ಬೆಳ್ತಂಗಡಿ: ಮನೆಯಿಂದ ಹೊರ ಹೋದವರು ಶವವಾಗಿ ಪತ್ತೆ | ಎರಡು ತಿಂಗಳ ಹಿಂದೆ ಮಗನನ್ನು ಕಳೆದುಕೊಂಡಿದ್ದರು

ಬೆಳ್ತಂಗಡಿ ತಾಲೂಕು ಕಳೆಂಜ ಕಳೆಂಜ ಗ್ರಾಮದಲ್ಲಿ ಮತ್ತೊಬ್ಬರು ನೀರಿಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಕಳೆದ 24 ಗಂಟೆಯಲ್ಲಿ ಇದು ಎರಡನೆಯ ಪ್ರಕರಣ.

ಕಳೆಂಜ ಗ್ರಾಮದ ಬುಡಾರ ಮನೆ ನಿವಾಸಿ ಪೆರ್ನು ಗೌಡ (48 ವ) ಅವರು ಮೃತ ಪಟ್ಟ ದುರ್ದೈವಿ.

ಜೂ.6ರ ಸಂಜೆ ಮನೆಯಿಂದ ಯಾವುದೋ ಕಾರ್ಯಕ್ರಮಕ್ಕೆ ಇಂದು ಹೊರಹೋದವರು ಮರಳಿ ಮನೆಗೆ ಬಂದಿರಲಿಲ್ಲ. ಇವತ್ತು, ಜೂ.7ರ ಮಧ್ಯಾಹ್ನ ಶವವಾಗಿ ಚಾಕೋಟೆತ್ತಡಿ ಮಹಾಬಲ ಗೌಡ ಎಂಬವರಿಗೆ ಸೇರಿದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದೆ.

ಜೂ.6ರ ರಾತ್ರಿ ಹೋಗಿದ್ದ ಪೇರಲು ಗೌಡ ಅವರು ವಾಪಸ್ಸು ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ತಂದೆ ಬೂಚ ಗೌಡ ಕಾರ್ಯಕ್ರಮ ಇದ್ದ ಮನೆಗೆ ಹೋಗಿ ವಿಚಾರಿಸಿದ್ದಾರೆ. ಆದ್ರೆ ಮೃತರು ಕಾರ್ಯಕ್ರಮ ಮುಗಿಸಿಕೊಂಡು ಅಲ್ಲಿಂದ ಮರಳಿ ಹೋಗಿರುವ ವಿಚಾರ ತಿಳಿದು ಬಂದಿದ್ದು ನಾಪತ್ತೆಯಾದ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಸುತ್ತಮುತ್ತಲಿನ ಪ್ರದೇಶದಲ್ಲಿ ಪೆರ್ನು ಗೌಡ ಅವರಿಗಾಗಿ ಹುಡುಕಾಟ ನಡೆಸಿದ್ದು, ಎಲ್ಲಿಯೂ ಸುಳಿವು ಸಿಕ್ಕಿರಲಿಲ್ಲ.

ಆದರೆ ಇಂದು ಸುಮಾರು ಮಧ್ಯಾಹ್ನ 3 ಗಂಟೆ ವೇಳೆಗೆ ಮಹಾಬಲ ಗೌಡ ಎಂಬವರ ಕೆರೆಯಲ್ಲಿ ಪೆರ್ನು ಗೌಡ ಅವರ ಶವರ ತೇಲುತ್ತಿದ್ದ ದೃಶ್ಯ ಕಂಡು ಬಂದಿದೆ.

ಇದು ಆತ್ಮಹತ್ಯೆಯೋ ಅಥವಾ ಆಕಸ್ಮಿಕ ಅಪಘಾತವೋ ಎಂಬುದು ತನಿಖೆ ಮೂಲಕವಷ್ಟೇ ತಿಳಿಯಬೇಕಿದೆ.
ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದು, ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ.

ದುರದೃಷ್ಟವೆಂದರೆ ಮೃತರ ಮಗ ಕೇವಲ ಎರಡು ತಿಂಗಳ ಹಿಂದೆ ಜಾಂಡೀಸ್ ಬಂದು ತೀರಿಹೋಗಿದ್ದರು. ಮೃತರ ಪತ್ನಿ ಬಿಪಿ ಶುಗರ್ ಕಾಯಿಲೆಯಿಂದ ಈಗ ಮಂಗಳೂರಿನಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಪೆರ್ಣು ಗೌಡರು ಮನೆಯ ಈ ಪರಿಸ್ಥಿತಿಗೆ ತುಂಬಾ ನೊಂದುಕೊಂಡಿದ್ದರು.

Leave A Reply

Your email address will not be published.