ಹೋಮ ಕುಂಡದಲ್ಲಿ ಶವ ಬೇಯಿಸಿದ್ದಳು ಚರ್ಬಿಯ ಹೆಂಗಸು ರಾಜೇಶ್ವರಿ ! | ಭಾಸ್ಕರ ಶೆಟ್ಟಿ ಮರ್ಡರ್ ಕ್ರೈಂ ರಿಪೋರ್ಟ್

ರಾಷ್ಟ್ರವನ್ನು ಬೆಚ್ಚಿಬೀಳಿಸಿದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ನ್ಯಾಯಾಲಯ ಜೂ 8 ರಂದು ತೀರ್ಪು ಪ್ರಕಟಿಸಿದೆ. ಪ್ರಕರಣದ ಮೂರು ಪ್ರಮುಖ ಆರೋಪಿಗಳು ದೋಷಿ ಎಂದಿರುವ ನ್ಯಾಯಾಲಯ ಓರ್ವನನ್ನು ಆರೋಪದಿಂದ ಖುಲಾಸೆಗೊಳಿಸಿದೆ.

ಉಡುಪಿಯಲ್ಲಿ ನಡೆದ ಭಾಸ್ಕರ ಶೆಟ್ಟಿ ಅವರ ಕೊಲೆ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಕೊಲೆಗೂ 1995 ರಲ್ಲಿ ನಡೆದ ನೈನಾ ಸಾಹ್ಣಿ ಎಂಬ ಗೃಹಿಣಿಯ ಕೊಲೆಗೂ ಸಾಮ್ಯತೆ ಇತ್ತು. ಪತಿ ಸುಶೀಲ್ ಕುಮಾರ್ ಶರ್ಮ ಎಂಬಾತ ತನ್ನ ಪತ್ನಿ ನೈನಾ ಸಹಾನಿಯನ್ನು ಕೊಂದು ಆಕೆಯ ದೇಹವನ್ನು ತುಂಡರಿಸಿ ಹೋಟೆಲೊಂದರ ತಂದೂರ್ ಒಲೆಯಲ್ಲಿ ಸುಟ್ಟಿದ್ದ. ಅಷ್ಟೇ ಅಲ್ಲದೆ, ಈ ಕೊಲೆಗೂ 2012 ರಲ್ಲಿ ಮುಂಬೈನಲ್ಲಿ ನಡೆದ ಶೀನಾ ಬೋರಾ ಕೊಲೆಗೂ ಸಾಮ್ಯತೆ ಇತ್ತು. ಎರಡೂ ಕಡೆ ಕೂಡಾ ತೀರಾ ಹತ್ತಿರದ ಸಂಬಂಧಿಗಳು ಕೊಲೆಗಾರರಾಗಿದ್ದರು.

ಘಟನೆ ಹಿನ್ನಲೆ :

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದು ಇಂದಿಗೆ 5 ವರ್ಷ. 2016 ರ ಜುಲೈ 28 ರಂದು ಉಡುಪಿಯ ಇಂದ್ರಾಳಿಯಲ್ಲಿರುವ ತಮ್ಮ ಮನೆಯಿಂದ ಭಾಸ್ಕರ ಶೆಟ್ಟಿ ಅವರು ನಾಪತ್ತೆಯಾಗಿದ್ದರು. ಭಾಸ್ಕರ ಶೆಟ್ಟಿಯವರಿಗೆ ಅವಾಗಲೇ ಮದುವೆಯಾಗಿ ಎದೆಯೆತ್ತರ ಬೆಳೆದುನಿಂತ ಮಗನಿದ್ದ. ಅವರು ಮಿಸ್ಸಿಂಗ್ ಆಗಿ 48 ಗಂಟೆ ಕಳೆದರೂ ಪತ್ನಿಯಾಗಲೀ ಬದಲಾಗಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿರಲಿಲ್ಲ.

ಅದಾಗಲೇ ಭಾಸ್ಕರ ಶೆಟ್ಟಿ ಅವರದು ಉಡುಪಿಯಲ್ಲಿ ಪರಿಚಿತ ಹೆಸರು. ಅವರಿಗೆ ಸೌದಿ ಅರೇಬಿಯಾದಲ್ಲಿ ದೊಡ್ಡ ಉಡುಪಿಯಲ್ಲಿ ಇಟ್ಟುಕೊಂಡಿದ್ದರು. ಅನಿವಾಸಿ ಭಾರತೀಯರಾದ ಅವರು ಸೌದಿ ಮತ್ತು ಉಡುಪಿಯ ಮಧ್ಯೆ ಓಡಾಡಿಕೊಂಡು ತಮ್ಮ ವ್ಯಾಪಾರ ಮಾಡಿಕೊಂಡಿದ್ದರು. ಅಂತಹ ಉದ್ಯಮಿ ಮಿಸ್ಸಿಂಗ್ ಸುದ್ದಿ ತಿಳಿದ ಪೊಲೀಸರು ಭಾಸ್ಕರ್ ಶೆಟ್ಟಿ ಅವರನ್ನು ಹುಡುಕಲು ಆರಂಭಿಸುತ್ತಾರೆ. ಆದರೆ ಭಾಸ್ಕರ ಶೆಟ್ಟಿ ಅವರು ಯಾವುದೇ ಕರೆಗಳನ್ನು ಸ್ವೀಕರಿಸಲು ಲಭ್ಯ ಇರುವುದಿಲ್ಲ. ಆತನ ಫೋನ್ ಸ್ವಿಚ್ ಆಫ್ ಆಗಿತ್ತು. ಪೊಲೀಸರು ಹಲವು ತಂಡಗಳನ್ನು ಕಟ್ಟಿಕೊಂಡು ಬೇರೆ ಮೂಲಗಳಿಂದ ತನಿಖೆ ತೀವ್ರಗೊಳಿಸಿದ್ದರು.

ಆವಾಗ ಪೊಲೀಸರ ಅನುಮಾನದ ಕಣ್ಣುಗಳು ಭಾಸ್ಕರ ಶೆಟ್ಟಿ ಅವರ ಧರ್ಮಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಮಗನತ್ತ ಹೊರಳುತ್ತವೆ. ಕೂಡಲೇ ಮಣಿಪಾಲ ಪೊಲೀಸರು ಅವರ ಪತ್ನಿ ಮತ್ತು ಮಗನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸುತ್ತಾರೆ. ಅಷ್ಟರಲ್ಲಾಗಲೇ 7 ದಿನ ಕಳೆದಿತ್ತು. ಭಾಸ್ಕರ ಶೆಟ್ಟಿ ಅವರ ಮೃತದೇಹ ಕೂಡ ಎಲ್ಲೂ ಸಿಕ್ಕಿರಲಿಲ್ಲ. ಆದರೆ ಅಷ್ಟರಲ್ಲಿ ಕೊಲೆ ನಡೆದಿರುವ ಬಲವಾದ ಪುರಾವೆಗಳು ಪೊಲೀಸರಿಗೆ ಸಿಕ್ಕಿದ್ದವು. ಅದರಂತೆ ಪ್ರಕರಣದ ಮೂರನೆಯ ಆರೋಪಿಯಾದ ನಿತ್ಯಾನಂದ ಭಟ್ ಅವರನ್ನು ಎಂಟನೆಯ ದಿನ ಬಂಧಿಸುತ್ತಾರೆ.

ಕೊಲೆ ನಡೆದ ಆ ದಿನ :

