಲ್ ನಿಂದಲೆ ಆರತಿ ಬೆಳಗಿ ಶಾಸ್ತ್ರೋಕ್ತವಾಗಿ ಬರಮಾಡಿಕೊಂಡ ಮದ್ಯ ಪ್ರಿಯ !!

ಚೆನ್ನೈ(ಜೂ. 15) : ಮದ್ಯ ಖರೀದಿಗೆ ತೆರಳುವ ಮುನ್ನ ಮದ್ಯದಂಗಡಿ ಯನ್ನು  ಆರತಿ ಬೆಳಗಿಸಿ ಪೂಜಿಸಿದ ವ್ಯಕ್ತಿಯೊಬ್ಬ ನಂತರ ಮದ್ಯದ ಬಾಟಲ್ ಗಳನ್ನು  ಖರೀದಿ ಮಾಡಿ ತಂದು ಸಂಭ್ರಮಿಸಿದ ಘಟನೆ ಮದ್ಯ ಮತ್ತೆರಿಸಿದಷ್ಟೆ ವೇಗದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿದೆ.

ಒಂದು ಕೈಯಲ್ಲಿ ಒಂದು ಬಾಟಲ್, ಇನ್ನೊಂದು ಕೈಯಲ್ಲಿ ಮತ್ತೊಂದು ಬಾಟಲ್ ಹಿಡಿದ ವಿಡಿಯೋ ವೈರಲ್ ಆಗಿದೆ.

ಕರ್ನಾಟಕದಂತೆ ಪಕ್ಕದ ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳು ತೆರೆದುಕೊಂಡಿವೆ. ಅಂಗಡಿ ತೆರೆದುಕೊಂಡಿದ್ದರೆ ಒಂದು ಸುದ್ದಿ ಎನ್ನಬಹುದಿತ್ತು. ಆದರೆ ಮದ್ಯಪ್ರಿಯನೊಬ್ಬ  ಇದನ್ನು ಸಂಭ್ರಮದಿಂದ ಶಾಸ್ತ್ರೋಕ್ತವಾಗಿ (!!) ಬರಮಾಡಿಕೊಂಡ ರೀತಿ ಮಾತ್ರ ಅದ್ಭುತ !

ವಾರಗಟ್ಟಲೆ ಗಂಟಲಿಗೆ ಸರಿಯಾಗಿ ಬಿದ್ದಿರದೆ ಇರುವ ಮದ್ಯಪ್ರಿಯರ ಓರ್ವ ಪ್ರತಿನಿಧಿ ಮದ್ಯದಂಗಡಿಗಳು ಆಗುವುದನ್ನು ಓಪನ್ ಆಗಿರುವುದನ್ನು ಮನಸಾರೆ ಸ್ವಾಗತಿಸಿದ ಪರಿ.

ಕಳೆದ ಮೇ 10 ರಿಂದ ತಮಿಳುನಾಡಿನಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿದ್ದವು. ಕೊರೋನಾ ಕಾರಣಕ್ಕೆ ಕಠಿಣ ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿತ್ತು. ಒಟ್ಟಿನಲ್ಲಿ ಈ ಮದ್ಯಪ್ರಿಯರ ಸಂಭ್ರಮವನ್ನು ನೋಡಿಯೇ ಅನುಭವಿಸಬೇಕು. ಈ ವಿಡಿಯೋ ನೋಡಿ.

Leave A Reply

Your email address will not be published.