ಅಣ್ಣನ ಬರ್ತ್‌ಡೇ ಸಂಭ್ರಮದ ವೇಳೆ 5 ವರ್ಷದ ತಂಗಿಯನ್ನು ಕೊಂದ ಚಿರತೆ

ಅಣ್ಣನ ಬರ್ತ್‌ಡೇ ಎಂದರೆ ತಂಗಿಗೆ ಸಂಭ್ರಮ.ಈ ಸಂಭ್ರಮದ ಪಾರ್ಟಿ ವೇಳೆಯೇ 5 ವರ್ಷದ ಬಾಲಕಿಯನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ಹಾಕಿದ ಘಟನೆ ಶ್ರೀನಗರದಲ್ಲಿ ನಡೆದಿದೆ.

ಮೃತ ಬಾಲೆಯನ್ನು ಮಿರ್‌ ಅದ್ದಾ(5) ಎಂದು ಗುರುತಿಸಲಾಗಿದೆ.

ಮನೆಯ ಹೊರಗೆ ನಿಂತಿದ್ದ ಮಿರ್‌ ಅದ್ದಾ, ಎಲ್ಲರನ್ನೂ ತನ್ನ ಅಣ್ಣ ಅಲಿಯ 7ನೇ ವರ್ಷದ ಬರ್ತ್‌ಡೇ ಪಾರ್ಟಿಗೆ ಕರೆಯುತ್ತಿರುವಂತೆಯೇ ಚಿರತೆ ದಾಳಿ ನಡೆಸಿ ಹೊತ್ತೊಯ್ದಿದೆ.

ಅರಣ್ಯಾಧಿಕಾರಿಗಳ ಸಹಾಯದಿಂದ ಮಿರ್ ಅದ್ದಾಳನ್ನು ಇಡೀ ರಾತ್ರಿ ಹುಡುಕಾಡಿದರೂ, ರಕ್ತ ಮೆತ್ತಿಕೊಂಡಂತಿದ್ದ ಆಕೆಯ ಕೈಯ್ಯಲ್ಲಿದ್ದ ಗೊಂಬೆ ಹೊರತುಪಡಿಸಿ ಬೇರೇನೂ ಸಿಕ್ಕಿರಲಿಲ್ಲ.

ಮರುದಿವಸ ಮಗುವಿನ ದೇಹದ ಭಾಗಗಳು ಪತ್ತೆಯಾಗಿವೆ. ಸಾವಿಗೂ ಮುಂಚೆ ಆಕೆ “ಇದು ನಾನು… ಇಲ್ಲಿ ನನ್ನ ಪಾರ್ಟಿ ನಡೆಯುತ್ತಿದೆ’ ಎಂದು ಹೇಳುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಅನೇಕರು ಕಣ್ಣೀರಧಾರೆ ಸುರಿಸಿದ್ದಾರೆ.

Leave A Reply

Your email address will not be published.