ಅಂದು ಮಧ್ಯಾಹ್ನ 3 ಗಂಟೆಗೆ ಭಾಸ್ಕರ ಶೆಟ್ಟಿಯವರು ಉಡುಪಿಯ ತನ್ನ ಮನೆಗೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದರು. ಮಧ್ಯಾನ್ಹದ ಊಟ ಮುಗಿಸಿ ಒಂದಿಷ್ಟು ರೆಸ್ಟು ಮಾಡುವ ಅಂದುಕೊಳ್ಳುವಷ್ಟರಲ್ಲಿ ಮನೆಯಲ್ಲೇ ಜವರಾಯ ಧಡೂತಿ ಕ್ರೂರಿ ಹೆಂಡತಿಯ ರೂಪದಲ್ಲಿ ಕಾದು ಕೂತಿದ್ದ. ಭಾಸ್ಕರ ಶೆಟ್ಟಿ ಅವರ ಹೆಂಡತಿ ರಾಜೇಶ್ವರಿ ಶೆಟ್ಟಿಯ ಆಸ್ತಿಯ ಮೇಲಿನ ಮತ್ತು ಆಕೆಗೆ ಎಲ್ಲದರಲ್ಲೂ ಸಾಥ್  ನೀಡುತ್ತಿದ್ದ ನಿತ್ಯಾನಂದ ಭಟ್ ಮೇಲಿನ ಮೋಹಕ್ಕೆ ಉದ್ಯಮಿ ಶೆಟ್ಟರು ಅಸಹಾಯಕರಾಗಿ ತನ್ನ ಇಂದ್ರಾಳಿ ಯಲ್ಲಿರುವ ಸ್ವಂತ ಮನೆಯಲ್ಲಿ ಸಾಯಬೇಕಾಯಿತು. ಪತ್ನಿ ಪುತ್ರನ ಸಮೇತ ನಿತ್ಯಾನಂದ ಭಟ್ ಖುದ್ದು ಆ ದಿನ ಭಾಸ್ಕರ ಶೆಟ್ಟಿ ಅವರ ಇಂದ್ರಾಳಿಯ ಮನೆಯಲ್ಲಿ ಹಾಜರಿದ್ದ. ಅಂದು ಮೆ 28, 2016.

ಆ ನಂತರದ 2 ದಿನಗಳು ಯಾವುದೇ ಘಟನಾವಳಿಗಳು ನಡೆಯದೇ ಸುಮ್ಮನಿದ್ದವು. ಯಾರೊಬ್ಬರಿಗೂ ಭಾಸ್ಕರ ಶೆಟ್ಟಿ ಅವರು ಕಣ್ಮರೆಯಾದ ವಿಷಯ ತಿಳಿದಿರಲಿಲ್ಲ. ಅದು ತಿಳಿದಿದ್ದ ಪತ್ನಿ ರಾಜೇಶ್ವರಿ ಶೆಟ್ಟಿ ಮತ್ತು ಪುತ್ರ ಮಾತ್ರ ಸುಮ್ಮನಿದ್ದರು. ತನ್ನ ಮನೆಯಲ್ಲಿ ಏನಾದರೂ ಅವಘಡ ಸಂಭವಿಸಿದರೆ, ಮಿಸ್ಸಿಂಗ್ ಆದರೆ ಖುದ್ದು ಹೋಗಿ ದೂರು ಕೊಡಬೇಕಾಗಿದ್ದ ಪತ್ನಿಯೇ ಸುಮ್ಮನಿದ್ದಾಗ ಏನು ತಾನೇ ಆಗಲು ಸಾಧ್ಯ ?! ಎಲ್ಲರೂ ಮನೆಯಲ್ಲಿ ಉಂಡು ತಿಂದು ಗಮ್ಮತ್ತು ಮಾಡುತ್ತಾ ಸುಮ್ಮನಿದ್ದರು. ಆದರೆ ಅವಳೊಬ್ಬಳನ್ನು ಬಿಟ್ಟು !

ಆಕೆ ಗುಲಾಬಿ ಶೆಟ್ಟಿ. ಅವರು ಭಾಸ್ಕರ ಶೆಟ್ಟಿಯವರ ಹೆತ್ತಮ್ಮ. ಮಗ 2 ದಿನ ಕಾಣದೆ ಇದ್ದಾಗ ಆ ಜೀವ ಚಡಪಡಿಸಿದೆ. ಆಕೆಗೆ ರಾಜೇಶ್ವರಿ ಶೆಟ್ಟಿಯ ಮೇಲೆ ಅನುಮಾನವಿರಲಿಲ್ಲ; ಆದರೆ ಒಳ್ಳೆಯ ಅಭಿಪ್ರಾಯವಂತೂ ಇರಲಿಲ್ಲ !

ಆರೋಪಿಗಳ ಬಂಧನದ ನಂತರ ತನಿಖೆಯಿಂದ ಒಂದು ಹೀನಿಯಸ್ ಕ್ರೈಮ್ ತೆರೆದುಕೊಂಡು ಬಿಟ್ಟಿತ್ತು. ಕೊಲೆಯಲ್ಲಿ ಮೂವರು ವ್ಯಕ್ತಿಗಳ ನೇರ ಕೈವಾಡ ಬೆಳಕಿಗೆ ಬಂದಿತ್ತು.

ಆರೋಪಿಗಳು 2016 ರ ಜು.28 ರಂದು ಅಪರಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ಅಲ್ಲೇ ಕೆಲ ಕಿಲೋಮೀಟರ್ ಗಳ ಸನಿಹದಲ್ಲಿರುವ ನಂದಳಿಕೆಯ ನಿರಂಜನ ಭಟ್ ನ ಮನೆಗೆ ಶವ ಸಾಗಾಟ ಮಾಡಲಾಗಿತ್ತು. ಶವದ ಯಾವುದೇ ಕುರುಹುಗಳು ಸಿಗಲೇ ಬಾರದು ಎಂದು ಅಪರಾಧಿಗಳು ಶವವನ್ನು ಪೂರ್ತಿಯಾಗಿ ಸುಡಲು ನಿರ್ಧರಿಸುತ್ತಾರೆ. ಆಗ ಅವರಿಗೆ ತಕ್ಷಣ ನೆನಪಿಗೆ ಬಂದದ್ದು ಭಟ್ಟರ ಮನೆಯಲ್ಲಿನ ಹೋಮ ಕುಂಡ !!

ಈ ಹಿಂದೆ ತಂದೂರ್ ಮರ್ಡರ್ ಎಂದೇ ಕುಖ್ಯಾತಿ ಪಡೆದಿದ್ದ ಸೈನಾ ಸಾಹ್ನಿಯನ್ನು ಕೊಂದು ಆಕೆಯನ್ನು ತಂದೂರಿ ಒಲೆಯಲ್ಲಿ ಸುಡಲಾಗಿತ್ತು. ಆದರೆ ಇಲ್ಲಿ ಒಂದು ಹಂತ ಮುಂದೆ ಹೋಗಿ ಹಿಂದೂಗಳು ಪವಿತ್ರ ಅಂದುಕೊಳ್ಳುವ ಹೋಮ ಕುಂಡದಲ್ಲಿ ತಂದೂರಿ ಸುಟ್ಟಂತೆ ಶವವನ್ನು ಸುಡಲಾಗಿತ್ತು. ನಿರಂಜನ ಭಟ್ಟ ಅದರ ಸಾರಥ್ಯ ವಹಿಸಿದ್ದ.

ಅದಾದ ಮೇಲೆ ಭಾಸ್ಕರ್​ ಶೆಟ್ಟಿ ಅವರ ಅಳಿದುಳಿದ ಮೂಳೆಗಳನ್ನು ನದಿ ನೀರಿನಲ್ಲಿ ಹಾಕಿ ಕೈ ತೊಳೆದುಕೊಂಡು ಮನೆಗೆ ಬಂದಿದ್ದರು ಅಪರಾಧಿಗಳು. ಆದರೆ ತನಿಖೆ ಕೈಗೆತ್ತಿಗೊಂಡ ಪೊಲೀಸರು ಭಾಸ್ಕರ್​ ಶೆಟ್ಟಿ ಅವರ ಕೆಲವು ಅಳಿದುಳಿದ ಮೂಳೆಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು. ಆನಂತರ ಆರೋಪಿ ಪತ್ನಿ ಮತ್ತು ಪುತ್ರನ ಮತ್ತು ಭಾಸ್ಕರ ಶೆಟ್ಟಿ ಅವರ ತಮ್ಮನ ಡಿಎನ್ಎ ಪರೀಕ್ಷೆ ನಡೆಸಿ, ಅದನ್ನು ಹೋಮಕುಂಡದಲ್ಲಿ ದೊರೆತ ಮೂಳೆಗಳ ಡಿಎನ್ಎ ಒಂದಿಗೆ ಹೋಲಿಸಿ ನೋಡಲಾಗಿತ್ತು.  ಅದು ಹತ್ಯೆ ಬಗ್ಗೆ ಖಚಿತ ಸುಳಿವು ನೀಡಿತ್ತು.

