ಆನ್ ಲೈನ್ ನಲ್ಲಿ ಶೀಘ್ರದಲ್ಲೇ ದೊರೆಯಲಿದೆ ಆನಂದಯ್ಯ ಆಯುರ್ವೇದ ಔಷಧ | ಜನಸಂದಣಿ ಹಾಗೂ ಭದ್ರತಾ ದೃಷ್ಟಿಯಿಂದ ಆನಂದಯ್ಯ ಬೇರೆಡೆಗೆ ಶಿಫ್ಟ್
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ನಲ್ಲಿ ನಾಟಿ ಔಷಧ ತಜ್ಞ ಆನಂದಯ್ಯ ಇಂದಿನಿಂದ(ಜೂ.3) ಮತ್ತೆ ಔಷಧ ಉತ್ಪಾದನೆಯನ್ನು ಆರಂಭಿಸಿದ್ದಾರೆ. ಸೋಮವಾರದಿಂದ(ಜೂ.7) ಔಷಧ ವಿತರಣೆ ಆರಂಭಗೊಳ್ಳಲಿದೆ. ಶೀಘ್ರದಲ್ಲೇ ಆನ್ ಲೈನ್ ನಲ್ಲೂ ಔಷಧ ಪೂರೈಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
ಮರೀನಾ ಕೃಷ್ಣಪಟ್ಟಣಂ ಗ್ರಾಮದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದು, ಗ್ರಾಮಕ್ಕೆ ಪ್ರವೇಶಿಸಲು ಯಾರಿಗೂ ಅನುಮತಿ ನೀಡುತ್ತಿಲ್ಲ. ಹಾಗೆಯೇ ಆಧಾರ್ ಕಾರ್ಡ್ ತಂದವರಿಗಷ್ಟೇ ಔಷಧಕ್ಕೆ ಅನುಮತಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ.
ಔಷಧ ನೀಡಿಕೆ ವಿಚಾರ ತಿಳಿದ ಜನ ದೇಶದ ಮೂಲೆಮೂಲೆಗಳಿಂದ ಜನರು ಕೃಷ್ಣಪಟ್ಟಣಂನತ್ತ ಧಾವಿಸುತ್ತಿದ್ದಾರೆ. ಹೀಗಾಗಿ ಆಂಧ್ರ ಸರ್ಕಾರ ಭದ್ರತೆಯ ದೃಷ್ಟಿಯಿಂದ ಆನಂದಯ್ಯ ಅವರನ್ನು ಅವರ ಹಳ್ಳಿ ಮರೀನಾ ಕೃಷ್ಣಪಟ್ಟಣಂನಿಂದ ಬಂದರಿಗೆ ಶಿಫ್ಟ್ ಮಾಡಿದೆ.
ಆಂಧ್ರ ಸರ್ಕಾರ ಮತ್ತು ಆಂಧ್ರ ಹೈಕೋರ್ಟ್ ಅನುಮತಿ ಮೇರೆಗೆ ಕೊರೋನಾ ವಿರುದ್ಧ ಹೋರಾಡಲು ಆನಂದಯ್ಯ ಈ ನಾಟಿ ಆಯುರ್ವೇದ ಔಷಧವನ್ನು ನೀಡುತ್ತಿದ್ದಾರದರೂ, ಅವರ ಐ ಡ್ರೋಪ್ ಗೆ ಇನ್ನು ಕೇಂದ್ರ ಸರ್ಕಾರದ ಒಪ್ಪಿಗೆ ದೊರೆತಿಲ್ಲ.