ಹಸೆಮನೆಯಲ್ಲೇ ಅಸುನೀಗಿದ ವಧು | ವರನಿಗೆ ವಧುವಿನ ತಂಗಿಯ ಜತೆ ಮದುವೆ ಮಾಡಿದ ಮನೆಯವರು

ಹಸೆಮನೆಯಲ್ಲಿ ಮದುವೆಯ ವಿಧಿ ವಿಧಾನ ನಡೆಯುತ್ತಿದ್ದಾಗಲೇ ವಧು ಕುಸಿದು ಬಿದ್ದು ಸಾವನ್ನಪ್ಪಿದ್ದ ಬಳಿಕ ವಧುವಿನ ಸಹೋದರಿಯನ್ನು ವರ ಮದುವೆಯಾದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಉತ್ತರಪ್ರದೇಶದ ಇಟಾವಾ ಜಿಲ್ಲೆಯ ಭರ್ತಾನಾದ ಸಮಸ್ಪುರ್ ನಲ್ಲಿ ಎಂಬಲ್ಲಿ ಇಂತಹ ವಿಲಕ್ಷಣ ಘಟನೆ ನಡೆದಿದೆ ಎನ್ನಲಾಗಿದೆ.

ವಧು-ವರರು ಸಂಪ್ರದಾಯದಂತೆ ಹಸೆಮಣೆಯಲ್ಲಿ ಕುಳಿತು ವಿಧಿವಿಧಾನ ನಡೆಯುತ್ತಿದ್ದ ಸಂದರ್ಭದಲ್ಲಿ ವಧು ಸುರಭಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು,
ವೈದ್ಯರ ಬಳಿ ಕರೆದೊಯ್ದಾಗ ಆಕೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು.

ಈ ಕುರಿತು ಮಾಧ್ಯಮದ ಜತೆ ಮಾತನಾಡಿದ ವಧುವಿನ ಸಹೋದರ ಸೌರಭ್, ದಿಢೀರ್ ಸಂಭವಿಸಿದ ಘಟನೆಯಿಂದ ಏನು ಮಾಡಬೇಕೆಂದು ನಮಗೆ ತೋಚಲಿಲ್ಲ. ನಂತರ ಎರಡೂ ಮನೆಯವರು ಒಟ್ಟಿಗೆ ಕುಳಿದು ಚರ್ಚಿಸಿದಾಗ, ನನ್ನ ಕಿರಿಯ
ಸಹೋದರಿ ನಿಶಾಳನ್ನು ವರ ಮಂಜೇಶ್ ಕುಮಾರ್ ಜತೆ ವಿವಾಹ ನೆರವೇರಿಸಲು ನಿಶ್ಚಯಿಸಿದರು. ಸಂಕಷ್ಟ ಹಾಗೂ
ದುಃಖದ ನಡುವೆಯೂ ಸುರಭಿಯ ಶವವನ್ನು ಕೋಣೆಯಲ್ಲಿಟ್ಟು, ನಂತರ ಮಂಜೇಶ್ ಮತ್ತು ನಿಶಾಳ ವಿವಾಹ ಕಾರ್ಯ ಪೂರ್ಣಗೊಳಿಸಲಾಯಿತು. ಮದುವೆಯ ನಂತರ ಸುರಭಿಯ ಅಂತ್ಯಕ್ರಿಯೆ ನಡೆಸಲಾಯಿತು ಎಂದಿದ್ದಾರೆ.

Leave A Reply

Your email address will not be published.