ಬೆಳ್ತಂಗಡಿ | ಡೆಂಗ್ಯೂಗೆ ಅವಿವಾಹಿತ ಯುವಕ ಬಲಿ
ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಬೀಜದಡಿ ಮನೆಯ ಟೊಕ್ಕಯ್ಯ ಗೌಡರ ಮಗ ಅವಿವಾಹಿತ ಪ್ರಸಾದ್ ಗೌಡ (30) ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದು ಮೂರು ದಿನಗಳ ಹಿಂದೆ ಡೆಂಗ್ಯೂ ಜ್ವರ ಕಾಣಿಸಿಕೊಂಡಾಗ, ಉಜಿರೆ ಬೆನಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಮಂಗಳೂರು KMC ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ದಾಖಲಿಸಲಾಗಿತ್ತು. ಆದರೆ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.
ದೇಶಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಸಾವಿನ ಸಂಖ್ಯೆ ಬೆಳ್ತಂಗಡಿಯಲ್ಲೂ ಹೆಚ್ಚುತ್ತಿದ್ದು, ಈ ನಡುವೆ ಡೆಂಗ್ಯೂ ಜ್ವರದಿಂದ ಯುವಕ ಸಾವನ್ನಪ್ಪಿರುವುದರಿಂದ ತಾಲೂಕಿನ ಜನತೆ ಆತಂಕಕ್ಕೀಡಾಗಿದ್ದಾರೆ.