ಜೀವಜಲ ಸಿಗದೆ ಜೀವ ಬಿಟ್ಟ ಬಾಲೆ | ಅಜ್ಜಿ ಜತೆ ಕುಟುಂಬ ಸದಸ್ಯರ ಬೇಟಿಗೆ ತೆರಳಿದ ಬಾಲಕಿ,ಅಜ್ಜಿಯೂ ಗಂಭೀರ
ಕುಡಿಯಲು ನೀರು ಸಿಗದೆ ಬಾಲಕಿಯೋರ್ವಳು ಮೃತಪಟ್ಟ ಘಟನೆ ರಾಜಸ್ಥಾನದ ಜಲೋರ್ ಜಿಲ್ಲೆಯ ರಾಣಿವಾರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ತನ್ನ ಕುಟುಂಬದ ಸದಸ್ಯರನ್ನು ನೋಡಲು 60ವರ್ಷದ ಪ್ರಾಯದ ಅಜ್ಜಿ ಸುಖಿ ತನ್ನ ಮೊಮ್ಮಗಳಾದ ಮಂಜು ಜೊತೆ ನಡೆದುಕೊಂಡು ಹೋಗಿದ್ದಾರೆ.
ಈ ನಡುವೆ ದಾರಿಮಧ್ಯೆ ಇಬ್ಬರಿಗೂ ನೀರಡಿಕೆಯಾಗಿದೆ.ಆದರೆ ನಿರ್ಜನ ಪ್ರದೇಶದಲ್ಲಿ ಇವರಿಗೆ ಎಲ್ಲೂ ನೀರು ಸಿಕ್ಕಿಲ್ಲ.
ಇದರಿಂದ ಇಬ್ಬರು ಬಳಲಿ ದಾರಿ ಮಧ್ಯೆ ಬಿದ್ದರು.ಇದನ್ನು ನೋಡಿದ ಕುರಿಗಾಹಿಗಳು ಕೂಡಲೇ ನೀರು ನೀಡಿ ಉಪಚರಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ದುರದೃಷ್ಟವಶಾತ್ ದಾರಿ ಮಧ್ಯೆ ಬಾಲಕಿ ಮಂಜು ಮೃತಪಟ್ಟಿದ್ದಾಳೆ, ಅಜ್ಜಿ ಸುಖಿ ಸ್ಥಿತಿ ಗಂಭೀರವಾಗಿದೆ.
ಜೀವಜಲ ಸಿಗದೆ ಪ್ರಾಣಬಿಟ್ಟ ಬಾಲಕಿಯ ಈ ಕಥೆ ಮನಕಲಕುತ್ತಿದೆ.ಜೀವಜಲ ಉಳಿಸಿ ಸಂರಕ್ಷಿಸಬೇಕಾದ ಹೊಣೆ ಎಲ್ಲರದ್ದೂ,ಈ ಹಿಂದೆ ಎಲ್ಲೆಡೆ ದಾರಿಯುದ್ದಕ್ಕೂ ಕುಡಿಯುವ ನೀರಿನ ನಲ್ಲಿ ಕಾಣುತ್ತಿತ್ತು.ಆದರೆ ಈಗ ಎಲ್ಲೂ ಕಾಣುತ್ತಿಲ್ಲ.ಆಧುನಿಕ ಬೆಳೆದಂತೆ ಇಂತಹ ಸೂಕ್ಷ್ಮ ವಿಚಾರಗಳು ಕಣ್ಣಿಗೆ ಕಾಣಿಸುವುದಿಲ್ಲ.