ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಬ್ಲಡ್ ಇದೆಯೇ ?!
ಭಾರತ್ ಬಯೋಟೆಕ್ ಸಂಸ್ಥೆ ತಯಾರಿಸುತ್ತಿರುವ ವ್ಯಾಕ್ಸಿನ್ ಕೊರೋನ ಲಸಿಕೆಯಲ್ಲಿ ಕರುವಿನ ಬ್ಲಡ್ ಅನ್ನು ಬಳಸಲಾಗುತ್ತದೆ ಎಂದು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ. ಗೋವುಗಳ ಕರುಗಳನ್ನು ಕೊಂದು ಅವುಗಳ ಬ್ಲಡ್ ನಿಂದ ಕೋರೋನಾ ಲಸಿಕೆ ತಯಾರಿಸಲಾಗುತ್ತಿದೆ ಎನ್ನುವುದು ಒಂದು ದೊಡ್ಡ ವರ್ಗದ ಕೂಗು.
ಸಾಮಾಜಿಕ ಜಾಲ ತಾಣಗಳಲ್ಲಿ ಮೋದಿ ಸರಕಾರವನ್ನು ಹಣಿಯುವ ಏಕಮೇವ ಉದ್ದೇಶದಿಂದ ಹಲವು ಪೋಸ್ಟ್ ಗಳು ಹರಿದಾಡುತ್ತಿವೆ. ಈಗ ಇದರ ಬಗ್ಗೆ ಭಾರತ ಸರ್ಕಾರ ಮತ್ತು ವೈದ್ಯಕೀಯ ರಂಗದ ಫಾರ್ಮಸ್ಯೂಟಿಕಲ್ ದಿಗ್ಗಜರು ಉತ್ತರ ನೀಡಿದ್ದಾರೆ.
ಉತ್ತರ 1 : ಕೋವಾಕ್ಸಿನ್ ಲಸಿಕೆಯ ಫೈನಲ್ ಪ್ರೋಡಕ್ಟ್ ನಲ್ಲಿ ಕರುವಿನ ಸಿರಂ ಇಲ್ಲ.
ಉತ್ತರ 2 : ಇಲ್ಲಿ ಕರುಗಳ ಹತ್ಯೆ ನಡೆಸಲಾಗುವುದಿಲ್ಲ. ಕರುಗಳನ್ನು ಕೊಂದು ಅವುಗಳ ರಕ್ತವನ್ನು ಸಂಗ್ರಹಿಸಲಾಗುತ್ತಿದೆ ಎನ್ನುವುದು ಅವೈಜ್ಞಾನಿಕ ಮತ್ತು ಸುಳ್ಳು.
ಉತ್ತರ 3: ಆಗತಾನೆ ಹುಟ್ಟಿದ ಕರುಗಳ ಸಿರಂ ಅನ್ನು ಕಲೆಕ್ಟ್ ಮಾಡಲಾಗಿದ್ದು, ಈ ಸಿರಂ ಗಳು ಪೋಲಿಯೋ, ರಾಬಿಸ್ ಮುಂತಾದ ರೋಗಗಳಿಗೆ ಲಸಿಕೆ ತಯಾರಿಸಲು ಅಗತ್ಯ. ಹಲವು ದಶಕಗಳಿಂದ ಕರು ಮತ್ತಿತರ ಪ್ರಾಣಿಗಳ ಸಿರಂ ಅನ್ನು ಉಪಯೋಗಿಸಿ ಲಸಿಕೆಗಳನ್ನು ತಯಾರಿಸಲಾಗುತ್ತಿದೆ.
ಉತ್ತರ 4: ಎಳೆಯ ನವಜಾತ ಕರುಗಳ ರಕ್ತದ ಮಾದರಿಗಳನ್ನು ತೆಗೆದುಕೊಂಡು ಅವುಗಳನ್ನು ಕಲ್ಚರ್ ಗ್ರೋಥ್ ಮಾಡಲು ಇಡಲಾಗುತ್ತದೆ. ಅವುಗಳಿಗೆ ಕೋರೋನಾ ವೈರಸ್ ಗಳನ್ನು ಇನ್ ಫೆಕ್ಟ್ ಮಾಡಿ, ಅಲ್ಲಿ ಆ ಮೂಲಕ ಲಸಿಕೆಗೆ ಬೇಕಾದ ವೈರಾಣನ್ನು ತಯಾರು ಮಾಡಲಾಗುತ್ತದೆ. ಆನಂತರ ಆ ವೈರಾಣುಗಳನ್ನು ನೀರು ಮತ್ತು ಹಲವು ಕೆಮಿಕಲ್ ಬಳಸಿ ವಾಶ್ ಮಾಡಿ ಎಕ್ಸ್ಟ್ರಾಕ್ಷನ್ ವಿಧಾನದಿಂದ ಲಸಿಕೆಯನ್ನು ತಯಾರಿಸಲಾಗುತ್ತದೆ. ಲಸಿಕೆಯ ಕೊನೆಯ ಉತ್ಪನ್ನದಲ್ಲಿ ಕರುವಿನ ದೇಹದ ಯಾವುದೇ ವಸ್ತುವಾಗಲಿ, ಬ್ಲಡ್ ಆಗಲಿ ಇರುವುದಿಲ್ಲ.
ಉತ್ತರ 5 : ಎಲ್ಲಾ ಲಸಿಕೆಗಳು ಇದೇ ಮಾದರಿಯಲ್ಲಿ ತಯಾರಾಗುತ್ತವೆ. ಲಸಿಕೆಗಳು ಬಯೋಟೆಕ್ನಾಲಜಿಕಲ್ ಉತ್ಪನ್ನಗಳು. ಇಲ್ಲಿ ಪ್ರಾಣಿಗಳನ್ನು ಕೊಂದು ಹಿಂಸಿಸಲಾಗುತ್ತಿಲ್ಲ.
ಬಹುಶಃ ಓದುಗರಿಗೆ ಈಗ ಸ್ಪಷ್ಟವಾಗಿರಬಹುದು. ಕೊರೋನಾದ ಕೋವ್ಯಾಕ್ಸಿನ್ ನಲ್ಲಿ ದನದ ಅಥವಾ ಕರುವಿನ ರಕ್ತವಾಗಲಿ, ಸಿರಂ ಆಗಲಿ ಇರುವುದಿಲ್ಲ. ನಾವೆಲ್ಲ ಯಾವುದೇ ಅಡೆತಡೆಯಿಲ್ಲದೆ, ಅನುಮಾನಗಳಿಲ್ಲದೆ, ಅಪಪ್ರಚಾರಕ್ಕೆ ಕಿವಿಕೊಡದೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳೋಣ. ಮುಂದೆ ಆಗಬಹುದಾದ ಕೊರೋನಾ ಸಂಬಂಧಿತ ಕಾಯಿಲೆಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳೋಣ.