ಒಂದು ರಾತ್ರಿಗೆ 2 ಲಕ್ಷ ರೇಟ್ | ವೇಶ್ಯಾವಾಟಿಕೆ ದಂಧೆಯಲ್ಲಿ ಸಿಕ್ಕಿ ಬಿದ್ದ ಸೀರಿಯಲ್ ನಟಿಯರು

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಖಚಿತ ಮಾಹಿತಿಯ ಆಧಾರದ ಮೇರೆಗೆ ಮುಂಬೈ, ಥಾನೆ ನಗರದ ನೌಪಡದಲ್ಲಿನ ಫ್ಲ್ಯಾಟ್ ಮೇಲೆ ನಡೆದ ದಾಳಿಯ ಸಂಧರ್ಭ ನಟಿಯರಿಬ್ಬರ ಬಣ್ಣದ ಮುಖವಾಡ ಕಳಚಿ ಬಿದ್ದಿದೆ. ನಟಿಯರು ವೇಶ್ಯಾವಾಟಿಕೆ ಮಾಡುತ್ತಿದ್ದುದು ಪತ್ತೆಯಾಗಿದೆ.
ಈ ಸಂಬಂಧ ಈಗ ಇಬ್ಬರು ನಟಿಯರು, ಇಬ್ಬರು ಮಹಿಳಾ ದಲ್ಲಾಳಿಗಳು ಮತ್ತು ಒಬ್ಬ ಗಂಡಸು ದಲ್ಲಾಳಿಯನ್ನು ಪೊಲೀಸರು ಬಂಧಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದವರು ಸಿನಿಮಾ ನಟಿಯರನ್ನು ದಂಧೆಗೆ ಬಳಸಿಕೊಳ್ಳುತ್ತಿದ್ದರು.
ತಮಗೆ ದೊರೆತ ಖಚಿತ ಸುಳಿವಿನ ಆಧಾರದ ಮೇಲೆ ಪೊಲೀಸರು ಗ್ರಾಹಕನ ವೇಶದಲ್ಲಿ ಮುಂಬೈ ನಗರದ ಥಾನೆಯ ಪಂಚ್ ಪಕ್ಡಿ ಎಂಬಲ್ಲಿರುವ ಫ್ಲಾಟ್ ಒಂದಕ್ಕೆ ತೆರಳಿದ್ದರು. ಒಂದು ಇಡೀ ರಾತ್ರಿ ಜತೆಗಿರಲು ಅವರು 2 ಲಕ್ಷ ರೂಪಾಯಿಗಳನ್ನು ಏಜೆಂಟರು ಡಿಮ್ಯಾಂಡ್ ಮಾಡಿದ್ದರು. ಹಾಗೆ ರಾತ್ರಿಗೆ 2 ಲಕ್ಷ ಕೇಳಿ ಅಂತಿಮವಾಗಿ 1.80 ಲಕ್ಷಕ್ಕೆ ಚೌಕಾಶಿ ಫೈನಲ್ ಆಗಿತ್ತು. ಆ ಆ ನಂತರ ನಟಿಯರನ್ನು ಏಜೆಂಟರು ಸಂಪರ್ಕಿಸಿ ಒಪ್ಪಿಸಿದರು. ಕೊನೆಗೆ ಎಲ್ಲರೂ ಒಟ್ಟಿಗೆ ಸಿಗುವಂತೆ ಮಾಡಿ ಪೊಲೀಸರು ಲಾಕ್ ಮಾಡಿದ್ದಾರೆ.
ದಂಧೆ ನಡೆಸುತ್ತಿದ್ದ ಇಬ್ಬರು ಮಹಿಳೆಯರು ಮತ್ತು ಒಬ್ಬ ಬೋಕರ್ ನನ್ನು 7 ದಿನ ಪೊಲೀಸ್ ಕಸ್ಟಡಿಗೆ ನೀಡಿರುವ ಕೋರ್ಟ್, ಆ ನಟಿಯರನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸುವಂತೆ ಹೇಳಿದೆ.