ಹಸಿ ಕಸ ಒಣ ಕಸ ವಿಗಂಡಣೆ ಮಾಡದ ಅಪಾರ್ಟ್ಮೆಂಟ್ ಗೆ ಬರೋಬ್ಬರಿ 53 ಸಾವಿರ ದಂಡ ವಿಧಿಸಿದ ಮ.ನ.ಪಾ
ಮಂಗಳೂರು ಮಹಾನಗರ ಪಾಲಿಕೆಯು ಹಸಿ ಕಸ ಮತ್ತು ಒಣ ಕಸ ವಿಂಗಡಿಸದ ಅಪಾರ್ಟ್ ಮೆಂಟ್ ಗೆ ಬರೋಬ್ಬರಿ 53 ಸಾವಿರ ರೂಪಾಯಿ ದಂಡ ವಿಧಿಸಿದೆ.
ಮಂಗಳೂರು ನಗರದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಸಲು ಮಹಾನಗರಪಾಲಿಕೆ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಿಸುವಂತೆ ಆದೇಶ ಹೊರಡಿಸಿದ್ದು, ಕೆಲವು ಅಪಾರ್ಟ್ ಮೆಂಟ್ ಗಳಲ್ಲಿ ಕಸ ವಿಂಗಡಣೆ ಮಾಡದಿರುವ ಕುರಿತಿ ದೂರುಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗಿ ಅಪಾರ್ಟ್ಮೆಂಟ್ವೊಂದಕ್ಕೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದೆ.
ನಗರದ ಚಿಲಿಂಬಿಯ ಮಾರ್ಸ್ ಆಂಡ್ ವೆನುಸ್ ಅಪಾರ್ಟ್ಮೆಂಟ್ ಕಸ ವಿಂಗಡಣೆ ಕುರಿತ ಮನಪಾದ ಆದೇಶವನ್ನು ಪಾಲಿಸದಿದ್ದುದರಿಂದ ಅಧಿಕಾರಿಗಳು ಅಪಾರ್ಟ್ಮೆಂಟ್ ಅಸೋಶಿಯೇಷನ್ ಗೆ ಎಚ್ಚರಿಕೆ ನೀಡಿದ್ದರು.
ಎಚ್ಚರಿಕೆ ನೀಡಿದರೂ ಪಾಲಿಕೆ ಆದೇಶವನ್ನು ಪಾಲಿಸದ ಹಿನ್ನಲೆ ಅಪಾರ್ಟ್ಮೆಂಟ್ ನಲ್ಲಿರುವ ಪ್ರತಿಯೊಂದು ಮನೆಗೆ 500 ರೂಪಾಯಿಯಂತೆ ದಂಡ ವಿಧಿಸಿದ್ದು, ದಂಡ ಪಾವತಿ ಮಾಡದಿದ್ದರೆ ಅಪಾರ್ಟ್ಮೆಂಟ್ ನ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ.