ಸುಳ್ಯ | ರಕ್ತದೊತ್ತಡ ಇಳಿಕೆ ವೈದ್ಯಕೀಯ ವಿದ್ಯಾರ್ಥಿನಿ ಮೃತ್ಯು

ಸುಳ್ಯ : ರಕ್ತದೊತ್ತಡ ಇಳಿಕೆಯಾಗಿ ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಸುಳ್ಯ ತಾಲೂಕಿನ ಕೂಜುಗೋಡು ಕಟ್ಟೆಮನೆಯ ಯುವತಿಯೋರ್ವಳು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ದಿನೇಶ್ ಕೂಜುಗೋಡು ಕಟ್ಟೆಮನೆ ಎಂಬವರ ಪುತ್ರಿ ಪ್ರತೀಕ್ಷಾ (21 ವರ್ಷ) ಮಂಗಳೂರಿನ ಶ್ರೀನಿವಾಸ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದಳು.

ಬೆಂಗಳೂರಿನ ಮನೆಗೆ ಹೋಗಿದ್ದ ಅವರು ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ದಿಢೀರ್ ರಕ್ತದೊತ್ತಡ ಕುಸಿಕ್ಕೊಳಗಾದರು ,ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

Leave A Reply

Your email address will not be published.