ಇದೀಗ ಎಲ್ಲ ರೀತಿಯ ಸಾಕ್ಷಿಗಳನ್ನು ಪರಿಶೀಲಿಸಿ, ಅಳೆದು ತೂಗಿದ ಕೋರ್ಟು ತನ್ನ ಅಂತಿಮ ತೀರ್ಮಾನಕ್ಕೆ ಬಂದಿದೆ. ಮೂರು ಪ್ರಮುಖ ಆರೋಪಿಗಳನ್ನು- ಹೋಮಕುಂಡದಲ್ಲಿ ಸುಟ್ಟಿರುವ ಆರೋಪ ಸಾಬೀತಾಗಿದ್ದು, ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ, ರಾಜೇಶ್ವರಿ ಗೆಳೆಯ ನಿರಂಜನ ಭಟ್ ಅನ್ನು ಕೋರ್ಟು ದೋಷಿಗಳೆಂದು ಪ್ರಕಟಿಸಿದೆ.
ನಾಲ್ಕನೇ ಆರೋಪಿ ನಿರಂಜನ್ ಭಟ್ ನ ತಂದೆ ಶ್ರೀನಿವಾಸ್ ಭಟ್ ಗೆ ತನಿಖಾ ಹಂತದಲ್ಲಿ ಅನಾರೋಗ್ಯ ಭಾದಿಸಿತ್ತು. ಆತನಿಗೆ ಕೋರ್ಟು ಶಿಕ್ಷೆ ನೀಡುವ ಮೊದಲೇ ದೇವರೇ ಶಿಕ್ಷೆ ವಿಧಿಸಿದ್ದರು. ಅದರಂತೆ ಆತ ರೋಗಬಾಧೆಯಿಂದ ಮೃತಪಟ್ಟಿದ್ದನು. ಐದನೆಯ ಆರೋಪಿ ಮತ್ತು ರಾಜೇಶ್ವರಿ ಶೆಟ್ಟಿಯ ಕಾರು ಚಾಲಕನಾಗಿದ್ದ ರಾಘವೇಂದ್ರ ಅವರು ಇದೀಗ ಆರೋಪದಿಂದ ಖುಲಾಸೆಗೊಂಡಿದ್ದಾರೆ.

ಹತ್ಯೆ ನಡೆದ ಸುಮಾರು ಐದು ವರ್ಷಗಳ ಬಳಿಕ ತೀರ್ಪು ಹೊರಬಿದ್ದಿದೆ. ಎಲ್ಲಾ ಮೂರು ಆರೋಪಿಗಳಿಗೆ ಸಾಯುವವರೆಗೆ ಕಂಬಿಯ ಹಿಂದೆ ನಿಲ್ಲುವ ಶಿಕ್ಷೆ ಘೋಷಣೆ ಆಗಿದೆ. ಈ ನಡುವೆ ಜಾಮೀನಿನ ಮೇಲೆ ಹೊರಬಂದಿದ್ದ ರಾಜೇಶ್ವರಿ ಶೆಟ್ಟಿಯನ್ನು ಈಗಾಗಲೇ ಪೊಲೀಸರು ಕಸ್ಟಡಿಗೆ ಪಡೆದುಕೊಂಡು ಜೈಲಿಗೆ ಕಳುಹಿಸಿದ್ದಾರೆ.

