Ad Widget

ಮೊಬೈಲ್ ಗಿಫ್ಟ್ ಕೊಟ್ಟು ಪುಸಲಾಯಿಸಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ | ಆರೋಪಿ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

ಅಪ್ರಾಪ್ತ ಬಾಲಕಿಯೊಂದಿಗೆ ಸ್ನೇಹ ಬೆಳೆಸಿ, ಅತ್ಯಾಚಾರ ನಡೆಸಿದ ಆರೋಪದಡಿ ಓರ್ವನ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಈ ಆರೋಪಿಯು ಅಪ್ರಾಪ್ತ ಬಾಲಕಿಗೆ ಮೊಬೈಲ್ ಒಂದನ್ನು ಗಿಫ್ಟ್ ಕೊಟ್ಟು ಆ ನಂತರ ಸ್ನೇಹ ಬೆಳೆಸಿ, ಯುವತಿಯನ್ನು ನಿರಂತರ ಅತ್ಯಾಚಾರ ಎಸಗಿರುವ ಬಗ್ಗೆ ದೂರು ದಾಖಲಿಸಲಾಗಿದೆ.

ಮಂಗಳೂರು ಜೋಕಟ್ಟೆ ನಿವಾಸಿ ಅಬ್ದುಲ್ ರಫರ್ ಎಂಬಾತನೇ ಪ್ರಕರಣದ ಆರೋಪಿ. ಈತ ಸುಮಾರು ಒಂದು ವರ್ಷದ ಹಿಂದೆ ಬಾಲಕಿಗೆ ಮೊಬೈಲ್ ಒಂದನ್ನು ಗಿಫ್ಟ್ ನೀಡಿದ್ದಾನೆ. ಆ ಬಳಿಕ ಆಕೆಯೊಂದಿಗೆ ಮೊಬೈಲ್ ನಲ್ಲಿ ಸಂದೇಶ ರವಾನಿಸುತ್ತ ಸ್ನೇಹ ಬೆಳೆಸಿದ್ದು ಮಾತ್ರವಲ್ಲದೆ, ಸ್ನೇಹ ಸಲುಗೆಗೆ ಕಾರಣವಾಗಿದೆ.ಆರೋಪಿಯು ರಾತ್ರಿ ಹೊತ್ತಿಗೆ ಬಾಲಕಿಯ ಮನೆಗೆ ಬಂದು, ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿದ್ದಾನೆ.
ಬಾಲಕಿಗೆ ನಿನ್ನೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗೆ ವೈದ್ಯರ ಬಳಿ ತೆರಳಿದ ವೇಳೆ ಗರ್ಭಿಣಿ ಎಂದು ತಿಳಿದು ಬಂದಿದೆ.ಸದ್ಯ ಬಾಲಕಿಯನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ವಿರುದ್ಧ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ad Widget Ad Widget Ad Widget

Leave a Reply

error: Content is protected !!
Scroll to Top
%d bloggers like this: