ಗ್ರಾಹಕ ಸೇವೆ ಹೆಸರಿನಲ್ಲಿ ಮೊಬೈಲ್ ನಂಬರ್ ದಾಖಲೆ ಪಡೆದು 1.27 ಲಕ್ಷ ರೂ. ವಂಚನೆ
ಗ್ರಾಹಕ ಸೇವೆಯ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಸಿಮ್ ದಾಖಲೆಗಳನ್ನು ಕೇಳಿ 1.27ಲಕ್ಷ ರೂ.ವನ್ನು ಅಕ್ರಮವಾಗಿ ವರ್ಗಾವಣೆಗೊಳಿಸಿದ ಕುರಿತು ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಸಿಐಸಿಐ ಬ್ಯಾಂಕ್ನ ಚಿಲಿಂಬಿ ಶಾಖೆಯಲ್ಲಿ ಸೇವಿಂಗ್ ಅಕೌಂಟ್ ಹೊಂದಿರುವ ವ್ಯಕ್ತಿಯೊಬ್ಬರಿಗೆ ಮೊಬೈಲ್ ಸಿಮ್ ನವೀಕರಣದ ಸಲುವಾಗಿ ದಾಖಲೆ ಬೇಕೆಂದು ಕೇಳುವ ನೆಪದಲ್ಲಿ ಗ್ರಾಹಕ ಸೇವೆಯ ಹೆಸರಿನಲ್ಲಿ ಫೋನ್ ಮಾಡುತ್ತಿರುವುದಾಗಿ ಹೇಳಿದ ವ್ಯಕ್ತಿಯೊಬ್ಬ ರೀಚಾರ್ಜ್ ಮಾಡಲು ಬ್ಯಾಂಕ್ನ ನೆಟ್ ಬ್ಯಾಂಕಿಂಗ್ ಆ್ಯಪ್ ಡೌನ್ಲೋಡ್ ಮಾಡಲು ಸೂಚಿಸಿದ್ದಾನೆ.
ಅದರಂತೆ ಬ್ಯಾಂಕ್ ಗ್ರಾಹಕರು ಆ್ಯಪ್ ಡೌನ್ಲೋಡ್ ಮಾಡಿದ್ದಾರೆ. ಸ್ವಲ್ಪ ಸಮಯದ ಬಳಿಕ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ರೂ. 1,27,017 ರೂ. ವನ್ನು ಅನಧಿಕೃತವಾಗಿ ಬೇರೆ ಖಾತೆಗಳಿಗೆ ವರ್ಗಾಯಿಸಿ ಮೋಸ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಹಣ ಕಳೆದುಕೊಂಡ ವ್ಯಕ್ತಿ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.