ಮಂಗಳೂರು : ಅಪಾರ್ಟ್ ಮೆಂಟ್ ಮೇಲಿಂದ ಜಿಗಿದು ಮಹಿಳೆ ಆತ್ಮಹತ್ಯೆ

Share the Article

ಮಹಿಳೆಯೊಬ್ಬರು ಅಪಾರ್ಟ್ ಮೆಂಟ್ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಕುಲಶೇಖರದಲ್ಲಿ ನಡೆದಿದೆ.

ಪುಷ್ಪಲತಾ (64) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಈಕೆ ಮಾಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಹಿಳೆ ನಗರದ ಕುಲಶೇಖರದ ಚೌಕಿಯ ಪ್ಲಾಮ ಗ್ರಾಂಡ್ ಅಪಾರ್ಟ್ ಮೆಂಟ್ 14 ನೇ ಮಹಡಿಯಿಂದ ಹಾರಿದ್ದಾರೆ. ಈಕೆ ಹಿಂದೆನೂ ಆತ್ಮಹತ್ಯೆಗೆ ಯತ್ನ ನಡೆಸಿದ್ದರು ಎನ್ನಲಾಗಿದೆ.

ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.