ಇನ್ನು ಮುಂದೆ ಹೋಂ ಡೆಲಿವರಿಯಲ್ಲಿ ದೊರೆಯಲಿದೆ ಮದ್ಯ | ಮದ್ಯ ಪ್ರಿಯರಿಗೊಂದು ಸಿಹಿ ಸುದ್ದಿ

ಕೋವಿಡ್-19 ನಿರ್ಬಂಧಗಳು ಜಾರಿಯಲ್ಲಿರುವುದರಿಂದ ದೇಶೀಯ ಮದ್ಯ ಮತ್ತು ವಿದೇಶಿ ಮದ್ಯಗಳನ್ನು ಹೋಂ ಡೆಲಿವರಿ ಮಾಡಲು ದೆಹಲಿ ಸರ್ಕಾರ ಅನುಮತಿ ನೀಡಿದೆ.

ದೆಹಲಿಯ ಹೊಸ ಅಬಕಾರಿ ನಿಯಮಗಳ ಅನುಗುಣವಾಗಿ ಆನ್‍ಲೈನ್ ಹಾಗೂ ಪೋರ್ಟಲ್‍ಗಳ ಮೂಲಕ ಮದ್ಯವನ್ನು ಆರ್ಡರ್ ಮಾಡಿ ಹೋಂ ಡೆಲಿವರಿ ಪಡೆಯಬಹುದು ಎಂದು ತಿಳಿಸಲಾಗಿದೆ. ಈ ಹಿಂದೆ ಕೂಡ ಮದ್ಯವನ್ನು ಹೋಂ ಡೆಲಿವರಿ ನೀಡಲಾಗುತ್ತಿತ್ತು. ಆದರೆ ಎಲ್-13 ಪರವಾನಗಿ ಹೊಂದಿದವವರಿಗೆ ಮಾತ್ರ ಹೋಂ ಡೆಲಿವರಿ ಅನುಮತಿ ನೀಡಿತ್ತು.

ಆದರೆ ಈ ಬಾರಿ ಹೊಸ ಅಬಕಾರಿ ನಿಯಮಗಳ ಪ್ರಕಾರ ಎಲ್-14 ಪರವಾನಗಿ ಹೊಂದಿರುವವರಿಗೆ ಮಾತ್ರ ದೆಹಲಿಯಲ್ಲಿ ಮದ್ಯವನ್ನು ಹೋಂ ಡೆಲಿವರಿ ಮಾಡಲು ಅವಕಾಶ ನೀಡಲಾಗಿದೆ. ಕಳೆದ ವರ್ಷ ಮೊದಲ ಬಾರಿ ಲಾಕ್‍ಡೌನ್ ಘೋಷಿಸಿದಾಗ ಅಂಗಡಿಗಳಲ್ಲಿ ಮದ್ಯಕೊಳ್ಳಲು ಜನ ಮುಗಿಬಿದ್ದಿದ್ದರು. ಈ ವೇಳೆ ಕೊರೊನಾ ಸೋಂಕಿನ ಹರಡುವಿಕೆ ಭೀತಿಯಿಂದ ಸುಪ್ರೀಂ ಕೋರ್ಟ್ ಮದ್ಯವನ್ನು ಹೋಂ ಡೆಲಿವರಿ ಮಾಡಲು ಸಲಹೆ ನೀಡಿತ್ತು.

ಈ ರೀತಿ ಹೋಂ ಡೆಲಿವರಿ ನಿರ್ಧಾರದಿಂದ ಮದ್ಯಪ್ರಿಯರಿಗೆ ನಶೆಯಲ್ಲಿ ತೇಲಾಡಿದಂತಾಗಿದೆ.
ಲಾಕ್ ಡೌನ್ ಸಮಯದಲ್ಲಿ ನಮ್ಮ ರಾಜ್ಯದಲ್ಲೂ ಈ ಸೌಲಭ್ಯ ದೊರೆತರೆ ಸಾಕಪ್ಪ ಎಂದು ಎಷ್ಟೋ ಜನ ಅಂದುಕೊಂಡಿರಬಹುದು.

Leave A Reply

Your email address will not be published.