ಬೆಳ್ತಂಗಡಿ | ಸಿಯೋ ನ್ ಆಶ್ರಮದ ಮತ್ತೆ 40 ಜನರಿಗೆ ಕೊರೋನಾ ಸೋಂಕು ; 18 ಜನ ಆಸ್ಪತ್ರೆಗೆ, ಉಳಿದವರು ರಜತಾದ್ರಿಗೆ ಶಿಫ್ಟ್

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮದ ಬೆನ್ನು ಬಿಡುತ್ತಿಲ್ಲ. ಮಾರಕ ಕೊರಾನಾಗೆ ಇದೀಗ ಮತ್ತೆ 40 ಜನರು ಭಾದೆ ಅನುಭವಿಸಿದ್ದಾರೆ.

 

ಈಗ ಕೋರೋನಾ ಸೋಂಕಿತರ ಆದ 40 ಜನರ ಪೈಕಿ 18 ಜನರು ಜ್ವರ ಶೀತ ಮುಂತಾದ ಭಾಗಗಳಿಂದ ತೊಂದರೆ ಅನುಭವಿಸುತ್ತಿದ್ದ ಕಾರಣ ಅವರುಗಳನ್ನು ಅಂಬುಲೆನ್ಸ್ ನ ಮೂಲಕ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಉಳಿದ 22 ಜನರನ್ನು ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿ ಅವರನ್ನು ಕ್ವರಂಟೈನ್ ಮಾಡಲಾಗುವುದು.

ಸಿಯೋನ್ ಆಶ್ರಮದಲ್ಲಿ ಒಟ್ಟು 270 ಆಶ್ರಮವಾಸಿಗಳಿದ್ದು, ಅವರಲ್ಲಿ ಈ ಹಿಂದೆ ಒಟ್ಟು 194 ಜನ ಪಾಸಿಟಿವ್ ಆಗಿದ್ದರು. ಅವರನ್ನು ಧರ್ಮಸ್ಥಳದ ರಜತಾದ್ರಿ ವಸತಿ ಗ್ರಹಕ್ಕೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಕ್ವರಂಟೈನ್ ನಡೆಯುತ್ತಿದೆ. ಇದೀಗ ಮತ್ತೆ 40 ಜನರು ಪಾಸಿಟಿವ್ ಆಗಿರುವುದು ಆತಂಕ ಮೂಡಿಸಿದೆ.

Leave A Reply

Your email address will not be published.