ರಾಸಾಯನಿಕ ಕಂಪನಿಯಲ್ಲಿ ಬೆಂಕಿಯ ಕೆನ್ನಾಲಿಗೆ | 18 ಜನ ಸಾವು, ಬಹುತೇಕ ಮಹಿಳೆಯರು ಬೆಂಕಿಗೆ ಆಹುತಿ
ಪುಣೆ: ಮಹಾರಾಷ್ಟ್ರದ ಪುಣೆ ಮಹಾನಗರಿಯಲ್ಲಿನ ಕಾರ್ಖಾನೆಯೊಂದರಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 17 ಕಾರ್ಮಿಕರು ಸಾವನ್ನಪ್ಪಿ ಹಲವರು ನಾಪತ್ತೆಯಾಗಿದ್ದಾರೆ.
ಪುಣೆಯ ಘೋಟ್ವಾಡೆ ಫಟಾ ಪ್ರದೇಶದಲ್ಲಿರುವ SVS ಟೆಕ್ನಾಲಜೀಸ್ ಎಂಬ ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಒಟ್ಟು 18 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ತೀರಿಕೊಂಡ ಅವರಲ್ಲಿ ಬಹುತೇಕರು ಮಹಿಳೆಯರು.ಈ ಪೈಕಿ 16 ಮಂದಿ ಮಹಿಳೆಯರು ಇಬ್ಬರು ಪುರುಷರ ಮೃತದೇಹಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ವಿಷಯ ತಿಳಿದ ಕೂಡಲೇ 8ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಫೈರ್ ಟೆಂಡರ್ ಗಳು ವಾಹನಗಳು ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾ ಡಿ ಹರಸಾಹಸ ಪಟ್ಟು ಬೆಂಕಿ ನಂಡಿಸಿವೆ.
ಮೂಲಗಳ ಪ್ರಕಾರ ಘಟನೆ ನಡೆದ ಸಂದರ್ಭದಲ್ಲಿ ಕಾರ್ಖಾನೆಯಲ್ಲಿ 37 ಮಂದಿ ಕಾರ್ಮಿಕರು ಇದ್ದರು. ಈ ಪ್ಲಾಸ್ಟಿಕ್ ತಯಾರಿಕಾ ಕಂಪನಿ ಯಲ್ಲಿ ಕ್ಲೋರಿನ್ ಡೈ ಆಕ್ಸೈಡ್ ಎಂಬ ನೀರು ಶುದ್ಧೀಕರಣ ಮಾಡಲು ಬಳಸುವ ಕೆಮಿಕಲ್ ಅನ್ನು ತಯಾರು ಮಾಡಲಾಗುತ್ತಿತ್ತು.