ಸೌದಿ ರಸ್ತೆ ಅಪಘಾತದಲ್ಲಿ ಇಬ್ಬರು ಕೇರಳದ ನರ್ಸುಗಳ ಬಲಿ

ಸೌದಿ ಅರೇಬಿಯಾದ ನಜ್ರಾನ್‌ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ನರ್ಸ್ ಗಳು ಸಾವನ್ನಪ್ಪಿದ್ದಾರೆ.

 

ಮೃತರನ್ನು ತಿರುವನಂತಪುರಂ ಮೂಲದ ಅಶ್ವತಿ ವಿಜಯನ್ (31) ಮತ್ತು ಕೊಟ್ಟಾಯಂ ಮೂಲದ ಶಿನ್ಸಿ ಫಿಲಿಪ್ (28) ಎಂದು ಗುರುತಿಸಲಾಗಿದೆ.

ಮೃತರು ಕಿಂಗ್ ಖಾಲಿದ್ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನಿತರ ನರ್ಸ್ ಗಳ ಜತೆ ಅವರು ಆಸ್ಪತ್ರೆಯತ್ತ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದರು. ಇವರು ಪ್ರಯಾಣಿಸುತ್ತಿದ್ದ ವಾಹನವು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಈ ದುರ್ಘಟನೆಯಲ್ಲಿ ಈ ಇಬ್ಬರು ಬಲಿಯಾಗಿದ್ದಾರೆ.

ಇನ್ನು ಅದೇ ನಜ್ರಾನ್‌ನ ಕಿಂಗ್ ಖಾಲಿದ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ನರ್ಸ್ ಗಳು ಮತ್ತು ವಾಹನದ ಚಾಲಕ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದ ಎಲ್ಲಾ ಪ್ರಯಾಣಿಕರು ಕೇರಳಿಗರಾಗಿದ್ದರು ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

Leave A Reply

Your email address will not be published.