ಸಂಕಷ್ಟದ ಸಮಯದಲ್ಲಿ ಅನುದಾನ ಕಡಿತ ಅನಿವಾರ್ಯ, ಕಾಂಗ್ರೆಸಿಗರಿಂದ ವ್ಯರ್ಥ ಅಪಪ್ರಚಾರ- ಬಿಜೆಪಿ ಸುಳ್ಯ ಮಂಡಲ


ಕೊರೋನಾದ ಈ ಸಂಕಷ್ಟಕರ ಸಮಯದಲ್ಲಿ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಈ ಬಾರಿ ಪಂಚಾಯತ್-ಗಳಿಗೆ ಅಲ್ಪ ಕಡಿತ ವಾಗಿದ್ದು ಕಾಂಗ್ರೆಸ್ಸಿಗರು ಇದನ್ನು ವ್ಯರ್ಥ ಅಪಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.


2014ರ ಮೊದಲು 13ನೇ ಹಣಕಾಸು ಆಯೋಗದ ವರೆಗೆ ಪ್ರತಿ ಗ್ರಾಮ ಪಂಚಾಯಿತಿಗಳಿಗೆ ಮೂರರಿಂದ ನಾಲ್ಕು ಲಕ್ಷ ರೂ ಅನುದಾನ ಬರುತ್ತಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ 14ನೇ ಹಣಕಾಸು ಆಯೋಗದಲ್ಲಿ ಪ್ರತಿ ಗ್ರಾಮ ಪಂಚಾಯತ ಸದಸ್ಯನಿಗೆ ಅಭಿವೃದ್ಧಿ ಕಾರ್ಯಕ್ಕೆ ವಾರ್ಷಿಕ ಕನಿಷ್ಠ 1 ಲಕ್ಷ ರೂ ಅನುದಾನ ಬರಲಾರಂಭಿಸಿತು.

15ನೇ ಹಣಕಾಸು ಆಯೋಗದಲ್ಲಿ ಪ್ರತಿ ಸಣ್ಣ ಗ್ರಾಮಪಂಚಾಯತಿಗೆ ವಾರ್ಷಿಕ 15-20 ಲಕ್ಷ ರೂ, ದೊಡ್ಡ ಗ್ರಾಮ ಪಂಚಾಯತ್ ಗಳಿಗೆ 40-50ಲಕ್ಷ ರೂ ಅನುದಾನ ಲಭಿಸುತ್ತಿದೆ. ಇದನ್ನು ಕಾಂಗ್ರೆಸ್ಸಿಗರೇ ಒಪ್ಪಿಕೊಂಡಿದ್ದಾರೆ. ಅಮರಮುಡ್ನೂರು, ಆಲೆಟ್ಟಿ ಯಂತಹ ಪಂಚಾಯತ್-ಗಳಿಗೆ ವಾರ್ಷಿಕ 40 ಲಕ್ಷ ರೂ ಗು ಹೆಚ್ಚಿನ ಅನುದಾನ ಬಂದಿರುತ್ತದೆ. ಆದರೆ ಸತತ ಎರಡು ವರ್ಷಗಳಿಂದ ಕರೋನಾ ದ ಪಿಡುಗಿನಿಂದಾಗಿ ಸರಕಾರದ ಆದಾಯದಲ್ಲಿ ಗಣನೀಯ ಇಳಿಕೆಯಾಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ. ಹಾಗಾಗಿ ಪಂಚಾಯತ್ ಗಳಿಗೆ ನೀಡಿದ ಅನುದಾನದಲ್ಲಿ ಕೇಂದ್ರ ಸರಕಾರವು ಸ್ವಲ್ಪ ಹಣವನ್ನು ಕಡಿತಗೊಳಿಸಿದೆ. ಇದು ಕೇವಲ ತಾತ್ಕಾಲಿಕ ವಾಗಿದೆ.
ಆದರೆ ಕೇಂದ್ರ ಸರಕಾರವು ಜಲ ಜೀವನ್ ಮಿಷನ್ ನಂತಹ ಯೋಜನೆಯಲ್ಲಿ ಗ್ರಾಮ ಪಂಚಾಯತಿಗಳಿಗೆ ಕೋಟಿ ಕೋಟಿ ಅನುದಾನವನ್ನು ಒದಗಿಸುತ್ತಿದೆ. ಕಳೆದ ಆರು ವರ್ಷಗಳಲ್ಲಿ ಗ್ರಾಮ ಪಂಚಾಯತಿಗಳ ಅನುದಾನವನ್ನು ಹೆಚ್ಚು ಗೊಳಿಸಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವ ಕಾರ್ಯವನ್ನು ಕೇಂದ್ರ ಸರಕಾರವು ಮಾಡುತ್ತಿದೆ. ದೇಶದ ಆರ್ಥಿಕ ಸ್ಥಿತಿ ಚೇತರಿಕೆ ಯಾದಲ್ಲಿ ಕೇಂದ್ರ ಸರಕಾರವು ಇನ್ನಷ್ಟು ಅನುದಾನವನ್ನು ಗ್ರಾಮ ಪಂಚಾಯತ್ ಗಳಿಗೆ ಒದಗಿಸಲಿದೆ.


ಈ ವರ್ಷ ಪಂಚಾಯತಿಗಳಿಗೆ ನೀಡಲಾದ ಅನುದಾನದಲ್ಲಿ ಕಡಿತ ವಾಗಿರುವುದನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ಕಾಂಗ್ರೆಸ್ಸಿಗರು 2014ಕ್ಕೆ ಮುಂಚಿತವಾಗಿ ಗ್ರಾಮ ಪಂಚಾಯಿತಿಗಳಿಗೆ ಬರುತ್ತಿದ್ದ ಅನುದಾನ ಎಷ್ಟು ಎಂಬುದನ್ನು ಬಹಿರಂಗಪಡಿಸಲಿ ಎಂದು ಬಿಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ತಿಳಿಸಿದ್ದಾರೆ.

Leave A Reply

Your email address will not be published.