ಹಿರಿಯ ವಕೀಲ, ಪಬ್ಲಿಕ್​ ಪ್ರಾಸಿಕ್ಯೂಟರ್ ಎಂ ಶಾಂತಾರಾಮ್​ ಶೆಟ್ಟಿ ಅವರು ಕಚ್ಚಿ ಕೂತು ಪ್ರಬಲ ವಾದ ಮಂಡಿಸಿದ್ದರು. ಅಂದಿನ ಮಣಿಪಾಲ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ ಎಸ್. ವಿ. ಗಿರೀಶ್ ಹಾಗೂ ಡಿಎಸ್ ಪಿ ಡಾ.ಸುಮಲಾ ಅವರು ಈ ಪ್ರಕರಣದ ತನಿಖೆ ನಡೆಸಿದ್ದರು.

ಬಳಿಕ ಈ ಪ್ರಕರಣ ವನ್ನು ಸಿಐಡಿ ಗೆ ಒಪ್ಪಿಸಿದ್ದು, ಸಿಐಡಿ ಡಿಎಸ್ ಪಿ ಎಸ್ ಟಿ ಚಂದ್ರ ಶೇಖರ್ ಅವರು ತನಿಖೆ ಆರಂಭಿಸಿದ್ದರು. ಇವರು ಸಲ್ಲಿಸಿದ ಜಾರ್ಜ್ ಶೀಟ್ ನಲ್ಲಿ ಒಟ್ಟು 167 ಸಾಕ್ಷಿಗಳು ಇದ್ದು, ಈ ಪೈಕಿ 78 ಸಾಕ್ಷಿಗಳನ್ನು ವಿಚಾರಣೆ ಮಾಡಲಾಗಿತ್ತು. ಹಾಗೂ 170 ದಾಖಲೆಗಳನ್ನು ಮಾರ್ಕ್ ಮಾಡಲಾಗಿತ್ತು. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಅವತ್ತಿನ ಸಿಐಡಿ ಅಧಿಕಾರಿಗಳ ಪಾಲು ದೊಡ್ಡದಿದೆ.

ಕಟ್ಟಿಕೊಂಡ ಶ್ರೀಮಂತ ಗಂಡನನ್ನೇ ಕೊಂದು ಹಾಕಿದ ರಾಜೇಶ್ವರಿ ಶೆಟ್ಟಿಯ ಕಥೆಯು, ಚಿನ್ನದ ಮೊಟ್ಟೆ ಇಡುವ ಕೋಳಿಯ ಗರ್ಭ ಕತ್ತರಿಸಿದ ಕಥೆಯನ್ನು ನೆನಪಿಸುತ್ತದೆ. ಅತ್ತ ಕೋಳಿಯೂ ಇಲ್ಲ, ಇತ್ತ ಚಿನ್ನದ ಮೊಟ್ಟೆಯೂ ಇಲ್ಲ. ಇದೀಗ ಜೀವನಪರ್ಯಂತ ಕೋಳಿ ಗೂಡಿನಂತಹ ಜೈಲು ರೂಮಿನಲ್ಲಿ ಚರ್ಬಿಯ ಹೆಂಗಸು ರಾಜೇಶ್ವರಿ, ಆಕೆಯ ಮಗ ಮತ್ತು ಆಕೆಯ ಗೆಳೆಯ ನಿರಂಜನ್ ಭಟ್ ತುಕ್ಕು ಹಿಡಿದ ಕಂಬಿ ಎಣಿಸುತ್ತಾ ಬದುಕಬೇಕಾಗಿದೆ. ದುರಂತದ ಬದುಕೆಂದರೆ ಇದಲ್ಲದೆ ಮತ್ತೇನು ?!

✍️ ದೀಪಕ್ ಹೊಸ್ಮಠ

1 Comment
  1. Portal Edukacyjny says

    As someone who is passionate about learning and personal growth, I can’t recommend this blog enough. The author’s writing is not only informative and engaging, but also deeply thoughtful and insightful. I appreciate the level of research and attention to detail that goes into each post, and the author’s commitment to providing factual and balanced perspectives. What I love most about this blog is its ability to challenge my assumptions and make me think deeply about important issues. Whether you’re looking to expand your knowledge on a specific topic or just looking for an interesting read, this blog is an absolute must-read.

Leave A Reply

Your email address will not be published.