Ad Widget

ನುಸ್ರತ್ ಜಹಾನ್ ನ 6 ತಿಂಗಳ ಗರ್ಭಕ್ಕೆ ಕಾರಣ ಯಾರು | ನಿಖಿಲ್ ಅಂತಿದ್ದಾನೆ ಅದು ನಾನಲ್ಲ !!!!

ತೃಣಮೂಲ ಕಾಂಗ್ರೆಸ್ ಸಂಸದೆ, ಬೆಂಗಾಲಿ ನಟಿ ಯುವತಿ ನುಸ್ರತ್ ಜಹಾನ್ ಸದಾ ಸುದ್ದಿಯಲ್ಲಿರುತ್ತಾರೆ. ಮೊದಲು ನಟಿಯಾಗಿ, ನಂತರ ಸಂಸದೆಯಾಗಿ, ಆ ಬಳಿಕ ನಿಖಿಲ್ ಜೈನ್ ಜೊತೆ ವಿವಾಹದ ಮೂಲಕ ಎಲ್ಲರ ಗಮನ ಸೆಳೆದಿದ್ದರು.

ಇದೀಗ ಆಕೆಗೆ ಆರು ತಿಂಗಳ ಗರ್ಭಿಣಿ ಎಂಬ ಸುದ್ದಿಹರಿದಾಡುತ್ತಿದೆ. ಆದರೆ ನಿಖಿಲ್ ಜೈನ್ ಮಾತ್ರ ಆ ಮಗು ನನ್ನದಲ್ಲ ಎನ್ನುವ ಮೂಲಕ ಇವರ ಕೌಟುಂಬಿಕ ಕಲಹ ಬೀದಿಗೆ ಮೈಕು ಹಿಡಿದುಕೊಂಡು ಬಂದಿದೆ.

ನುಸ್ರತ್ ಜಹಾನ್ 2019 ಜೂನ್‍ನಲ್ಲಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಟರ್ಕಿಯಲ್ಲಿ ವಿವಾಹವಾಗಿದ್ದರು. ಸ್ವಲ್ಪ ಸಮಯ ಚೆನ್ನಾಗಿತ್ತು ಆ ಬಳಿಕ ಕೆಲ ಕಾರಣಗಳಿಂದ ಇವರಿಬ್ಬರ ನಡುವೆ ಪರಸ್ಪರ ಬಿರುಕು ಮೂಡಿ ಬೇರೆ ಬೇರೆಯಾಗಿದ್ದರು. ಇವರ ಕುಟುಂಬ ಕಲಹ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಆದರೆ ಈ ಬಗ್ಗೆ ಅವರಿಬ್ಬರಿಂದಲೂ ಯಾವುದೇ ಅಧಿಕೃತ ಹೇಳಿಕೆ ಹೊರ ಬಂದಿರಲಿಲ್ಲ.

Ad Widget Ad Widget Ad Widget

ನುಸ್ರತ್ ಈಗ ನಿಖಿಲ್ ಜೈನ್ ಜೊತೆಗಿನ ಮದುವೆಗೆ ಯಾವುದೇ ಮಾನ್ಯತೆ ಇಲ್ಲ. ಟರ್ಕಿಯಲ್ಲಿ ಮದುವೆ ನಡೆದಿದ್ದು, ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ. ನಮ್ಮದು ಲಿವ್ ಇನ್ ರಿಲೇಷನ್‍ಶಿಪ್ ಅಷ್ಟೇ. ಎಂದು ಬಿಂದಾಸ್ ಆಗಿ ಹೇಳಿದ್ದಾಳೆ ನುಸೃತ್ .

ಆದರೆ ಕೆಲ ಮಾಹಿತಿಗಳ ಪ್ರಕಾರ ನುಸ್ರತ್ ಅವರು 6 ತಿಂಗಳ ಗರ್ಭಿಣಿ ಎಂದು ಸುದ್ದಿ ಹರಿದಾಡುತ್ತಿದೆ ಆದರೆ ಇದನ್ನು ಅಧಿಕೃತವಾಗಿ ನುಸ್ರತ್ ಅವರು ಹೇಳಿಕೊಂಡಿಲ್ಲ. ಆದರೆ ನಿಖಿಲ್ ಮಾತ್ರ ಆ ಮಗು ನನ್ನದಲ್ಲ. ನಾವು 6 ತಿಂಗಳಿಂದ ಜೊತೆಯಾಗಿ ಸಂಸಾರ ನಡೆಸುತ್ತಿಲ್ಲ ಎಂದು ನಿಖಿಲ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ನುಸ್ರತ್ ಅವರ ಕುಟುಂಬ ಕಲಹಕ್ಕೆ ಬಿಜೆಪಿ ನಾಯಕ, ಬೆಂಗಾಲಿ ನಟ ಯಶ್ ದಾಸ್‍ಗುಪ್ತ ಅವರು ಕಾರಣ ಎಂಬ ಗುಸುಗುಸು ಕೂಡ ಕೇಳಿಬರುತ್ತಿದೆ. ಯಶ್ ದಾಸ್‍ಗುಪ್ತ ಮತ್ತು ನುಸ್ರತ್ ಬೆಂಗಾಲಿಯ ‘ಒನ್’ ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು ಆ ಬಳಿಕ ಇವರಿಬ್ಬರ ನಡುವೆ ಹೆಚ್ಚಿನ ಸ್ನೇಹ ಬೆಳೆದಿತ್ತು. ಆ ಸ್ನೇಹದ ಫಲವೇ ಇದು ಎಂದು ಎಲ್ಲರೂ ಮಾತಾಡುತ್ತಿದ್ದಾರೆ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಜೊತೆಯಾಗಿರುವ ಹಲವು ಫೋಟೋಗಳು ಹರಿದಾಡುತ್ತಿದೆ. ನುಸೃತ್ ಮುಸ್ಲಿಂ. ಯಶ್ ದಾಸ್ ಗುಪ್ತಾ ಹಿಂದೂ. ನುಸೃತ್,  ತೃಣಮೂಲ ಕಾಂಗ್ರೆಸ್ ನ ಸಂಸದೆ. ಆತ ಬಿಜೆಪಿಯ ಸಂಸದ. ಅನ್ ಲೈಕ್ ಪೋಲ್ ಲೈಕ್ಸ್ ಯೀಚ್ ಅದರ್ ಎಂಬಂತೆ ಅವರಿಬ್ಬರ ಮಧ್ಯೆ ಆಕರ್ಷಣೆ ಬಲವಾಗಿದೆ. ಅದರ ಪ್ರತಿಫಲಕ್ಕೆ ಈಗ ಆರು ತಿಂಗಳು !

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: